For Quick Alerts
ALLOW NOTIFICATIONS  
For Daily Alerts

ಇಎಂಐಗಳ ಮೇಲೆ ಆರು ತಿಂಗಳ ನಿಷೇಧ: ಕೆಲವು ಕ್ಷೇತ್ರಗಳಿಗೆ ಮತ್ತೆ ವಿನಾಯಿತಿ?

|

ನವದೆಹಲಿ: ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಆರ್‌ಬಿಐ, ಸಾಲದ ಮೇಲಿನ ಇಎಂಐ ಕಟ್ಟಲು ಜನರಿಗೆ ಆರು ತಿಂಗಳು ಮುಂದೂಡಿಕೆ ಅವಕಾಶ ನೀಡಿತ್ತು. ಆಗಸ್ಟ್ ತಿಂಗಳಿಗೆ ಈ ವಿನಾಯಿತಿ ಕೊನೆಯಾಗಲಿದೆ.

ಆದರೆ, ಕೊರೊನಾ ಲಾಕ್‌ಡೌನ್ ಮಾತ್ರ ಇನ್ನು ವ್ಯಾಪಾಕವಾಗಿ ನಡೆಯುತ್ತಿರುವುದರಿಂದ ಉದ್ಯೋಗ ನಷ್ಟ, ಆದಾಯ ನಷ್ಟದ ಭೀತಿಯಲ್ಲಿ ಜನ ಇದ್ದಾರೆ. ಇದರಿಂದ ಇಎಂಐ ಕಟ್ಟಲು ಇನ್ನಷ್ಟು ಅವಕಾಶ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ ಈಗಾಗಲೇ ಬ್ಯಾಂಕುಗಳು ಮುಂದೂಡಿಕೆಗೆ ಮತ್ತೆ ಅವಕಾಶ ಇಲ್ಲ ಎಂದು ಹೇಳಿವೆ.

ಆಗಸ್ಟ್ 31 ರಂದು ಆರು ತಿಂಗಳ ಇಂಎಂಐ ನಿಷೇಧವನ್ನು ಮುಕ್ತಾಯಗೊಳಿಸಿದ ನಂತರವೂ ಸಾಲ ಮರುಪಾವತಿಯನ್ನು ವಿರಾಮಗೊಳಿಸುವ ಆಯ್ಕೆಯನ್ನು ವಿಮಾನಯಾನ, ವಾಹನ ಮತ್ತು ಪ್ರವಾಸೋದ್ಯಮದಂತಹ ತೀವ್ರ ಸಂಕಷ್ಟದಲ್ಲಿರುವ ಕ್ಷೇತ್ರಗಳಲ್ಲಿನ ಕಂಪನಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅವಕಾಶ ನೀಡಬಹುದು ಎನ್ನಲಾಗಿದೆ.

ಇಎಂಐ ಮೇಲೆ ಆರು ತಿಂಗಳ ನಿಷೇಧ: ಕೆಲವು ಕ್ಷೇತ್ರಗಳಿಗೆ ಮತ್ತೆ ವಿನಾಯಿತಿ

ಆಗಸ್ಟ್ ಮೀರಿ ಕೆಲವು ಭಾಗಗಳಿಗೆ ಲೋನ್ ಮೊರಟೋರಿಯಮ್ ನಿಷೇಧವನ್ನು ವಿಸ್ತರಿಸಲಾಗುವುದು ಎಂಬ ಮುನ್ಸೂಚನೆಯ ತೀರ್ಮಾನವಾಗಿದ್ದರೂ, ಈ ಬಗೆಗಿನ ಚೆರ್ಚೆ ಇನ್ನೂ ಪ್ರಗತಿಯಲ್ಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕೆಲವು ಕ್ಷೇತ್ರಗಳಿಗೆ ಸಾಲದಾತರಿಂದ ಬೆಂಬಲ ಅಗತ್ಯವಿರುತ್ತದೆ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.

English summary

Repayment Of EMI: Reserve Bank Of India May Extend Relief For Some

Repayment Of EMI: Reserve Bank Of India May Extend Relief For Some
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X