For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಕಮ್ಯುನಿಕೇಷನ್ಸ್ ದಿವಾಳಿ ನಿರ್ಣಯ ಪ್ರಕ್ರಿಯೆಗೆ ಬ್ಯಾಂಕ್ ಗಳಿಂದ ಅಡೆತಡೆ

By ಅನಿಲ್ ಆಚಾರ್
|

ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧ ದಿವಾಳಿ ನಿರ್ಣಯ ಪ್ರಕ್ರಿಯೆಗೆ ಮುಂದಾಗಿರುವಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳಿಂದ ಅಡೆತಡೆ ಎದುರಾಗಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಘಟಕಗಳಾದ ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ಇನ್ ಫ್ರಾಟೆಲ್ ಅನ್ನು ಕಳೆದ ವಾರ ವಂಚಕ ಖಾತೆಗಳು ಎಂದು ವರ್ಗೀಕರಣ ಮಾಡಲಾಗಿದೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

ಎಚ್ ಡಿಎಫ್ ಸಿ, ಆಕ್ಸಿಸ್ ಬ್ಯಾಂಕ್ ಗೆ ಬಡ್ಡಿ ಬಾಕಿ ಉಳಿಸಿದ ರಿಲಯನ್ಸ್ ಕ್ಯಾಪಿಟಲ್ಎಚ್ ಡಿಎಫ್ ಸಿ, ಆಕ್ಸಿಸ್ ಬ್ಯಾಂಕ್ ಗೆ ಬಡ್ಡಿ ಬಾಕಿ ಉಳಿಸಿದ ರಿಲಯನ್ಸ್ ಕ್ಯಾಪಿಟಲ್

ಇದೀಗ ಸಾಲಗಾರರು ತನಿಖೆ ಆರಂಭಿಸುವುದಕ್ಕೆ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ತೀರುವಳಿ ಅರ್ಜಿದಾರರಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಯುವಿ ಅಸೆಟ್ ರೀಕನ್ ಸ್ಟಕ್ಷನ್ ಕಂಪೆನಿ ಲಿಮಿಟೆಡ್ ನಿಂದ (UVARCL) ಈ ಕಂಪೆನಿಗಳ ವಿರುದ್ಧ ಯಾವ ತನಿಖೆಯೂ ಮಾಡಬಾರದು ಎಂಬ ಒತ್ತಡ ಇದೆ.

20ರಿಂದ 23 ಸಾವಿರ ಕೋಟಿ ರುಪಾಯಿ ನಷ್ಟ

20ರಿಂದ 23 ಸಾವಿರ ಕೋಟಿ ರುಪಾಯಿ ನಷ್ಟ

ಒಂದು ವೇಳೆ ಇನ್ನಷು ತಡವಾದಲ್ಲಿ ಸಾಲಗಾರರಿಗೆ ವಸೂಲಿಯೇ ಸಮಸ್ಯೆ ಆಗಲಿದೆ. ಆರ್ ಕಾಮ್ ಮತ್ತು ಅದರ ಘಟಕಗಳ ಆಸ್ತಿ ಮಾರಾಟದಿಂದ ಆಗಬಹುದಾದ ಸಂಗ್ರಹದಿಂದ 20ರಿಂದ 23 ಸಾವಿರ ಕೋಟಿ ರುಪಾಯಿ ನಷ್ಟ ಆಗಬಹುದು ಎಂಬ ನಿರೀಕ್ಷೆ ಸಾಲ ನೀಡಿದವರಿಗೆ ಇದೆ. ಫೈನಾನ್ಷಿಯಲ್ ಕ್ರೆಡಿಟರ್ಸ್ (ಹಣ ನೀಡಿದ ಸಾಲಗಾರರು) ತಮಗೆ 57,382 ಕೋಟಿ ರುಪಾಯಿ ಬಾಕಿ ಬರಬೇಕಿದೆ ಎಂದು ಹೇಳಿದ್ದಾರೆ. ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ಬಂದಲ್ಲಿ ಹಣ ಬರುವುದು ತಡವಾಗುತ್ತದೆ ಎಂಬ ಆತಂಕ ಸಾಲ ನೀಡಿದವರಿಗೆ ಇದೆ. ಏಕೆಂದರೆ, ಆ ಹಣವನ್ನು ಅಪರಾಧ ಮೂಲಕ ಬಂದದ್ದು ಎಂದು ತನಿಖಾ ಸಂಸ್ಥೆಗಳು ಪರಿಗಣಿಸುತ್ತವೆ. ವಸೂಲಾತಿ ತಡವಾಗುತ್ತದೆ ಎಂಬ ಆತಂಕ ಸಾಲಗಾರರಲ್ಲಿದೆ.

