ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಭಾರತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಕರೆ ಹಾಗೂ ಡೇಟಾ ದರಗಳನ್ನು ಹೆಚ್ಚಿಸಿದ (ಡಿಸೆಂಬರ್ 3) ಬಳಿಕ ರಿಲಯನ್ಸ್ ಜಿಯೊ ಇದೇ ಶುಕ್ರವಾರ(ಡಿಸೆಂಬರ್ 6)ದಂದು ದರ ಏರಿಕೆ ಮಾಡಲಿದೆ. ಈಗಾಗಲೇ ತಿಳಿಸಿದ್ದ ಹೊಸ ಆಲ್ ಇನ್ ಒನ್ ಯೋಜನೆಯ ಬಗ್ಗೆ ಇದೀಗ ವಿವರಗಳನ್ನು ಪ್ರಕಟಿಸಿದ್ದು, 199 ರುಪಾಯಿ ರೀಚಾರ್ಜ್‌ನಿಂದ ಪ್ರೀಪೇಯ್ಡ್ ಯೋಜನೆಗಳು ದೊರೆಯಲಿವೆ.
ಆಲ್ ಇನ್ ಒನ್ ಯೋಜನೆಯಡಿಯಲ್ಲಿ ಮೊಬೈಲ್ ಕರೆ ಹಾಗೂ ಡೇಟಾ ಶುಲ್ಕಗಳು ಶೇಕಡಾ 40 ರಷ್ಟು ಏರಿಕೆಯಾಗಿದೆ. ಆಲ್ ಇನ್ ಒನ್ ಯೋಜನೆಯು ಗ್ರಾಹಕರಿಗೆ ಶೇಕಡಾ 300ರಷ್ಟು ಪ್ರಯೋಜನ ನೀಡಲಿವೆ ಎಂದು ತಿಳಿಸಿದೆ. ಪ್ರಿಪೇಯ್ಡ್ ರೀಚಾರ್ಜ್ 199 ರುಪಾಯಿಯಿಂದ ಆರಂಭವಾಗಿ 2,199 ರುಪಾಯಿಯ ವರೆಗೂ ಲಭ್ಯವಿದೆ.
ಡಿಸೆಂಬರ್ 6ರಿಂದ ಜಾರಿಯಾಗಲಿರುವ ಆಲ್ ಇನ್ ಒನ್ ಯೋಜನೆಯ ವಿವರಣೆ ಈ ಕೆಳಗಿದೆ ಓದಿ
199 ರುಪಾಯಿ
199 ರುಪಾಯಿ ಪ್ರೀಪೇಯ್ಡ್ ರೀಚಾರ್ಜ್ ಮಾಡಿದರೆ ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು ಉಚಿತ ಕರೆಗಳ ಲಭ್ಯವಿದೆ. ಇದರ ವ್ಯಾಲಿಡಿಟಿ 28 ದಿನಗಳು
249 ರುಪಾಯಿ
ಪ್ರತಿದಿನ 2 ಜಿಬಿ ಮೊಬೈಲ್ ಡೇಟಾ ಲಭ್ಯವಿರುವ 249 ರುಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಜಿಯೋ ನಿಂದ ಜಿಯೋ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು ಮಾತನಾಡಬಹುದು. ಇದರ ವ್ಯಾಲಿಡಿಟಿಯು 28 ದಿನಗಳಾಗಿವೆ
349 ರುಪಾಯಿ
349 ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 3 ಜಿಬಿ ಮೊಬೈಲ್ ಡೇಟಾ ಲಭ್ಯವಿದೆ. ಇದರಲ್ಲೂ ಕೂಡ ಈ ಮೇಲಿನ ರೀಚಾರ್ಜ್‌ನಂತೆ ಜಿಯೋಗೆ ಸಂಪೂರ್ಣ ಉಚಿತ ಕರೆಗಳು, ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು ಕರೆಗಳ ಸೌಲಭ್ಯವಿದೆ. ಜೊತೆಗೆ 28 ದಿನಗಳ ವ್ಯಾಲಿಟಿಡಿ ಒಳಗೊಂಡಿದೆ.
2 ತಿಂಗಳ ಯೋಜನೆ
399 ರುಪಾಯಿ: ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 2000 ನಿಮಿಷಗಳು ಉಚಿತ ಕರೆ ಲಭ್ಯವಿದೆ. ಇದರ ವ್ಯಾಲಿಡಿಟಿ 56 ದಿನಗಳು
444 ರುಪಾಯಿ: ಪ್ರತಿದಿನ 2 ಜಿಬಿ ಮೊಬೈಲ್ ಡೇಟಾ ಲಭ್ಯವಿರುವ 444 ರುಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಜಿಯೋ ನಿಂದ ಜಿಯೋ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 2000 ನಿಮಿಷಗಳು ಮಾತನಾಡಬಹುದು. ಇದರ ವ್ಯಾಲಿಡಿಟಿ 56 ದಿನಗಳು
3 ತಿಂಗಳ ಯೋಜನೆ
555 ರುಪಾಯಿ: ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 3000 ನಿಮಿಷಗಳು ಉಚಿತ ಕರೆ ಸೌಲಭ್ಯ. ಇದರ ವ್ಯಾಲಿಡಿಟಿ 84 ದಿನಗಳು
599 ರುಪಾಯಿ:ಪ್ರತಿದಿನ 2 ಜಿಬಿ ಮೊಬೈಲ್ ಡೇಟಾ, ಜಿಯೋ ಕರೆಗಳು ಉಚಿತ, ಇತರೆ ನೆಟ್‌ವರ್ಕ್‌ಗೆ 3000 ನಿಮಿಷಗಳು ಉಚಿತ ಕರೆ ಸೌಲಭ್ಯ. ಇದರ ವ್ಯಾಲಿಡಿಟಿ 84 ದಿನಗಳು
ಒಂದು ವರ್ಷದ ಯೋಜನೆ
2199 ರುಪಾಯಿ: ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ಕರೆಗಳು ಉಚಿತ, ಇತರೆ ನೆಟ್‌ವರ್ಕ್‌ಗೆ 12,000 ನಿಮಿಷಗಳು ಉಚಿತ ಕರೆ. ಇದರ ವ್ಯಾಲಿಡಿಟಿ 365 ದಿನಗಳು
ಕೈಗೆಟುವ ದರದ ಯೋಜನೆಗಳು
129 ರುಪಾಯಿ: ತಿಂಗಳಿಗೆ ಒಟ್ಟಾರೆ 2 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು. ಇದರ ವ್ಯಾಲಿಡಿಟಿ 28 ದಿನಗಳಾಗಿವೆ.
329 ರುಪಾಯಿ : ಒಟ್ಟಾರೆ 6 ಜಿಬಿ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 3000 ನಿಮಿಷಗಳು. ಇದರ ವ್ಯಾಲಿಡಿಟಿ 84 ದಿನಗಳು.
1299 ರುಪಾಯಿ: ಒಟ್ಟಾರೆ 24 ಜಿಬಿ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 12,000 ನಿಮಿಷಗಳು. ಇದರ ವ್ಯಾಲಿಡಿಟಿ 365 ದಿನಗಳು.


Click it and Unblock the Notifications