For Quick Alerts
ALLOW NOTIFICATIONS  
For Daily Alerts

ಜನವರಿ 1ರಿಂದ ಎಲ್ಲ ದೇಶೀ ವಾಯ್ಸ್ ಕಾಲ್ ಗಳನ್ನು ಉಚಿತ ಮಾಡಲಿದೆ ರಿಲಯನ್ಸ್ ಜಿಯೋ

By ಅನಿಲ್ ಆಚಾರ್
|

ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜಸ್ (IUC) ಸೇವೆಗಳು ಕೊನೆಯಾದ ಮೇಲೆ ರಿಲಯನ್ಸ್ ಜಿಯೋ ಇನ್ಫೋಕಾಮ್ ನಿಂದ ಮತ್ತೊಮ್ಮೆ ಆಫ್- ನೆಟ್ ದೇಶೀಯ ಧ್ವನಿ ಕರೆಯನ್ನು ಜನವರಿ 1, 2021ರಿಂದ ಉಚಿತ ಮಾಡಲಾಗಿದೆ.

"ಐಯುಸಿ ಶುಲ್ಕವು ಶೀಘ್ರವೇ ಕೊನೆಯಾಗುವ ನಿಟ್ಟಿನಲ್ಲಿ ಆಫ್- ನೆಟ್ ದೇಶೀಯ ಧ್ವನಿ ಕರೆಯನ್ನು ಶೂನ್ಯಕ್ಕೆ ತರುತ್ತೇವೆ ಎಂಬ ಸಂಕಲ್ಪಕ್ಕೆ ಬದ್ಧವಾಗಿರುವುದನ್ನು ಗೌರವಿಸುತ್ತೇವೆ. ಜಿಯೋದಿಂದ ಎಲ್ಲ ಆಫ್ ನೆಟ್ ದೇಶೀ ಧ್ವನಿ ಕರೆಯನ್ನು ಜನವರಿ 1, 2021ರಿಂದ ಉಚಿತ ಮಾಡಲಿದ್ದೇವೆ," ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೊಬೈಲ್ ಬಳಕೆದಾರರೇ, 2021ಕ್ಕೆ ನಿಮ್ಮ ಮೊಬೈಲ್ ಬಿಲ್ ಹೆಚ್ಚಾಗಬಹುದು!ಮೊಬೈಲ್ ಬಳಕೆದಾರರೇ, 2021ಕ್ಕೆ ನಿಮ್ಮ ಮೊಬೈಲ್ ಬಿಲ್ ಹೆಚ್ಚಾಗಬಹುದು!

ಆನ್- ನೆಟ್ ದೇಶೀಯ ಧ್ವನಿ ಕರೆಯನ್ನು ಯಾವಾಗಲೂ ಜಿಯೋ ನೆಟ್ ವರ್ಕ್ ನಲ್ಲೂ ಉಚಿತ ಮಾಡಲಾಗಿದೆ ಎಂದು ಕಂಪೆನಿ ಸ್ಪಷ್ಟಪಡಿಸಲಾಗಿದೆ.

ಜ. 1ರಿಂದ ದೇಶೀ ವಾಯ್ಸ್ ಕಾಲ್ ಗಳನ್ನು ಉಚಿತ ಮಾಡಲಿದೆ ರಿಲಯನ್ಸ್ ಜಿಯೋ

ಆಫ್- ನೆಟ್ ದೇಶೀಯ ಕರೆಗಳು ಜಿಯೋದಿಂದ ಯಾವುದೇ ನೆಟ್ ವರ್ಕ್ ಗೆ ಮತ್ತು ದೇಶದ ಯಾವುದೇ ಭಾಗಕ್ಕೆ ಜನವರಿ 1, 2021ರಿಂದ ಉಚಿತವಾಗಿರುತ್ತದೆ. ಐಯುಸಿ ಇರುವುದರಿಂದ ಗ್ರಾಹಕರಿಗೆ ಆಫ್ ನೆಟ್ ಧ್ವನಿ ಕರೆಗೆ ಶುಲ್ಕ ಬೀಳುತ್ತಿದೆ.

2019ರ ಸೆಪ್ಟೆಂಬರ್ ನಲ್ಲಿ ಟ್ರಾಯ್ ನಿಂದ ಮೊಬೈಲ್ ಟು ಮೊಬೈಲ್ ಗೆ ಕರೆ ಐಯುಸಿ ಜಾರಿ ಜನವರಿ 1, 2020ರ ಆಚೆಗೂ ವಿಸ್ತರಿಸಿತ್ತು. ಆ ನಂತರ ಗ್ರಾಹಕರ ಆಫ್- ನೆಟ್ ಧ್ವನಿ ಕರೆಗಳಿಗೆ ಕರೆ ವಿಧಿಸಲು ಆರಂಭಿಸಿತು. ಐಯುಸಿ ಶುಲ್ಕಕ್ಕೆ ಸಮನಾಗಿ ಅದು ಅನ್ವಯ ಆಗಿತ್ತು.

ನಿಯಂತ್ರಕರಿಂದ ಐಯುಸಿ ತೆಗೆಯುವ ತನಕ ಶುಲ್ಕ ವಿಧಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿತ್ತು. "VoLTEಯಂಥ ಮುಂದುವರಿದ ತಂತ್ರಜ್ಞಾನದ ಸೇವೆ ಸಾಮಾನ್ಯ ಭಾರತೀಯರಿಗೂ ದೊರೆಯುವಂತಾಗಬೇಕು ಎಂಬುದಕ್ಕೆ ಜಿಯೋ ಬದ್ಧವಾಗಿ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

English summary

Reliance Jio To Non-Jio Voice Calls Will Be Free From January 1, 2021

India's leading telecom operator Reliance Jio to non Jio call will be free from January 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X