ನಿರಂತರವಾಗಿ ಏರಿಕೆ ಕಾಣುತ್ತಾ ಸಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸೋಮವಾರ (ಮೇ 11, 2020) ಕಂಪೆನಿಯು ಮತ್ತೆ ದಾಖಲು ಮಾಡಲು ಕಾರಣವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು 10 ಲಕ್ಷ ಕೋಟಿ ರುಪಾಯಿಯನ್ನು ಮೀರಿದೆ. ಸೋಮವಾರದಂದು ಕಂಪೆನಿ ಷೇರುಗಳು 3 ಪರ್ಸೆಂಟ್ ಏರಿಕೆ ಕಂಡು, 1614ರಲ್ಲಿ ವ್ಯವಹಾರ ನಡೆಸುವ ಮೂಲಕ ಗರಿಷ್ಠ ಮಟ್ಟವಾಗಿದ್ದ 1617 ರುಪಾಯಿ ಸಮೀಪ ಬಂದಿತು.
ರಿಲಯನ್ಸ್ ಇಂಡಸ್ಟ್ರೀಸ್ 53,125 ಕೋಟಿ ಮೊತ್ತದ ಹಕ್ಕಿನ ಷೇರಿಗೆ ಮೇ 14ನೇ ತಾರೀಕಿನಂದು ರೆಕಾರ್ಡ್ ದಿನಾಂಕ ಎಂದು ನಿಗದಿ ಮಾಡಿದ ಬೆನ್ನಿಗೇ ಷೇರಿನ ಬೆಲೆಯಲ್ಲಿ ಏರಿಕೆ ಇನ್ನಷ್ಟು ವಿಸ್ತರಣೆ ಆಗಿದೆ. ಮಾರ್ಚ್ 31, 2021ರ ಹೊತ್ತಿಗೆ ಕಂಪೆನಿಯ ಎಲ್ಲ ಸಾಲವನ್ನು ತೀರಿಸಿ, ಶೂನ್ಯ ಸಾಲದ ಕಂಪೆನಿ ಮಾಡಬೇಕು ಎಂಬ ಗುರಿ ಇರಿಸಿಕೊಂಡಿದ್ದು, ಆ ಕಡೆ ಸಾಗುವ ಪ್ರಯತ್ನಗಳು ಕಾಣುತ್ತಿದೆ.
ಹಕ್ಕಿನ ಷೇರು ಮಾರಾಟದಿಂದ ಬರುವ ಹಣದ ಮೂಲಕ ಕಂಪೆನಿಯ ಸಾಲವು 780 ಕೋಟಿ ಡಾಲರ್ ಕಡಿಮೆ ಆಗುತ್ತದೆ. ಇನ್ನು ಜಿಯೋ ಪ್ಲಾಟ್ ಫಾರ್ಮ್ ಗೆ ಕಳೆದ ಮೂರು ವಾರದಲ್ಲಿ ಮೂರು ವ್ಯವಹಾರಗಳನ್ನು ಮಾಡಿದ್ದು, 60 ಸಾವಿರ ಕೋಟಿ ರುಪಾಯಿ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ.

ಮಾರ್ಚ್ 23, 2020ರಲ್ಲಿ 875.70 ಕನಿಷ್ಠ ಮಟ್ಟಕ್ಕೆ ತಲುಪಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರು 85 ಪರ್ಸೆಂಟ್ ಏರಿಕೆಯನ್ನು ದಾಖಲಿಸಿದೆ. ಫೇಸ್ ಬುಕ್ ನಿಂದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 43,574 ಕೋಟಿ ರುಪಾಯಿ ಹೂಡಿಕೆ ಮಾಡಿದ್ದು, ಅದಾಗಿ ಕೆಲ ದಿನಕ್ಕೆ ಸಿಲ್ವರ್ ಲೇಕ್ ನಿಂದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 5,665.75 ಕೋಟಿ ರುಪಾಯಿ ಹೂಡಿಕೆ ಮಾಡಲಾಗಿದೆ.


Click it and Unblock the Notifications