5500 ಕೋಟಿ ರುಪಾಯಿಯ ಪ್ರಶ್ನಾರ್ಹವಾದ ವ್ಯವಹಾರ

5500 ಕೋಟಿ ರುಪಾಯಿಯ ಪ್ರಶ್ನಾರ್ಹವಾದ ವ್ಯವಹಾರ

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹದಲ್ಲಿನ ಮೂರು ಸಂಸ್ಥೆಗಳಲ್ಲಿ 5500 ಕೋಟಿ ರುಪಾಯಿಯ ಪ್ರಶ್ನಾರ್ಹವಾದ ವ್ಯವಹಾರ ನಡೆದಿರುವ ಬಗ್ಗೆ ಆಡಿಟ್ ಫೋರೆನ್ಸಿಕ್ ವರದಿಯಲ್ಲಿ ಹೊಸದಾಗಿ ಆರೋಪ ಬಂದಿದೆ. 2017ರ ಮೇ ಮತ್ತು 2018ರ ಮಾರ್ಚ್ ಮಧ್ಯೆ ನಡೆದ ವ್ಯವಹಾರದಲ್ಲಿ ಮೂರು ಸಂಸ್ಥೆಗಳಲ್ಲಿನ ವಹಿವಾಟಿನಲ್ಲಿ ಗುಮಾನಿ ಮೂಡಿದೆ. ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟವು ಕಂಪೆನಿಯು ಹಣವನ್ನು ಬೇರೆಡೆಗೆ ತಿರುಗಿಸಿರುವ ಕುರಿತು ಗುಮಾನಿ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯುವುದಕ್ಕೆ ಆರ್ ಕಾಮ್, ಜಿಯೋ ಮತ್ತು UVARCL ಅನ್ನು ಸಂಪರ್ಕಿಸಲು ಯತ್ನಿಸಿದಾಗ ಯಾವುದೇ ಉತ್ತರ ದೊರೆತಿಲ್ಲ.

