ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಫೋನ್ ಬಳಕೆದಾರರಿಗಾಗಿ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ವಿಶೇಷ ಅಂದ್ರೆ ಕಂಪನಿಯ ಹೊಸ ಯೋಜನೆಯ ಬೆಲೆ 100 ರೂಪಾಯಿಗಿಂತ ಕಡಿಮೆ.
ರಿಲಯನ್ಸ್ ಜಿಯೋ ಹೊಸ ಪ್ರಿಪೇಯ್ಡ್ ಯೋಜನೆ 75 ರೂಪಾಯಿ ಆಗಿದೆ. ಈ ರೀಚಾರ್ಜ್ ಯೋಜನೆ ಪ್ರಸ್ತುತ ಟೆಲಿಕಾಂ ದೈತ್ಯ ನೀಡುವ ಅಗ್ಗದ ಯೋಜನೆಯಾಗಿದೆ. ಈ ಹಿಂದೆ ರಿಲಯನ್ಸ್ ಜಿಯೋ ತನ್ನ ರೂ 39 ಮತ್ತು ರೂ 69 ರೀಚಾರ್ಜ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದರ ನಂತರ ಹೊಸ ರೀಚಾರ್ಜ್ ಯೋಜನೆಯನ್ನು ಘೋಷಿಸಲಾಯಿತು. ಇನ್ನು ಸೆಪ್ಟೆಂಬರ್ 10ರಂದು ಜಿಯೋಫೋನ್ ನೆಕ್ಸ್ಟ್ ಬಿಡುಗಡೆಗೆ ಮುಂಚಿತವಾಗಿ, ಲಾಂಚ್ ಅನ್ನು ಮುಂದೂಡಲಾಗಿದೆ.
ಜಿಯೋ 75 ರೂಪಾಯಿ ಯೋಜನೆ ಪ್ರಯೋಜನಗಳೇನು?
ಈ ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 50 SMS ಗಳನ್ನು ಪಡೆಯುತ್ತಾರೆ ಮತ್ತು Jio TV, Jio Cinema, Jio News, Jio Security ಮತ್ತು Jio Cloud ನಂತಹ Jio ಆಪ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಹೊಸ ರೀಚಾರ್ಜ್ ಯೋಜನೆಯು ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವನ್ನು ಹೊಂದಿದೆ.
ಎಷ್ಟು ಡೇಟಾ ಸಿಗಲಿದೆ?
ಈ ಪ್ಲಾನ್ 200MB ಬೂಸ್ಟರ್ ಜೊತೆಗೆ ಪ್ರತಿ ತಿಂಗಳು 3GB 4G ಡೇಟಾ ಬರುತ್ತದೆ. ನೀವು ಈ GB ಡೇಟಾವನ್ನು ಪ್ರತಿದಿನ 100 MB ಯಂತೆ ಪಡೆಯುತ್ತೀರಿ. ಈ ಮಿತಿಯನ್ನು ತಲುಪಿದ ನಂತರ, ನಿಮ್ಮ ಡೇಟಾ ವೇಗವು 64 Kbps ಗೆ ಇಳಿಯುತ್ತದೆ. ರೂ .39 ಮತ್ತು ರೂ .69 ಪ್ಲಾನ್‌ಗಳನ್ನು ಸ್ಥಗಿತಗೊಳಿಸಿದ ನಂತರ, ರೂ .75 ರೀಚಾರ್ಜ್ ಪ್ಲಾನ್ ಈಗ ಜಿಯೋ ವೆಬ್‌ಸೈಟ್ ಮತ್ತು ಅದರ ಆ್ಯಪ್‌ನಲ್ಲಿ ಪಟ್ಟಿ ಮಾಡಿರುವ ಅಗ್ಗದ ಯೋಜನೆಯಾಗಿದೆ.
ಜಿಯೋ ಫೋನ್ ಬಳಕೆದಾರರಿಗೆ ಇತರ ಯೋಜನೆಗಳು
ಜಿಯೋ ಫೋನ್ ಬಳಕೆದಾರರಿಗೆ ರೂ 75 ರಿಂದ, ಮುಂದಿನ ದುಬಾರಿ ಪ್ಲಾನ್ 125 ರೂ. ನಷ್ಟಿದೆ. ಈ ಯೋಜನೆಯ ಲಾಭಗಳು ಈ ಹಿಂದಿನ ಯೋಜನೆಯನ್ನು ಹೋಲುತ್ತವೆ. ಇದರಲ್ಲಿ ದೈನಂದಿನ ಮಿತಿ 500 MB ಮತ್ತು SMS 300 ಆಗಿದೆ. ಇದರ ನಂತರ 155 ರೂಗಳ ಪ್ಲಾನ್ ಬರುತ್ತದೆ. ಇದರಲ್ಲಿ ಪ್ರತಿದಿನ 1 GB ಡೇಟಾ ಮತ್ತು 100 SMS ಲಭ್ಯವಿದೆ. ಉಳಿದ ಎರಡು ಪ್ರಯೋಜನಗಳು ಮೊದಲ ಎರಡು ಯೋಜನೆಗಳಂತೆಯೇ ಇರುತ್ತವೆ.
ಇದಲ್ಲದೆ 185 ರೂಪಾಯಿ ಯೋಜನೆಯ ಎಲ್ಲಾ ಲಾಭಗಳು ರೂ .155 ಪ್ಲಾನ್ ನಂತೆಯೇ ಇರುತ್ತವೆ. ಇದರಲ್ಲಿ ಕೇವಲ 2 GB ಡೇಟಾವನ್ನು ಪ್ರತಿದಿನ ನೀಡಲಾಗುತ್ತದೆ. ಕೊನೆಯ ಯೋಜನೆ 336 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ಬೆಲೆ 749 ರೂ. ಆಗಿದ್ದು ಈ ಯೋಜನೆಯು ಪ್ರತಿ ದಿನಗಳಿಗೊಮ್ಮೆ 2 GB ಡೇಟಾವನ್ನು ನೀಡುತ್ತದೆ. ಪ್ರತಿ 28 ದಿನಗಳ ಅವಧಿಗೆ ನೀವು 50 SMS ಅನ್ನು ಪಡೆಯುತ್ತೀರಿ.
ಜಿಯೋ ಫೋನ್ ನೆಕ್ಸ್ಟ್
ರಿಲಯನ್ಸ್ ಜಿಯೋ ಇತ್ತೀಚೆಗೆ ಜಿಯೋ ಫೋನ್ ನೆಕ್ಸ್ಟ್ ಬಿಡುಗಡೆ ಮುಂದೂಡುವುದಾಗಿ ಘೋಷಿಸಿತು. ಈ ಸಮಯದಲ್ಲಿ ಸ್ಮಾರ್ಟ್‌ಫೋನ್ ಸುಧಾರಿತ ಪರೀಕ್ಷೆಯ ಮೂಲಕ ಬಿಡುಗಡೆಯಾಗಲಿದ್ದು, ಮುಂಬರುವ ದೀಪಾವಳಿ ಹಬ್ಬಕ್ಕೂ ಮೊದಲು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಜಾಗತಿಕವಾಗಿ ಚಿಪ್ ಕೊರತೆಯಿಂದಾಗಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications