ಜಿಯೋಗೆ ಸಿಕ್ತು ಭಾರತದ 22 ವೃತ್ತಗಳಲ್ಲೂ ಸ್ಪೆಕ್ಟ್ರಮ್ ಬಳಸುವ ಹಕ್ಕು

ಮುಂಬೈ, ಮಾರ್ಚ್ 03: ಭಾರತದ ಎಲ್ಲ 22 ವೃತ್ತಗಳಲ್ಲೂ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RIL) ತನ್ನದಾಗಿಸಿಕೊಂಡಿದೆ. ಈಚೆಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಮುಕ್ತಾಯವಾದ ಸ್ಪೆಕ್ಟ್ರಮ್ ಹರಾಜಿನಲ್ಲಿ ಈ ಹಕ್ಕನ್ನು ಪಡೆದುಕೊಂಡಿದೆ. ಇನ್ನು ಯಾವ ರಾಜ್ಯದಲ್ಲಿ ಎಷ್ಟು ಬ್ಯಾಂಡ್ ಎಂಬ ವಿವರಗಳು ಹೀಗಿವೆ:

LTE ಸೇವೆ ಮತ್ತು ಭವಿಷ್ಯದ 5G ತಂತ್ರಜ್ಞಾನ ಮೇಲ್ದರ್ಜೆಗೆ RJIL ಉತ್ತಮ ಬ್ಯಾಲೆನ್ಸ್ ಹೊಂದಿದೆ. ಇತರ ಪ್ರಮುಖಾಂಶಗಳ ಮಾಹಿತಿ ಹೀಗಿದೆ.

* ಈ ಖರೀದಿ ಮೂಲಕ RJIL ಒಟ್ಟಾರೆ ಒಡೆತನದ ಸ್ಪೆಕ್ಟ್ರಂ ಮಹತ್ತರವಾದ ಏರಿಕೆ ಕಂಡು, ಶೇಕಡಾ 55ರಷ್ಟು ಹೆಚ್ಚಳವಾಗಿ 1,717 MHz (uplink+ downlink) ತಲುಪಿದೆ.

ಜಿಯೋಗೆ ಸಿಕ್ತು ಭಾರತದ 22 ವೃತ್ತಗಳಲ್ಲೂ ಸ್ಪೆಕ್ಟ್ರಮ್ ಬಳಸುವ ಹಕ್ಕು

* ರಿಲಯನ್ಸ್​ನ ಕನಿಷ್ಠ ಮೊತ್ತದ ಸಬ್- ಗಿಗಾಹಜ್ ಸ್ಪೆಕ್ಟ್ರಂ 2X10 MHz ಸ್ಪೆಕ್ಟ್ರಮ್ ಹಲವು ವೃತ್ತಗಳಲ್ಲಿವೆ. ಇದರ ಜತೆಗೆ 1800 MHz ಬ್ಯಾಂಡ್​ನಲ್ಲಿ ಕನಿಷ್ಠ 2X10 MHz ಮತ್ತು ತಲಾ 22 ವೃತ್ತಗಳಲ್ಲಿ 2300 Mhzಬ್ಯಾಂಡ್​ನಲ್ಲಿ 40 MHz ಇದೆ.

* RJIL ಪ್ರತಿ Mhzಗೆ ರೂ 60.8 ಕೋಟಿಯನ್ನು ಪಾವತಿ ಮಾಡಿದೆ.

* ಸ್ಪೆಕ್ಟ್ರಮ್ ವ್ಯಾಪ್ತಿ ವಿಸ್ತಾರ ಆಗುವುದರೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಮೂಲಸೌಕರ್ಯ ನಿಯೋಜಿಸಿದೆ. ಈಗಿರುವ ಗ್ರಾಹಕರಿಗೆ ಒದಗಿಸಬಹುದಾದ ಸೇವಾ ಸಾಮರ್ಥ್ಯದ ಜತೆಗೆ ಇನ್ನೂ ಲಕ್ಷಾಂತರ ಗ್ರಾಹಕರಿಗೆ ಸೇವೆ ಒದಗಿಸಬಹುದು.

* ಎಲ್ಲಿ ಜಿಯೋ ತನ್ನ ಸ್ವಂತ5G ಸಿದ್ಧಮಾಡಿಕೊಂಡಿದೆಯೋ ಅಲ್ಲಿ ಸರಿಯಾದ ಸಮಯಕ್ಕೆ 5G ಸೇವೆಗೆ ಬದಲಾವಣೆ ಮಾಡಿಕೊಳ್ಳಲು ಈ ಸ್ಪೆಕ್ಟ್ರಮ್ ಬಳಕೆ ಮಾಡಲಾಗುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಡಿಜಿಟಲ್ ರೂಪು- ರೇಖೆಯಲ್ಲೇ ಜಿಯೋ ಕ್ರಾಂತಿಕಾರಿ ಬದಲಾವಣೆ ತಂದಿದೆ. ಡಿಜಿಟಲ್ ಜೀವನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ದೇಶ ಇದಾಗಲಿದೆ. ನಮಗೆ ಈಗಿರುವ ಗ್ರಾಹಕರ ಅನುಭವದ ವ್ಯಾಪ್ತಿ ವಿಸ್ತಾರ ಮಾಡುವುದು ಮಾತ್ರವಲ್ಲ. 30 ಕೋಟಿ ಬಳಕೆದಾರರು ಡಿಜಿಟಲ್ ಸೇವೆಗೆ ಸೇರ್ಪಡೆ ಆಗಲಿದ್ದಾರೆ. 5G ಸೇವೆ ಒದಗಿಸುವುದಕ್ಕೆ ನಾವೀಗ ಸಂಸಿದ್ಧಗೊಂಡಿದ್ದೇವೆ ಎಂದಿದ್ದಾರೆ.

20 ವರ್ಷಗಳ ಅವಧಿಗೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಸ್ಪೆಕ್ಟ್ರಮ್​ಗೆ 57,123 ಕೋಟಿ ರೂಪಾಯಿ ಪಾವತಿಸಬೇಕು.ಸ್ಪೆಕ್ಟ್ರಂ ಹರಾಜಿನ ನಿಬಂಧನೆಯಂತೆ, ನಂತರದ ಪಾವತಿಯನ್ನು ಹದಿನೆಂಟು ವರ್ಷದ ಅವಧಿಗೆ ಮಾಡಬೇಕು (2 ವರ್ಷದ ವಿನಾಯಿತಿ ಹಾಗೂ 16 ವರ್ಷದ ಮರುಪಾವತಿ ಅವಧಿ), ಜತೆಗೆ ಬಡ್ಡಿ ವಾರ್ಷಿಕ 7.3 ಪರ್ಸೆಂಟ್ ಪಾವತಿಸಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+