ಶಿಯೋಮಿ ಹೊಸ ರೆಡ್‌ಮಿ ಸ್ಮಾರ್ಟ್ ಟಿವಿ ಸೀರಿಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ರೆಡ್‌ಮಿ ಸ್ಮಾರ್ಟ್ ಟಿವಿ ಮೂರು ಗಾತ್ರಗಳಲ್ಲಿ ಬಿಡುಗಡೆಯಾಗಲಿದ್ದು, 65 ಇಂಚು, 55 ಇಂಚು ಮತ್ತು 50 ಇಂಚಿನ ಡಿಸ್‌ಪ್ಲೇ ಹೊಂದಿದೆ.
ಹೊಸ ರೆಡ್‌ಮಿ ಸ್ಮಾರ್ಟ್ ಟಿವಿಗಳು ಮಾರ್ಚ್ 26ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ರೆಡ್ ಮಿ ಹೊಸ ಸ್ಮಾರ್ಟ್ ಟಿವಿಗಳು mi.com, Amazon.in, Min Home ಮತ್ತು Mi Studio ನಲ್ಲಿ ಮಾರಾಟವಾಗಲಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಮಾರ್ಚ್ 26 ರಂದು 2,000 ರೂಪಾಯಿ ತ್ವರಿತ ರಿಯಾಯಿತಿ ಪಡೆಯಬಹುದು.

ಟಿವಿಗಳು 4ಕೆ ಎಚ್‌ಡಿಆರ್, ಎಚ್‌ಡಿಆರ್ 10+, ಡಾಲ್ಬಿ ವಿಷನ್ ಮತ್ತು 30 ಡಬ್ಲ್ಯೂ ಡಾಲ್ಬಿ ಆಡಿಯೋ ಸ್ಪೀಕರ್ ಅನ್ನು ಹೊಂದಿದೆ. ಸಾಫ್ಟ್‌ವೇರ್ ವಿಷಯದಲ್ಲಿ ಆಂಡ್ರಾಯ್ಡ್ ಟಿವಿ 10 ಮೂಲಕ ನಿರ್ಮಿಸಲಾಗಿದೆ.
ಹೊಸ ತಲೆಮಾರಿನ ಗೇಮಿಂಗ್ ಕನ್ಸೋಲ್‌ಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ, ಟಿವಿಗಳು ಎಚ್‌ಡಿಎಂಐ 2.1 ಪೋರ್ಟ್‌ಗಳನ್ನು ಸಹ ಪಡೆಯುತ್ತವೆ. ಆಟೋ ಲೋ ಲ್ಯಾಟೆನ್ಸಿ ಮೋಡ್ (ಎಎಲ್ಎಲ್ಎಂ), ಬ್ಲೂಟೂತ್ 5.0 ಮತ್ತು ಡ್ಯುಯಲ್ ಬ್ಯಾಂಡ್ ವೈಫೈ ಸೇರಿವೆ. ಈ ಟಿವಿಗಳಲ್ಲಿ 16 ಜಿಬಿ ಸ್ಟೋರೇಜ್ ಮತ್ತು 2 ಜಿಬಿ RAM ಹೊಂದಿದೆ.
ರೆಡ್‌ಮಿ ಹೊಸ ಸ್ಮಾರ್ಟ್ ಟಿವಿ ಸೀರಿಸ್ ಬೆಲೆ:
ರೆಡ್ಮಿ ಸ್ಮಾರ್ಟ್ ಟಿವಿ ಎಕ್ಸ್ 65 ಬೆಲೆ Rs 57,999
ರೆಡ್ಮಿ ಸ್ಮಾರ್ಟ್ ಟಿವಿ ಎಕ್ಸ್ 55 ಬೆಲೆ Rs 38,999
ರೆಡ್ಮಿ ಸ್ಮಾರ್ಟ್ ಟಿವಿ ಎಕ್ಸ್ 50 ಬೆಲೆ Rs 32,999


Click it and Unblock the Notifications