ಇಡೀ ಭಾರತ 21 ದಿನ ಲಾಕ್ ಡೌನ್ ಎಂದು ಘೋಷಿಸಿದ ಮೇಲೆ 'ವರ್ಕ್ ಫ್ರಂ ಹೋಮ್' ಮಾಡುವವರ ಪ್ರಮಾಣದಲ್ಲಿ ವಿಪರೀತ ಹೆಚ್ಚಾಗಿದೆ. ಬಳಕೆದಾರರ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೋದಿಂದ ಹೊಸ ಜಿಯೋಫೈಬರ್ ಸಂಪರ್ಕಗಳಿಗೆ ಹೈ- ಸ್ಪೀಡ್ ಡೇಟಾ ಒದಗಿಸಲಾಗುವುದು ಎಂದು ತಿಳಿದುಬಂದಿದೆ.
ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ರಿಲಯನ್ಸ್ ನಿಂದ ಜಿಯೋಫೈಬರ್ ಉಚಿತ ಬೇಸಿಕ್ ಬ್ರಾಡ್ ಬ್ಯಾಂಡ್ ಆರಂಭಿಸಲಿದೆ. ಈ ಯೋಜನೆಯಲ್ಲಿ ಕಂಪೆನಿಯು 10mbps ವೇಗದಲ್ಲಿ 100 GB ಡೇಟಾ ನೀಡುತ್ತದೆ. ಆ ನಂತರ ವೇಗವು 1 mbpsಗೆ ಇಳಿಯುತ್ತದೆ.
30 ದಿನ ಯಾವ ಸೇವಾ ಶುಲ್ಕ ಇಲ್ಲ
ಎಲ್ಲೆಲ್ಲಿ ಸಂಪರ್ಕ ಒದಗಿಸಲು ಸಾಧ್ಯವೋ ಅಲ್ಲಿ ಈ ಯೋಜನೆಯನ್ನು ನೀಡಲಿದೆ. 30 ದಿನಗಳ ಅವಧಿಗೆ ಯಾವ ಸೇವಾ ಶುಲ್ಕವೂ ಇರುವುದಿಲ್ಲ. ಹೋಮ್ ಗೇಟ್ ವೇ ಕೂಡ ಒದಗಿಸುವ ಕಂಪೆನಿಯು ಭದ್ರತಾ ಠೇವಣಿಯಾಗಿ 1500 ರುಪಾಯಿ ಹಾಗೂ ಇನ್ ಸ್ಟಲೇಷನ್ ಶುಲ್ಕವಾಗಿ 1000 ರುಪಾಯಿ ವಿಧಿಸುತ್ತದೆ.
10 mbpsಗಿಂತ ಹೆಚ್ಚು ವೇಗದ ಕನೆಕ್ಷನ್ ಕೂಡ ಒದಗಿಸಲಿದೆ
ಈ ಮೂಲಕ ಧ್ವನಿ ಕರೆ, ವಿಡಿಯೋ ಕರೆ, ಟಿವಿ ಕರೆ, ವಿಡಿಯೋ ಕಾನ್ಫರೆನ್ಸ್ ಮತ್ತಿತರ ಜಿಯೋ ಅಪ್ಲಿಕೇಷನ್ ಗಳನ್ನು ಬಳಸಿಕೊಳ್ಳಬಹುದು. ಇದರ ಜತೆಗೆ ಬಳಕೆದಾರರ ಆಯ್ಕೆಗೆ ತಕ್ಕಂತೆ ವೇಗವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಅವಕಾಶ ಇದೆ. 10 mbpsಗಿಂತ ಹೆಚ್ಚು ವೇಗದ ಕನೆಕ್ಷನ್ ಕೂಡ ಒದಗಿಸಲಿದೆ. ಆದರೆ ಈ ಹೊಸ ಪ್ಲ್ಯಾನ್ ಹೊಸ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.
251 ರುಪಾಯಿಯ ಪ್ಲ್ಯಾನ್ ಕೂಡ ಬಿಡುಗಡೆ
ಇದೇ ವೇಳೆ ವರ್ಕ್ ಫ್ರಮ್ ಹೋಮ್ ಮಾಡುವವರ ಸಲುವಾಗಿ 28 ದಿನಗಳ ವ್ಯಾಲಿಡಿಟಿ ಇರುವ, ನಿತ್ಯ 2GB ಡೇಟಾ ದೊರೆಯುವ, 251 ರುಪಾಯಿಯ ಪ್ಲ್ಯಾನ್ ಕೂಡ ಬಿಡುಗಡೆ ಮಾಡಿದೆ. ಆದರೆ ಈ ಪ್ಲ್ಯಾನ್ ನಲ್ಲಿ ಜಿಯೋ ಅಪ್ಲಿಕೇಷನ್, ವಾಯ್ಸ್ ಕಾಲ್ ಅಥವಾ ಮೆಸೇಜ್ ಉಚಿತವಾಗಿ ಕಳಿಸುವ ಅನುಕೂಲಗಳು ಇಲ್ಲ.
ಡೇಟಾ ಬಳಕೆ ವಿಪರೀತ ಹೆಚ್ಚಿದೆ
ಇತರ ಟೆಲಿಕಾಂ ನೆಟ್ ವರ್ಕ್ ಗಳಾದ ಏರ್ ಟೆಲ್, ವೊಡಾಫೋನ್ ಐಡಿಯಾ ಕೂಡ ವಿವಿಧ ಡೇಟಾ ಪ್ಲ್ಯಾನ್ ಗಳನ್ನು ಆರಂಭಿಸಿವೆ. ಇಡೀ ದೇಶದಲ್ಲಿ ಇಂಟರ್ ನೆಟ್ ಡೇಟಾ ಬಳಕೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಅದರಲ್ಲೂ ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ಬೇಡಿಕೆ ಮತ್ತೂ ಹೆಚ್ಚಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications