For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋದಿಂದ ಬಂತಲ್ಲಪ್ಪೋ ಏನೇನಲ್ಲಾ ಆಫರ್!

|

ರಿಲಯನ್ಸ್ ಜಿಯೋದಿಂದ ಬೇರೆ ನೆಟ್ ವರ್ಕ್ ಗೆ ಮಾಡುವ ಕರೆಗಳಿಗೆ ದರ ವಿಧಿಸಲು ಆರಂಭಿಸಲು ಬಹಳ ಸಮಯ ಆಯಿತು. ಜತೆಗೆ ಅದರ ಪ್ಲ್ಯಾನ್ ಗಳ ಬೆಲೆಯಲ್ಲೂ ಏರಿಕೆ ಮಾಡಲಾಗಿತ್ತು. ಯಾವಾಗ ಕೊರೊನಾ ವೈರಾಣು ಆತಂಕ ಹೆಚ್ಚಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳು ದೊಡ್ಡ ನಷ್ಟ ಅನುಭವಿಸುತ್ತಿರುವುದನ್ನು ವರದಿ ಮಾಡಲಾರಂಭಿಸಿದವೋ ಈಗ ಜಿಯೋ ಹೊಸ ಪ್ಲ್ಯಾನ್ ಗಳನ್ನು ಪರಿಚಯಿಸಿದೆ.

ಈ ಪ್ಲ್ಯಾನ್ ಗಳಲ್ಲಿ ಹೆಚ್ಚು 4G ಡೇಟಾ ಮತ್ತು ಇತರ ನೆಟ್ ವರ್ಕ್ ಗಳಿಗೆ ಹೆಚ್ಚು ಉಚಿತ ಕರೆಗಳನ್ನು ನೀಡುತ್ತಿದೆ. 51 ಹಾಗೂ 101 ರುಪಾಯಿಗಳ ಟಾಪ್ ಅಪ್ ಪ್ಲಾನ್ ಗಳಲ್ಲಿ ಅಗ್ಗದ ಬೆಲೆಗೆ ಡೇಟಾ ಒದಗಿಸುವ ಮೂಲಕ ಭಾರೀ ಸ್ಪರ್ಧೆ ಒಡ್ಡುತ್ತಿದೆ. 11, 21, 51 ಹಾಗೂ 101 ರುಪಾಯಿಗಳ ಆಫರ್ ಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ.

ರಿಲಯನ್ಸ್ ಜಿಯೋದಿಂದ ಬಂತಲ್ಲಪ್ಪೋ ಏನೇನಲ್ಲಾ ಆಫರ್!

ಯಾವ ಪ್ಲ್ಯಾನ್ ಗೆ ಏನು ಹೆಚ್ಚುವರಿ ಕೊಡುಗೆ ಎಂಬುದರ ವಿವರ ಹೀಗಿದೆ:
11 ರುಪಾಯಿ ಪ್ಲ್ಯಾನ್: ಈಗಿರುವ ಪ್ಲ್ಯಾನ್ ಜತೆಗೆ 800 MB ಹೆಚ್ಚುವರಿ 4G ಡೇಟಾ, ಇತರ ನೆಟ್ ವರ್ಕ್ ಗಳಿಗೆ 75 ನಿಮಿಷಗಳ ಟಾಕ್ ಟೈಮ್.

21 ರುಪಾಯಿ ಪ್ಲ್ಯಾನ್: 2 GBಯಷ್ಟು 4G ಡೇಟಾ ಮತ್ತು ಇತರ ನೆಟ್ ವರ್ಕ್ ಗಳಿಗೆ 200 ನಿಮಿಷಗಳ ಟಾಕ್ ಟೈಮ್.

51 ರುಪಾಯಿ ಪ್ಲ್ಯಾನ್: 6 GBಯಷ್ಟು 4G ಡೇಟಾ ಮತ್ತು ಇತರ ನೆಟ್ ವರ್ಕ್ ಗಳಿಗೆ 500 ನಿಮಿಷಗಳ ಟಾಕ್ ಟೈಮ್.

101 ರುಪಾಯಿ ಪ್ಲ್ಯಾನ್: 12 GBಯಷ್ಟು 4G ಡೇಟಾ ಮತ್ತು ಇತರ ನೆಟ್ ವರ್ಕ್ ಗಳಿಗೆ 1000 ನಿಮಿಷಗಳ ಟಾಕ್ ಟೈಮ್.

251 ರುಪಾಯಿ ಪ್ಲ್ಯಾನ್ ನಲ್ಲಿ ಇರುವ ಗ್ರಾಹಕರಿಗೆ ಕರೆ ಮತ್ತು ಎಸ್ಸೆಮ್ಮೆಸ್ ಅನುಕೂಲಗಳು ಯಾವ ರೀತಿ ನೀಡಬೇಕು ಎಂಬ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಸದ್ಯಕ್ಕೆ 251 ರುಪಾಯಿ ಪ್ಲ್ಯಾನ್ ನಲ್ಲಿ ದಿನಕ್ಕೆ 2 GBಯಷ್ಟು 4G ಡೇಟಾ 51 ದಿನಗಳ ಅವಧಿಗೆ ನೀಡಲಾಗುತ್ತಿದೆ. ವಾಯ್ಸ್ ಕಾಲಿಂಗ್ ಹಾಗೂ ಎಸ್ಸೆಮ್ಮೆಸ್ ಅನುಕೂಲಗಳು ಯಾವುದೂ ಇಲ್ಲ.

English summary

Reliance Jio Introduced Many New Plans To It's Customers

Mukesh Ambani led Reliance Jio introduced many new plans. Here is the details of the plans.
Story first published: Friday, March 20, 2020, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X