14ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ರಿಲಯನ್ಸ್ ಜ್ಯುವೆಲ್ಸ್ ಈಗಾಗಲೇ ಇರುವ ಎಕ್ಸ್ ಕ್ಲ್ಯೂಸಿವ್ ಆಭರಣ ಕಲೆಕ್ಷನ್ ಗೆ ಆಭಾರ್ ಅನ್ನೂ ಸೇರ್ಪಡೆಗೊಳಿಸುತ್ತಿದೆ. ಈ ಕಲೆಕ್ಷನ್ ಬಿಡುಗಡೆ ಮಾಡುವ ಮೂಲಕ, ಗ್ರಾಹಕರು, ಉದ್ಯೋಗಿಗಳು, ಕಲಾಕಾರರನ್ನು ಒಟ್ಟಾಗಿಸುವ #RishtonKaDhaga ಥೀಮ್ ಅನ್ನು ರಿಲಾಯನ್ಸ್ ಜ್ಯುವೆಲ್ಸ್ ವಿಸ್ತರಿಸುತ್ತದೆ.
ಈ ವರ್ಷದ ಹೊಸ ಕಲೆಕ್ಷನ್ 'ತರ್ಕಶಿ, ಮ್ಯಾಕ್ರಾಮೆ ಮತ್ತು ಕ್ರೊಶೆಟ್ ನಿಂದ ಸ್ಫೂರ್ತಿ ಪಡೆದಿದೆ. ಇದು ಪ್ರೀತಿ, ವಿಶ್ವಾಸ ಮತ್ತು ಒಟ್ಟಾಗಿಸುವಿಕೆಯನ್ನು ಪ್ರತಿಫಲಿಸುತ್ತದೆ.
ವಜ್ರದ ಕಿವಿಯೋಲೆ
ಕಲೆಕ್ಷನ್ ನಲ್ಲಿ ವಿಶಿಷ್ಟ ಕಲಾಕೃತಿಯ ಚಿನ್ನ ಮತ್ತು ವಜ್ರದ ಕಿವಿಯೋಲೆ ವಿನ್ಯಾಸಗಳನ್ನು ಒಳಗೊಂಡಿದೆ. ಇದು ಸಾಂಪ್ರದಾಯಿಕ ಮತ್ತು ಸಕಾಲಿಕವಾದ ಬಳೆಗಳು, ಫ್ರಿಂಜೆಗಳು, ಟಾಪ್ ಆಂಡ್ ಡ್ರಾಪ್ ಗಳು, ಷಾಂಡೆಲಿಯರ್ಗಳು, ಜುಮ್ಕಿಗಳು, ಬೊಟ್ಟುಗಳು ಮತ್ತು ಚಾಂದ್ಬಲಿಗಳು ಸೇರಿರುತ್ತವೆ.
ವಜ್ರದ ಆಭರಣ ಮೌಲ್ಯದ ಮೇಲೆ 20% ರಿಯಾಯಿತಿ
ಕಿವಿಯೊಲೆಗಳ ಹೊಸ ಕಲೆಕ್ಷನ್ ಅನ್ನು ಪರಿಚಯಿಸುತ್ತಿರುವುದರ ಜೊತೆಗೆ, ಜುಲೈ 30 ರಿಂದ ಸೆಪ್ಟೆಂಬರ್ 1 ರವರೆಗೆ ವಿಶೇಷ ವಾರ್ಷಿಕೋತ್ಸವ ಕೊಡುಗೆಯನ್ನು ರಿಲಾಯನ್ಸ್ ಜ್ಯುವೆಲ್ಸ್ ಘೋಷಿಸಿದ್ದು, ಚಿನ್ನದ ಆಭರಣ ಮೇಕಿಂಗ್ ಚಾರ್ಜ್ ಗಳು ಮತ್ತು ವಜ್ರದ ಆಭರಣ ಮೌಲ್ಯದ ಮೇಲೆ 20% ರಿಯಾಯಿತಿಯನ್ನು ಹೊಂದಿದೆ.