ಆರ್ ಕಾಮ್ ಗೆ 46,000 ಕೋಟಿ ರುಪಾಯಿ ಸಾಲ

ಆರ್ ಕಾಮ್ ಗೆ 46,000 ಕೋಟಿ ರುಪಾಯಿ ಸಾಲ

ದಿವಾಳಿ ಪ್ರಕ್ರಿಯೆ ದಾಖಲಿಸುವ ಅವಧಿಯಲ್ಲಿ ಆರ್ ಕಾಮ್ ಗೆ 46,000 ಕೋಟಿ ರುಪಾಯಿ ಸಾಲ ಇತ್ತು. ಸ್ಥಳೀಯ ಹಾಗೂ ವಿದೇಶಿ ಬ್ಯಾಂಕ್ ಗಳು, ಎನ್ ಬಿಎಫ್ ಸಿ ಸೇರಿದಂತೆ 53 ಫೈನಾನ್ಷಿಯಲ್ ಕ್ರೆಡಿಟರ್ ಗಳಿದ್ದಾರೆ. ಫಂಡ್ ಗಳು 57,382 ಕೋಟಿ ರುಪಾಯಿ ನೀಡಿವೆ. ಅದರಲ್ಲಿ 49,224 ಕೋಟಿ ರು. ಅನ್ನು ತೀರುವಳಿ ವೃತ್ತಿಪರರು ಒಪ್ಪಿಕೊಂಡಿದ್ದಾರೆ. ದಿವಾಳಿ ಪ್ರಕ್ರಿಯೆ ನಡೆಸುವುದಕ್ಕೆ ಅಂತಲೇ ಇರುವ ಕೋರ್ಟ್ ನಲ್ಲಿ ರಿಲಯನ್ಸ್ ಡಿಜಿಟಲ್ ಪ್ಲಾಟ್ ಫಾರ್ಮ್ ನಿಂದ ಆಸ್ತಿ ಖರೀದಿ ವ್ಯವಹಾರ ಪ್ರಸ್ತಾವಕ್ಕೆ ಒಪ್ಪಿಗೆ ಪಡೆದ ಮೇಲೆ ವಂಚನೆ ಆರೋಪ ಬಯಲಿಗೆ ಬಂದಿದೆ. ಈ ಮಧ್ಯ್ UVARCLನಿಂದ ಆರ್ ಕಾಮ್ ಮತ್ತು ರಿಲಯನ್ಸ್ ಟೆಲಿಕಾಂ ಆಸ್ತಿ ಖರೀದಿಸಲು ಎನ್ ಸಿಎಲ್ ಟಿ ಅನುಮತಿಗೆ ಎದುರು ನೋಡಲಾಗುತ್ತಿದೆ.

ನಿಯಂತ್ರಕರ ಜತೆಗಿನ ತಿಕ್ಕಾಟ

ನಿಯಂತ್ರಕರ ಜತೆಗಿನ ತಿಕ್ಕಾಟ

ಇನ್ನಷ್ಟು ತಡವಾಗುತ್ತದೆ ಎಂಬುದನ್ನು ಒಪ್ಪುವುದಕ್ಕೆ ಎಲ್ಲರೂ ಏನೂ ತಯಾರಿಲ್ಲ. "ಒಂದು ವೇಳೆ ತನಿಖೆ ಆರಂಭವಾದಲ್ಲಿ ಅದು ಹಳೆ ಮ್ಯಾನೇಜ್ ಮೆಂಟ್ ವಿರುದ್ಧ. ಭವಿಷ್ಯದ ಹಣ ಸಂಗ್ರಹ ಯೋಜನೆಗೆ ಸಂಬಂಧ ಇಲ್ಲ," ಎಂದು ಹೇಳಲಾಗಿದೆ. 2017ನೇ ಇಸವಿಯಲ್ಲಿ ಆರ್ ಕಾಮ್ ವೈಯರ್ ಲೆಸ್ ಕಾರ್ಯ ನಿರ್ವಹಣೆ ನಿಲ್ಲಿಸಲಾಯಿತು. ಸೆಪ್ಟೆಂಬರ್ 2016ರಲ್ಲಿ ಆರಂಭವಾಗಿದ್ದ ಜಿಯೋ ಸ್ಪರ್ಧೆಯನ್ನು ಎದುರಿಸಲು ಬಹಳ ಕಷ್ಟವಾಗಿ ಇಂಥ ಸ್ಥಿತಿ ನಿರ್ಮಾಣವಾಯಿತು. ನಿಯಂತ್ರಕರ ಜತೆಗಿನ ತಿಕ್ಕಾಟದಿಂದ ಈಗಾಗಲೇ ಆಸ್ತಿಯ ಮೌಲ್ಯ 10% ಕೊಚ್ಚಿಹೋಗಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

English summary

Reliance Communications Facing Problem In Bankruptcy Resolution Because Of It's Account Classification As Fraud

Reliance Communications now facing problem in bankruptcy resolution process because it's accounts as fraud by banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X