For Quick Alerts
ALLOW NOTIFICATIONS  
For Daily Alerts

ಡಾಯಿಶ್ ಬ್ಯಾಂಕ್ ಎಜಿಗೆ 2 ಕೋಟಿ ರುಪಾಯಿ ದಂಡ ವಿಧಿಸಿದ RBI

By ಅನಿಲ್ ಆಚಾರ್
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಂಗಳವಾರದಂದು ಡಾಯಿಶ್ ಬ್ಯಾಂಕ್ ಎಜಿಗೆ 2 ಕೋಟಿ ರುಪಾಯಿ ಜುಲ್ಮಾನೆ ವಿಧಿಸಿದೆ. ಠೇವಣಿ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ಕೆಲವು ನಿಯಮಾವಳಿಗಳ ಪಾಲನೆ ಮಾಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

 

ಡಾಯಿಶ್ ಬ್ಯಾಂಕ್ ಹಣಕಾಸು ಸ್ಥಿತಿಯ ಬಗ್ಗೆ ಮಾರ್ಚ್ 31, 2019ಕ್ಕೆ ಕಾನೂನಿನ ಅನ್ವಯ ಪರಿಶೀಲನೆ ಮಾಡಿದಾಗ ಮತ್ತು ರಿಸ್ಕ್ ಮ್ಯಾನೇಜ್ ಮೆಂಟ್ ಮೌಲ್ಯಮಾಪನ ಮಾಡಿದಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿ ನಿಯಮಾವಳಿ 2016ಕ್ಕೆ ಅನುಸಾರವಾಗಿ ಠೇವಣಿಗಳ ಮೇಲಿನ ಬಡ್ಡಿ ದರ ಪಾಲನೆ ಆಗುತ್ತಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಬಜಾಜ್ ಫೈನಾನ್ಸ್ ಗೆ 2.5 ಕೋಟಿ ರು. ದಂಡ ಹಾಕಿದ ಆರ್ ಬಿಐ

ಆ ಪರಿಶೀಲನೆ ನಡೆಸಿದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಡಾಯಿಶ್ ಬ್ಯಾಂಕ್ ಗೆ ಶೋಕಾಸ್ ನೋಟಿಸ್ ನೀಡಿತ್ತು. ನೋಟಿಸ್ ಗೆ ಬ್ಯಾಂಕ್ ನೀಡಿದ ಪ್ರತಿಕ್ರಿಯೆ, ವೈಯಕ್ತಿಕ ಅಹವಾಲನ್ನು ಮೌಖಿಕವಾಗಿ ಕೇಳಿದ ಮೇಲೆ ಹಾಗೂ ಹೆಚ್ಚುವರಿ ಮಾಹಿತಿಯನ್ನು ಪರೀಕ್ಷಿಸಿದ ಮೇಲೆ ನಿಯಮಾವಳಿಗಳ ಪಾಲನೆ ಆಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದರ ಜತೆಗೆ ಹಣವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಭಾರತದ ಕೇಂದ್ರ ಬ್ಯಾಂಕ್ ತಿಳಿಸಿದೆ.

ಡಾಯಿಶ್ ಬ್ಯಾಂಕ್ ಎಜಿಗೆ 2 ಕೋಟಿ ರುಪಾಯಿ ದಂಡ ವಿಧಿಸಿದ RBI

ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಡಾಯಿಶ್ ಬ್ಯಾಂಕ್ ಎಜಿಗೆ ಮಂಗಳವಾರ 2 ಕೋಟಿ ರುಪಾಯಿ ದಂಡವನ್ನು ವಿಧಿಸಿದೆ. ಅಂದ ಹಾಗೆ ಈ ಕ್ರಮವು ನಿಯಮಾವಳಿಗಳ ಪಾಲನೆಯಲ್ಲಿನ ನ್ಯೂನ್ಯತೆಯಿಂದ ತೆಗೆದುಕೊಂಡಿರುವುದೇ ವಿನಾ ಬೇರೆ ಯಾವ ಕಾರಣವೂ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

English summary

Reserve Bank Of India Imposes Rs 2 Crore Fine To Deutsche Bank AG

Non compliance of interest guidelines Reserve Bank of India imposes Rs 2 crore penalty to Deutsche Bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X