ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರುಕಟ್ಟೆ ಬಂಡವಾಳ ಮೌಲ್ಯ ಸೋಮವಾರ (ಜುಲೈ 13, 2020) 12 ಲಕ್ಷ ಕೋಟಿ ರುಪಾಯಿ ಮೀರಿದೆ. ದಿನದ ಕೊನೆಗೆ ರಿಲಯನ್ಸ್ ಷೇರು 2.97% ಏರಿಕೆ ಕಂಡು, ದಿನದ ಕೊನೆಗೆ ಬಿಎಸ್ ಇಯಲ್ಲಿ 1934.30 ರುಪಾಯಿಗೆ ವಹಿವಾಟು ಮುಗಿಸಿದೆ. ನಿಫ್ಟಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1947.70 ರುಪಾಯಿ ಮುಟ್ಟಿತ್ತು.
ಷೇರು ಬೆಲೆಯ ಈ ಏರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಯ ಮಾರುಕಟ್ಟೆ ಬಂಡವಾಳ ಮೌಲ್ಯ ಒಂದೇ ದಿನದಲ್ಲಿ 35,373.88 ಕೋಟಿ ಹೆಚ್ಚಳವಾಗಿ, ಒಟ್ಟು ಬಂಡವಾಳ ಮೌಲ್ಯ 12,26,236.01 ಕೋಟಿ ಆಗಿದೆ. ಕ್ವಾಲ್ ಕಾಮ್ ವೆಂಚರ್ಸ್ ನಿಂದ ಜಿಯೋಪ್ಲಾಟ್ ಫಾರ್ಮ್ ನಲ್ಲಿ 730 ಕೋಟಿ ರುಪಾಯಿ ಹೂಡಿಕೆ ಪ್ರಸ್ತಾವವನ್ನು ಭಾನುವಾರ ರಿಲಯನ್ಸ್ ಇಂಡಸ್ಟ್ರೀಸ್ ಘೋಷಣೆ ಮಾಡಿತು.

ಬಿಎಸ್ ಇಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ 15.73 ಲಕ್ಷ ಷೇರುಗಳು ಹಾಗೂ ಎನ್ ಎಸ್ ಇಯಲ್ಲಿ 3 ಕೋಟಿ ಷೇರುಗಳು ವಹಿವಾಟು ನಡೆಸಿದವು. ರಿಲಯನ್ಸ್ ಈಗ ದೇಶದ ಅತ್ಯಂತ ಮೌಲ್ಯಯುತ ಕಂಪೆನಿ ಎನಿಸಿಕೊಂಡಿದೆ. ಕಳೆದ ತಿಂಗಳು ಹನ್ನೊಂದು ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಮುಟ್ಟಿದ ಭಾರತದ ಮೊದಲ ಕಂಪೆನಿ ಎಂಬ ದಾಖಲೆ ಬರೆಯಿತು. ಜೂನ್ 19ನೇ ತಾರೀಕಿನಂದು ನಿವ್ವಳ ಸಾಲಮುಕ್ತ ಕಂಪೆನಿಯಾಯಿತು ರಿಲಯನ್ಸ್.
ಈ ವರ್ಷದಲ್ಲಿ ಕಂಪೆನಿಯ ಷೇರಿನ ಬೆಲೆ 27.75 ಪರ್ಸೆಂಟ್ ಏರಿಕೆ ದಾಖಲಿಸಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications