ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಹೊಸ ದಾಖಲೆ ಬರೆದಿದೆ. 10,00,000 ಕೋಟಿ ಮಾರುಕಟ್ಟೆ ಮೌಲ್ಯ ತಲುಪಿದ ಮೊದಲ ಕಂಪೆನಿ ಎಂಬ ದಾಖಲೆ ರಿಲಯನ್ಸ್ ಬರೆದಿದೆ. ಮಂಗಳವಾರದಂದು ರಿಲಯನ್ಸ್ ನ ಮಾರುಕಟ್ಟೆ ಬಂಡವಾಳ ಮೌಲ್ಯವು 9.96 ಲಕ್ಷ ಕೋಟಿ ರುಪಾಯಿ ಇತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು 9 ಲಕ್ಷ ಕೋಟಿಯಿಂದ 10 ಲಕ್ಷ ಕೋಟಿ ತಲುಪಲು 21 ಸೆಷನ್ಸ್ ಆಗಿದೆ. ಇನ್ನು 8 ಲಕ್ಷ ಕೋಟಿಯಿಂದ 9 ಲಕ್ಷ ಕೋಟಿ ತಲುಪುವುದಕ್ಕೆ 20 ಸೆಷನ್ ಆಗಿದೆ. ರಿಲಯನ್ಸ್ ಇಂಡಸ್ಟ್ರಿ 40 ಪರ್ಸೆಂಟ್ ಏರಿಕೆ ದಾಖಲಿಸಿದೆ. ಆ ಕಾರಣಕ್ಕೆ ಹತ್ತು ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಆಗಿದೆ.
ಇನ್ನು ಮುಕೇಶ್ ಅಂಬಾನಿ ಆಸ್ತಿ ಈ ಕ್ಯಾಲೆಂಡರ್ ವರ್ಷದಲ್ಲಿ $ 15.7 ಬಿಲಿಯನ್ ಏರಿಕೆ ಆಗಿದೆ. ಜಾಗತಿಕ ಮಟ್ಟದ ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಏಳನೇ ಅತಿ ಹೆಚ್ಚು ಗಳಿಕೆ ಕಂಡ ಶ್ರೀಮಂತ ಎನಿಸಿಕೊಂಡಿದ್ದಾರೆ. ಕಾರ್ಲೋಸ್ ಸ್ಲಿಮ್ ಗಿಂತ ಮುಕೇಶ್ ಅಂಬಾನಿ ಮುಂದಿದ್ದು, $ 4 ಬಿಲಿಯನ್ ಹೆಚ್ಚು ಆಸ್ತಿ ಹೊಂದಿದ್ದಾರೆ.

ಬ್ಲೂಮ್ ಬರ್ಗ್ ನ ಶತಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, $ 60 ಬಿಲಿಯನ್ ಆಸ್ತಿ ಹೊಂದುವ ಮೂಲಕ ಈ ಭೂಮಿಯ ಮೇಲಿನ 12ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ ಮುಕೇಶ್ ಅಂಬಾನಿ. ಭಾರತದ ಷೇರು ಮಾರುಕಟ್ಟೆಯ ಬಂಡವಾಳ ಮೌಲ್ಯದ ವಿಚಾರದಲ್ಲಿ ರಿಲಯನ್ಸ್ ಗೆ ಸಮೀಪ ಸ್ಪರ್ಧಿ ಎಂದರೆ ಟಿಸಿಎಸ್. ಅದರ ಬಂಡವಾಳ ಮೌಲ್ಯ 7.81 ಲಕ್ಷ ಕೋಟಿ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?



Click it and Unblock the Notifications