For Quick Alerts
ALLOW NOTIFICATIONS  
For Daily Alerts

Safest Banks in India : ಭಾರತದ ಸುರಕ್ಷಿತ-ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿ ಬಿಡುಗಡೆ: ಆರ್‌ಬಿಐ

By Shankrappa Parangi
|

ಬೆಂಗಳೂರು, ಜನವರಿ 06: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದಲ್ಲಿ ಯಾವ ಬ್ಯಾಂಕಿಂಗ್ ಸಂಸ್ಥೆಗಳು ಸುರಕ್ಷಿತ ಹಾಗೂ ಹೆಚ್ಚು ವಿಶ್ವಾಸಾರ್ಹವಾಗಿವೆ ಎಂಬುದನ್ನು ಬಹಿರಂಗಪಡಿಸಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಇವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಭಾರತದ ಕೇಂದ್ರ ಬ್ಯಾಂಕ್‌ ಬಿಡುಗಡೆ ಮಾಡಿದ ವಿಶ್ವಾಸಾರ್ಹ ಮತ್ತು ಸುರಕ್ಷಿತ ಪಟ್ಟಿಯಲ್ಲಿವೆ.

 ಹರಿದ ನೋಟನ್ನು ಬದಲಾಯಿಸಬೇಕೇ, ಆರ್‌ಬಿಐ ನಿಯಮ ತಿಳಿಯಿರಿ ಹರಿದ ನೋಟನ್ನು ಬದಲಾಯಿಸಬೇಕೇ, ಆರ್‌ಬಿಐ ನಿಯಮ ತಿಳಿಯಿರಿ

ಗ್ರಾಹಕರು ಸೇರಿದಂತೆ ಭಾರತೀಯ ಆರ್ಥಿಕತೆಯು ಬ್ಯಾಂಕಿಂಗ್ ಸಂಸ್ಥೆಗಳ ಮೇಲೆ ಮೇಲೆ ಹೆಚ್ಚು ಅವಲಂಬಿತವಾಗಿದೆ. ಗ್ರಾಹಕರು ನಷ್ಟ ಅನುಭವಿಸಿದರೆ ಅದು ಇಡೀ ರಾಷ್ಟ್ರದ ಆರ್ಥಿಕತೆಗೆ ಹೊಡೆತ ಬಿದ್ದಂತೆ. ಎರಡು ವಾಣಿಜ್ಯ ಬ್ಯಾಂಕ್‌ಗಳು ಮತ್ತು ಒಂದು ಸಾರ್ವಜನಿಕ ಬ್ಯಾಂಕ್ ಆರ್‌ಬಿಐನ ದೇಶೀಯ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್‌ಗಳ (ಡಿ-ಎಸ್‌ಐಬಿ) ಪಟ್ಟಿಯಲ್ಲಿವೆ. ಪಟ್ಟಿಯಲ್ಲಿ ಕೆಲವು ಪರಿಚಿತ ಮತ್ತು ದೊಡ್ಡ ಬ್ಯಾಂಕ್ ಹೆಸರುಗಳು ಕೇಳಿ ಬಂದಿವೆ.

ಭಾರತದ ಸುರಕ್ಷಿತ-ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿ ಬಿಡುಗಡೆ: ಆರ್‌ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ನ ಸಾರ್ವಜನಿಕ ವಲಯದ ಸಂಸ್ಥೆಯಾದರೆ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಖಾಸಗಿ ವಲಯದ ಸಂಸ್ಥೆಗಳು ಆಗಿವೆ. ಭಾರತದಲ್ಲಿನ ಕೆಲವು ದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಹಣಕಾಸು ಸಂಸ್ಥೆಗಳು ಈ ದೇಶೀಯ ಮಹತ್ವದ ಬ್ಯಾಂಕ್‌ಗಳ ಪಟ್ಟಿಯಲ್ಲಿ ಸೇರಿವೆ. ಆದರೆ ಈ ಎಲ್ಲ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಕಠಿಣ ನಿಯಮಗಳು ಅನ್ವಯವಾಗಲಿವೆ.

ದಿವಾಳಿಯಾದರೆ ಬ್ಯಾಂಕ್‌ಗಳಿಗೆ ಸರ್ಕಾರ ನೆರವು

ಈ ಹಣಕಾಸು ಸಂಸ್ಥೆಗಳು ಅವಶ್ಯಕತೆಗಳನ್ನು ಪೂರೈಸಲು ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ಶ್ರೇಣಿ 1ರ ಇಕ್ವಿಟಿಯಾಗಿ ನಿರ್ವಹಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಎಸ್‌ಬಿಐ ತನ್ನ ಕಾಯ್ದಿರಿಸಿದ ಆಸ್ತಿಗಳ ಶೇ.0.60ರಷ್ಟನ್ನು ಶ್ರೇಣಿ 1ರ ಇಕ್ವಿಟಿಯಾಗಿ ಇಡಲು ಬ್ಯಾಂಕ್‌ಗಳಿಗೆ ಸೂಚಿಸುತ್ತದೆ. ಅದರಂತೆ ಖಾಸಗಿ ವಲಯದ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಕೇವಲ ಶೇ.0.20ರಷ್ಟು ಇಕ್ವಿಟಿಯಾಗಿ ನಿರ್ವಹಿಸಬೇಕಿದೆ.

2015 ರಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಹಣಕಾಸು ವ್ಯವಸ್ಥೆ ಮತ್ತು ಆರ್ಥಿಕತೆಯಲ್ಲಿ ನಿರ್ಣಾಯಕ ಬ್ಯಾಂಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. ವಾರ್ಷಿಕವಾಗಿ ಆಗಸ್ಟ್‌ನಲ್ಲಿ ಆರ್‌ಬಿಐ ಆಯಾ ಬ್ಯಾಂಕ್‌ಗಳ ವ್ಯಾಪ್ತಿಯನ್ನು ಆಧರಿಸಿ ಮೌಲ್ಯಮಾಪನ ನಡೆಸುತ್ತದೆ. ಸದ್ಯ ಪಟ್ಟಿಯಲ್ಲಿ ಕೇವಲ ಮೂರು ಹಣಕಾಸು ಸಂಸ್ಥೆಗಳನ್ನು ಉಲ್ಲೇಖಿಸಲಾಗಿದೆ. ಈ ಮೂರು ಬ್ಯಾಂಕ್‌ಗಳು ದಿವಾಳಿತನದಿಂದ ಸುರಕ್ಷಿತವಾಗಿವೆ. ಒಂದು ವೇಳೆ ಇವುಗಳಿಗೆ ಸಂಕಷ್ಟ ಎದುರಾದರೆ ಸರ್ಕಾರವೇ ನೆರವಿಗೆ ಬರಲಿದೆ.

2015 ಮತ್ತು 2016ರ ಆರಂಭದಲ್ಲಿ ಎಸ್‌ಬಿಐ ಖಾಸಗಿ ವಲಯದಲ್ಲಿ ಕೇವಲ ಐಸಿಐಸಿಐ ಬ್ಯಾಂಕ್ ಅನ್ನು ಮಾತ್ರ ಈ ಪಟ್ಟಿ ಮಾಡಿತ್ತು. ಮಾರ್ಚ್ 2017 ರ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ನಂತರ ಪಟ್ಟಿಗೆ ಸೇರಿಸಿದೆ ಎನ್ನಲಾಗಿದೆ.

English summary

Safest Banks in India : RBI Released list of the nation's most trusted banks

SBI, HDFC and ICICI banks are named in the list of safe and reliable banks released by Reserve Bank of India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X