16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ

ಹೆಚ್ಚಿದ ಆಹಾರ ಬೆಲೆಯಿಂದಾಗಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇಕಡಾ 4.62ರಷ್ಟು ಏರಿಕೆಯಾಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಅಕ್ರೋಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದ್ದು 16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದೆ

ಜುಲೈನಿಂದ-ಆಗಸ್ಟ್‌ವರೆಗೆ ಸುರಿದ ಭಾರೀ ಮಳೆಯಿಂದಾಗಿ ಸರಬರಾಜಿನಲ್ಲಿ ಅಡ್ಡಿಯುಂಟಾಗಿ ತರಕಾರಿ ಬೆಲೆಗಳು ಏರಿಕೆ ಕಂಡಿದ್ದವು. ಆಹಾರ ಪದಾರ್ಥಗಳ ಬೆಲೆ ಏರಿಕೆಯು ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 5.11 ರಿಂದ ಅಕ್ರೋಬರ್ ನಲ್ಲಿ ಶೇಕಡಾ 7.89ರಷ್ಟು ಏರಿಕೆಯಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಿತಕರ ಮಟ್ಟವಾದ ಶೇಕಡಾ 4ಕ್ಕಿಂತ ಹೆಚ್ಚಾಗಿದೆ. ಗ್ರಾಹಕ ದರ ಸೂಚ್ಯಂಕ (CPI) ಸಮೀಕ್ಷೆಯ ಪ್ರಕಾರ ಸೆಪ್ಟೆಂಬರ್‌ಗಿಂತಲೂ ಹೆಚ್ಚಾಗಿ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರವು 4.62ಕ್ಕೆ ಏರಿಕೆಯಾಗಿದೆ.

2018 ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ 16 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದ್ದು ಗರಿಷ್ಟ ಮಟ್ಟ ತಲುಪಿದೆ. ಕೇಂದ್ರೀಯ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು(ಎಂಪಿಸಿ) ರೆಪೊ ದರಗಳನ್ನು ತಗ್ಗಿಸುವ ನಿರ್ಧಾರಕ್ಕೆ ಬರುವುದರ ಮೇಲೆ ಈ ವಿದ್ಯಮಾನವು ಪ್ರಭಾವ ಬೀರಲಿದೆ.

16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ

'ಆರ್ಥಿಕ ಬೆಳವಣಿಗೆಯು ಮಂದಗತಿಯೊಂದಿಗೆ, ಆರ್‌ಬಿಐ ಹಣಕಾಸು ನೀತಿ ವಿಮರ್ಶೆಯಲ್ಲಿ ಬೆಳವಣಿಗೆಯ ಕಾಳಜಿಗಳು ಪ್ರಾಬಲ್ಯ ಸಾಧಿಸುತ್ತವೆ ಎಂದು ನಾವು ನಂಬುತ್ತೇವೆ. ಮತ್ತು ಡಿಸೆಂಬರ್ ನ ನೀತಿ ವಿಮರ್ಶೆಯಲ್ಲಿ ಮತ್ತಷ್ಟು ದರ ಕಡಿತವನ್ನು ನಿರೀಕ್ಷಿಸುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ನ ಮುಖ್ಯ ಅರ್ಥಶಾಸ್ತ್ರಜ್ಞ ಎಂ.ಬಿ. ದೇವೇಂದ್ರ ಕುಮಾರ್ ಪಂತ್ ಹೇಳಿದ್ದಾರೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕವೂ ಸೆಪ್ಟೆಂಬರ್ ತಿಂಗಳಿನಲ್ಲಿ ಶೇಕಡಾ 4.3ರಷ್ಟು ಕುಗ್ಗಿದ್ದು, 6 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ತಲುಪಿದೆ ಎಂದು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) ಬಿಡುಗಡೆ ಮಾಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+