For Quick Alerts
ALLOW NOTIFICATIONS  
For Daily Alerts

PM CARES ಫಂಡ್ ಗೆ ರಿಲಯನ್ಸ್ 500 ಕೋಟಿ ರುಪಾಯಿ ಘೋಷಣೆ

|

ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಸೋಮವಾರದಂದು PM CARES ಫಂಡ್ ಗೆ 500 ಕೋಟಿ ರುಪಾಯಿ ಘೋಷಣೆ ಮಾಡಲಾಗಿದೆ. ಕೊರೊನಾ ವೈರಾಣು ವಿರುದ್ಧ ಹೋರಾಡಲು ಬೆಂಬಲಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ ನೀಡಿದ್ದರು. ಅವರ ಕರೆಗೆ ಪ್ರತಿಸ್ಪಂದನೆಯಾಗಿ ಈ ಮೊತ್ತವನ್ನು ಘೋಷಣೆ ಮಾಡಲಾಗಿದೆ.

"ಲಾಕ್ ಡೌನ್ ಅವಧಿ 21 ದಿನ ಮೀರಿ ವಿಸ್ತರಣೆ ಆಗಲ್ಲ"

ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಹಣ ದೇಣಿಗೆ ನೀಡುವ ಜತೆಗೆ ಕೊರೊನಾ ವಿರುದ್ಧ ಹೋರಾಟಕ್ಕೆ ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳಿಗೆ ತಲಾ 5 ಕೋಟಿ ರುಪಾಯಿಯನ್ನು ನೀಡಲಾಗುತ್ತಿದೆ ಎಂದು ಕಂಪೆನಿಯ ಪ್ರಕಟಣೆಯಲ್ಲಿ ಸೋಮವಾರದಂದು ಮಾಹಿತಿ ನೀಡಲಾಗಿದೆ.

PM CARES ಫಂಡ್ ಗೆ ರಿಲಯನ್ಸ್ 500 ಕೋಟಿ ರುಪಾಯಿ ಘೋಷಣೆ

ಅಂದ ಹಾಗೆ, ಟಾಟಾ ಗ್ರೂಪ್ ನಿಂದ 1500 ಕೋಟಿ ರುಪಾಯಿ ದೇಣಿಗೆ ನೀಡುವ ಭರವಸೆ ದೊರೆತಿದೆ. ಇನ್ನು ಪೇಟಿಎಂನಿಂದ 500 ಕೋಟಿ ರುಪಾಯಿ ಹಣವನ್ನು ನೀಡುವ ಭರವಸೆ ಸಿಕ್ಕಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರವನ್ನು ದಾಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.

English summary

Reliance Industries Announced 500 Crore To PM CARES Fund

To fight against COVID- 19 Monday Reliance Industries announced 500 crore to PM CARES fund.
Story first published: Monday, March 30, 2020, 20:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X