For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ಆಫರ್‌: 75 ರೂಪಾಯಿ 3 ಜಿಬಿ ಡೇಟಾ

|

ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಉತ್ತಮ ಯೋಜನೆಗಳ ಮುಖಾಂತರ ಬಳಕೆದಾರರನ್ನು ಆಕರ್ಷಿಸಲು ಅನೇಕ ಯೋಜನೆಗಳನ್ನು ನೀಡುತ್ತವೆ. ಇದೇ ರೀತಿಯಲ್ಲಿ ರಿಲಯನ್ಸ್ ಜಿಯೋನ 75 ರೂಪಾಯಿ ಆಕರ್ಷಕ ಯೋಜನೆಯನ್ನು , ಇದು ತಿಂಗಳಾದ್ಯಂತ (28 ದಿನಗಳು) ತನ್ನ ಗ್ರಾಹಕರಿಗೆ ಉಚಿತ ಕರೆ ನೀಡುತ್ತದೆ. ಅಂದರೆ, ಗ್ರಾಹಕರು ಯಾವುದೇ ಸಂಖ್ಯೆಗೆ ಅನಿಯಮಿತ ಕರೆಗಳನ್ನು ಮಾಡಬಹುದು. ಜಿಯೋನ ಈ ಯೋಜನೆ ಕಂಪನಿಯ ಆಲ್ ಇನ್ ಒನ್ ಯೋಜನೆಗಳ ಭಾಗವಾಗಿದೆ.

ಜಿಯೋ ಫೋನ್‌ನ 75 ರೂ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಅನುಕೂಲವಿದೆ. ಜೊತೆಗೆ ಬಳಕೆದಾರರು 50 ಎಸ್‌ಎಂಎಸ್‌ ಕಳುಹಿಸುವ ಅನುಕೂಲದ ಜೊತೆಗೆ 3 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ ಯೋಜನೆಯಲ್ಲಿ ಲಭ್ಯವಿದೆ.

ಜಿಯೋನ ಆಲ್ ಇನ್ ಒನ್ ಯೋಜನೆಗಳಲ್ಲಿ ಒಟ್ಟು 4 ರೀಚಾರ್ಜ್ ಯೋಜನೆಗಳಿವೆ. ಜಿಯೋ ಫೋನ್ ಯೋಜನೆಗಳು 75 ರೂ.ಗಳಿಂದ 185 ರೂಪಾಯಿಗಳಿದ್ದು, ಈ ಎಲ್ಲಾ ರೀಚಾರ್ಜ್ ಯೋಜನೆಗಳು ಗ್ರಾಹಕರಿಗೆ 28 ​​ದಿನಗಳ ಮಾನ್ಯತೆಯನ್ನು ನೀಡುತ್ತವೆ. ಜಿಯೋ ಫೋನ್‌ನ 125 ರೂ ಯೋಜನೆಯಲ್ಲಿ 14 ಜಿಬಿ ಡೇಟಾದೊಂದಿಗೆ ಉಚಿತ ಕರೆ ಮಾಡುವ ಸೌಲಭ್ಯ ಲಭ್ಯವಿದೆ.

 ರಿಲಯನ್ಸ್ ಜಿಯೋ ಆಫರ್‌: 75 ರೂಪಾಯಿ 3 ಜಿಬಿ ಡೇಟಾ

ಅದೇ ಸಮಯದಲ್ಲಿ, 155 ರೂಪಾಯಿ ಯೋಜನೆಯಲ್ಲಿ 28 ಜಿಬಿ ಡೇಟಾ ಲಭ್ಯವಿದೆ. ಅಂದರೆ, ಈ ಯೋಜನೆಯಲ್ಲಿ, ಬಳಕೆದಾರರಿಗೆ ಪ್ರತಿದಿನ 1 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಜಿಯೋ ಫೋನ್‌ನ 185 ರೂ. ಯೋಜನೆಯು ಪ್ರತಿದಿನ 56 ಜಿಬಿ ಡೇಟಾ, ಉಚಿತ ಕರೆ ಮತ್ತು 100 ಎಸ್‌ಎಂಎಸ್ ಒದಗಿಸುತ್ತದೆ.

ಜಿಯೋನ ಇತರ ಯೋಜನೆಗಳಿಗೆ ಹೋಲಿಸಿದರೆ, ಜಿಯೋ ಫೋನ್‌ಗಳ ಯೋಜನೆಗಳು ಸಾಕಷ್ಟು ಅಗ್ಗವಾಗಿವೆ. ಜಿಯೋನ 28 ದಿನಗಳ ವ್ಯಾಲಿಡಿಟಿಯ 129 ರೂ. ಯೋಜನೆಯು ಉಚಿತ ಕರೆಗಳೊಂದಿಗೆ 2 ಜಿಬಿ ಡೇಟಾವನ್ನು ನೀಡುತ್ತದೆ.

English summary

Reliance Jio Rs 75 Plan: 3 GB Data And Free Call

Here the details of Reliance Jio Rs 75 Plan and 3 GB Data details.
Story first published: Saturday, February 6, 2021, 14:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X