#RishtonKaDhaga ಎಂಬ ಥೀಮ್
ಈ ಸಂಗ್ರಹದ ಹಿಂದಿನ ಧ್ಯೇಯ ಮತ್ತು ಚಿಂತನಾ ಪ್ರಕ್ರಿಯೆಯ ಬಗ್ಗೆ ಹೇಳುವುದಾದರೆ, #RishtonKaDhaga ಎಂಬ ಥೀಮ್ ಅನ್ನು ಆಭಾರ್ ಹೊಂದಿದೆ. "ನಮ್ಮನ್ನು ನಿಮಗೂ ನಿಮ್ಮನ್ನು ನಮಗೂ ಜೋಡಿಸಿದೆ" ಹಾಗೂ "ಪ್ರೀತಿ ಮತ್ತು ಜಾಣತನವನ್ನು ಒಂದಾಗಿ ಸೇರಿಸುವುದು" ಎಂಬ ಟ್ಯಾಗ್ಲೈನ್ ಹೊಂದಿರುವ ಆಭಾರ್ ಮೂಲಕ ತಮ್ಮ ಮೇಲೆ ವಿಶ್ವಾಸ ಇಟ್ಟಿರುವ ಮತ್ತು ವಿಶೇಷ ಆಭರಣವನ್ನು ರೂಪಿಸಲು ಬ್ರ್ಯಾಂಡ್ ಗೆ ಪ್ರೋತ್ಸಾಹ ನೀಡುವುದಕ್ಕಾಗಿ ಎಲ್ಲರಿಗೂ ರಿಲಯನ್ಸ್ ಜ್ಯುವೆಲ್ಸ್ ಧನ್ಯವಾದ ಹೇಳಲು ಬಯಸುತ್ತದೆ.
ಸುಂದರವಾದ 1 ನಿಮಿಷದ ಫಿಲ್ಮ್ ಒಳಗೊಂಡ ಮಲ್ಟಿಮೀಡಿಯಾ ಕ್ಯಾಂಪೇನ್ ಈ #RishtonKaDhaga ಆಗಿದ್ದು, ಗ್ರಾಹಕರು, ಆಭರಣಕಾರರು, ವಿನ್ಯಾಸಕರು ಮತ್ತು ಉದ್ಯೋಗಿಗಳಿಗೆ ಸಂದೇಶವನ್ನು ರಿಲಯನ್ಸ್ ಜ್ಯುವೆಲ್ಸ್ ನೀಡುತ್ತದೆ. . https://www.youtube.com/watch?v=RBVwg853pkY
ಆಕರ್ಷಕ ಕಲೆಕ್ಷನ್
ಕಲೆಕ್ಷನ್ ಮತ್ತು #RishtonKaDhaga ಬಗ್ಗೆ ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ಸಿಇಒ ಸುನೀಲ್ ನಾಯಕ್, "ಈ ಕಲೆಕ್ಷನ್ ಮತ್ತು ಕ್ಯಾಂಪೇನ್ ಮೂಲಕ ನಾವು ಇಷ್ಟು ವರ್ಷಗಳವರೆಗೆ ನಮ್ಮನ್ನು ಬೆಂಬಲಿಸಿದ ಮತ್ತು ನಮ್ಮಲ್ಲಿ ವಿಶ್ವಾಸವನ್ನು ಇಟ್ಟ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ತರ್ಕಶಿ, ಮ್ಯಾಕ್ರಾಮೆ ಮತ್ತು ಕ್ರೊಶೆಟ್ ನಿಂದ ಪ್ರೇರಿತ ಆಭಾರ್ ಕಲೆಕ್ಷನ್ ಅನ್ನು ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ವಿಶ್ವಾಸ ಮತ್ತು ಪ್ರೀತಿಯಿಂದ ನಮ್ಮ ಬೆಸುಗೆಯನ್ನು ಇನ್ನಷ್ಟು ಸಶಕ್ತಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದಿದ್ದಾರೆ.
#RishtonKaDhaga ಎಂಬ ಥೀಂ್ ಮತ್ತು ಆಭಾರ್ ಕಲೆಕ್ಷನ್ ಮೂಲಕ ತನ್ನ ಗ್ರಾಹಕರೊಂದಿಗೆ ಬಾಂಧವ್ಯ ವೃದ್ಧಿ ಮಾಡಿಕೊಳ್ಳಲು ರಿಲಯನ್ಸ್ ಜ್ಯುವೆಲ್ಸ್ ಯೋಜಿಸಿದೆ. ಈ ಸುಂದರ ಕಲೆಕ್ಷನ್ ಮೂಲಕ ಗ್ರಾಹಕರನ್ನು ಸೆಳೆಯಲು ರಿಲಯನ್ಸ್ ಯೋಜಿಸಿದೆ.
ಈ ಆಕರ್ಷಕ ಕಲೆಕ್ಷನ್ ರಿಲಯನ್ಸ್ ಜ್ಯುವೆಲ್ಸ್ ಫ್ಲ್ಯಾಗ್ ಶಿಪ್ ಶೋರೂಂಗಳಲ್ಲಿ, ಶಾಪ್ ಇನ್ ಶಾಪ್ ಗಳಲ್ಲಿ ಹಾಗೂ ಇಡೀ ದೇಶದಲ್ಲಿ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಹಾಗೂ ರಿಲಯನ್ಸ್ ಜ್ಯುವೆಲ್ಸ್ ವೆಬ್‌ಸೈಟ್ ನಲ್ಲಿ ಖರೀದಿಗೆ ಲಭ್ಯವಿರಲಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications