For Quick Alerts
ALLOW NOTIFICATIONS  
For Daily Alerts

ರೆಡ್‌ಮಿ ನೋಟ್ 10, ರೆಡ್‌ಮಿ ನೋಟ್‌ 10 ಪ್ರೊ, ರೆಡ್‌ಮಿ ನೋಟ್ 10 ಮ್ಯಾಕ್ಸ್‌ ಭಾರತದಲ್ಲಿ ಬಿಡುಗಡೆ

|

ಬಹುನಿರೀಕ್ಷಿತ ಮೊಬೈಲ್‌ ರೆಡ್‌ಮಿ ನೋಟ್ 10 ಸರಣಿಗಳು ಭಾರತದಲ್ಲಿ ಇಂದು ಬಿಡುಗಡೆ ಆಗಿವೆ. ಪ್ರತಿ ಬಾರಿಯು ಶಿಯೋಮಿ ತನ್ನ ರೆಡ್‌ಮಿ ನೋಟ್‌ ಮೊಬೈಲ್‌ಗಳನ್ನು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದ್ದು, ನೋಟ್‌ 10 ಕುರಿತಾಗಿ ಗ್ರಾಹಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ರೆಡ್‌ಮಿ ನೋಟ್‌ 10, ರೆಡ್‌ಮಿ ನೋಟ್‌ 10 ಪ್ರೊ, ರೆಡ್‌ಮಿ ನೋಟ್‌ 10 ಮ್ಯಾಕ್ಸ್‌ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಿದ್ದು, ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಶಿಯೊಮಿ ಕಳೆದ ವರ್ಷ ಪರಿಚಯಿಸಿದ ರೆಡ್‌ಮಿ ನೋಟ್‌ 9 ಬಳಿಕ ರೆಡ್‌ಮಿ ನೋಟ್ 10 ಸರಣಿಯು ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಹೊಸ ಸರಣಿಯಲ್ಲಿ ರೆಡ್‌ಮಿ ನೋಟ್ 10 ಅತ್ಯಂತ ಒಳ್ಳೆ ಆಯ್ಕೆಯಾಗಿದ್ದು, 60Hz ರಿಫ್ರೆಶ್ ದರ ಮತ್ತು 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದೆ.

ಇನ್ನು ರೆಡ್‌ಮಿ ನೋಟ್ 10 ಪ್ರೊ ಮತ್ತು ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್ 120Hz ರಿಫ್ರೆಶ್ ದರ ಡಿಸ್‌ಪ್ಲೇ ಹೊಂದಿದ್ದು, 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಬರುತ್ತವೆ. ರೆಡ್ಮಿ ನೋಟ್ 10 ಸರಣಿಯು 33W ವೇಗದ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ.

ರೆಡ್‌ಮಿ ನೋಟ್‌ 10 ಬೆಲೆ ಎಷ್ಟು?

ರೆಡ್‌ಮಿ ನೋಟ್‌ 10 ಬೆಲೆ ಎಷ್ಟು?

ಭಾರತದಲ್ಲಿ ರೆಡ್‌ಮಿ ನೋಟ್ 10 ಬೆಲೆ 4 ಜಿಬಿ RAM + 64 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 11,999 ರೂಪಾಯಿ ಮತ್ತು 6 ಜಿಬಿ RAM + 128 ಜಿಬಿ ಸ್ಟೋರೇಜ್ ಮಾದರಿಗೆ 13,999 ರೂ. ಹೊಂದಿದೆ. ಈ ಫೋನ್ ಆಕ್ವಾ ಗ್ರೀನ್, ಫ್ರಾಸ್ಟ್ ವೈಟ್ ಮತ್ತು ಶ್ಯಾಡೋ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

ರೆಡ್‌ಮಿ ನೋಟ್‌ 10 ಪ್ರೊ ಬೆಲೆ ಎಷ್ಟು?

ರೆಡ್‌ಮಿ ನೋಟ್‌ 10 ಪ್ರೊ ಬೆಲೆ ಎಷ್ಟು?

ಮತ್ತೊಂದೆಡೆ ರೆಡ್‌ಮಿ ನೋಟ್ 10 ಪ್ರೊ ಬೆಲೆ 6 ಜಿಬಿ RAM + 64 ಜಿಬಿ ಸ್ಟೋರೇಜ್ ಮಾದರಿಗೆ 15,999 ರೂ. ಆಗಿದ್ದು, 6 ಜಿಬಿ RAM + 128 ಜಿಬಿ ಸ್ಟೋರೇಜ್ 16,999 ರೂಪಾಯಿನಷ್ಟಿದೆ. ಇದರ ಜೊತೆಗೆ ಮತ್ತೊಂದು ಆಯ್ಕೆ 8 ಜಿಬಿ RAM + 128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 18,999 ರೂ. ನಷ್ಟಿದೆ.

ರೆಡ್‌ಮಿ ನೋಟ್‌ 10 ಮ್ಯಾಕ್ಸ್ ಬೆಲೆ ಎಷ್ಟು?
 

ರೆಡ್‌ಮಿ ನೋಟ್‌ 10 ಮ್ಯಾಕ್ಸ್ ಬೆಲೆ ಎಷ್ಟು?

ರೆಡ್ಮಿ ನೋಟ್ 10 ಮ್ಯಾಕ್ಸ್ ಹೆಚ್ಚಿನ ಬೆಲೆಯನ್ನು ಹೊಂದಿದ್ದು, 6 ಜಿಬಿ RAM + 64 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 18,999 ರೂ. ಆಗಿದ್ದು, 6 ಜಿಬಿ RAM + 128 ಜಿಬಿ ಸ್ಟೋರೇಜ್ 19,999, ಮತ್ತು 8 ಜಿಬಿ RAM + 128 ಜಿಬಿ ಸ್ಟೋರೇಜ್ ಮಾದರಿಗೆ 21,999 ರೂ. ನಷ್ಟಿದೆ.

ರೆಡ್ಮಿ ನೋಟ್ 10 ಪ್ರೊ ಮತ್ತು ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಎರಡೂ ಡಾರ್ಕ್ ನೈಟ್, ಗ್ಲೇಶಿಯಲ್ ಬ್ಲೂ ಮತ್ತು ವಿಂಟೇಜ್ ಬ್ರೋಂಜ್ಹ್‌ ಬಣ್ಣಗಳ ಆಯ್ಕೆ ಹೊಂದಿದೆ.

 

ರೆಡ್‌ಮಿ ನೋಟ್‌ 10 ಫೀಚರ್ಸ್

ರೆಡ್‌ಮಿ ನೋಟ್‌ 10 ಫೀಚರ್ಸ್

ಡ್ಯುಯಲ್-ಸಿಮ್ (ನ್ಯಾನೊ) ರೆಡ್‌ಮಿ ನೋಟ್ 10 ಆಂಡ್ರಾಯ್ಡ್ 11 ನಲ್ಲಿ MIUI 12 ರೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 6.43 ಇಂಚಿನ ಪೂರ್ಣ ಎಚ್‌ಡಿ + (1,080x2,400 ಪಿಕ್ಸೆಲ್‌ಗಳು) 20: 9 ಆಕಾರ ಅನುಪಾತದೊಂದಿಗೆ ಬರುತ್ತದೆ. ಈ ಫೋನ್‌ನ ಡಿಸ್‌ಪ್ಲೇಯಲ್ಲಿ ಕಂಪನಿಯು ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ಅನ್ನು ನೀಡಿದೆ.

ಈ ಫೋನ್ ಆಕ್ಟ್ರಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 678 SoC ಪ್ರೊಸೆಸರ್ ಚಿಪ್‌ಸೆಟ್‌ ಅನ್ನು ಹೊಂದಿದೆ. ಫೋನ್‌ನ ಪ್ರೊಸೆಸರ್ ಅನ್ನು ಅಡ್ರಿನೊ 612 ಜಿಪಿಯು ಮತ್ತು ಎಲ್‌ಪಿಡಿಡಿಆರ್ 4 ಎಕ್ಸ್‌ RAMನೊಂದಿಗೆ 6 ಜಿಬಿ ವರೆಗೆ ಉತ್ತಮಗೊಳಿಸುತ್ತದೆ.

ಇದರಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಸೋನಿ ಐಎಂಎಕ್ಸ್ 582 ಸೆನ್ಸಾರ್ ಇದೆ, ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಇದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಫೋನ್ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

 

5000 ಎಮ್ಎಹೆಚ್ ಬ್ಯಾಟರಿ

5000 ಎಮ್ಎಹೆಚ್ ಬ್ಯಾಟರಿ

ರೆಡ್‌ಮಿ ನೋಟ್ 10 ರಲ್ಲಿ, ಕಂಪನಿಯು 5000 ಎಮ್ಎಹೆಚ್ ಬ್ಯಾಟರಿಯನ್ನು ಸಹ ನೀಡಿದೆ, ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದಲ್ಲದೆ ಕಂಪನಿಯು ಈ ಫೋನ್‌ನಲ್ಲಿ ಸಂಪರ್ಕಕ್ಕಾಗಿ 4 ಜಿ ವೋಲ್ಟಿಇ, ವೈ-ಫೈ, ಬ್ಲೂಟೂತ್ 5.0, ಯುಎಸ್‌ಬಿ ಟೈಪ್-ಸಿ, ಜಿಪಿಎಸ್ / ಎ-ಜಿಪಿಎಸ್, ಇನ್ಫ್ರಾರೆಡ್ (ಐಆರ್), ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಎಲ್ಲಾ ಸಂಪರ್ಕ ಹೊಂದುವ ವೈಶಿಷ್ಟ್ಯಗಳನ್ನು ಒದಗಿಸಿದೆ.

ರೆಡ್‌ಮಿ ನೋಟ್‌ 10 ಪ್ರೊ ಫೀಚರ್ಸ್

ರೆಡ್‌ಮಿ ನೋಟ್‌ 10 ಪ್ರೊ ಫೀಚರ್ಸ್

ಡ್ಯುಯಲ್-ಸಿಮ್ (ನ್ಯಾನೊ) ರೆಡ್‌ಮಿ ನೋಟ್ 10 ಪ್ರೊ ಆಂಡ್ರಾಯ್ಡ್ 11 ಆಧಾರಿತ ಎಂಐಯುಐ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.67 ಇಂಚಿನ ಪೂರ್ಣ ಎಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 1200 ನಿಟ್ಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲಾಗಿದೆ.

ರೆಡ್ಮಿ ನೋಟ್ 10 ಪ್ರೊ ಅನ್ನು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732 ಜಿ SoC ನಿಂದ ನಿಯಂತ್ರಿಸಲಾಗುತ್ತದೆ, ಇದರೊಂದಿಗೆ ಆಡ್ರಿನೊ 618 ಜಿಪಿಯು ಮತ್ತು 8 ಜಿಬಿ ವರೆಗೆ ಎಪ್‌ಡಿಡಿಡಿಆರ್ 4 ಎಕ್ಸ್ RAM ಇದೆ.

ರೆಡ್‌ಮಿ ನೋಟ್ 10 ಪ್ರೊ 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

 

ರೆಡ್‌ಮಿ ನೋಟ್ 10 ಮ್ಯಾಕ್ಸ್‌ ಫೀಚರ್ಸ್

ರೆಡ್‌ಮಿ ನೋಟ್ 10 ಮ್ಯಾಕ್ಸ್‌ ಫೀಚರ್ಸ್

ರೆಡ್‌ಮಿ ನೋಟ್ 10 ಮ್ಯಾಕ್ಸ್‌ 108 ಮೆಗಾಪಿಕ್ಸೆಲ್ ಪ್ರೈಮರಿ ಸ್ಯಾಮ್‌ಸಂಗ್ ಎಚ್‌ಎಂ 2 ಕ್ಯಾಮೆರಾ ಹೊಂದಿದೆ. 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹೊಂದಿದ್ದು, 5020mAh ಬ್ಯಾಟರಿ ಹೊಂದಿದೆ.

ಇದರಲ್ಲಿ ನೈಟ್ ಮೋಡ್ 2.0, ವಿಎಲ್ಒಜಿ ಮೋಡ್, ಮ್ಯಾಜಿಕ್ ಕ್ಲೋನ್ ಮೋಡ್, ಲಾಂಗ್ ಎಕ್ಸ್‌ಪೋಸರ್ ಮೋಡ್, ವಿಡಿಯೋ ಪ್ರೊ ಮೋಡ್ ಮತ್ತು ಡ್ಯುಯಲ್ ವೀಡಿಯೋ ಸೇರಿವೆ.

 

English summary

Redmi Note 10 Launched in India: Check out Price, Specifications and Features in Kannada

Redmi Note 10, Redmi Note 10 Pro, and the Redmi Note 10 Pro Max were launched in India on Thursday. Price and specifications here
Story first published: Thursday, March 4, 2021, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X