ಚಿಲ್ಲರೆ ಹಣದುಬ್ಬರ ದರವು ಸತತ ಎರಡನೇ ತಿಂಗಳು- ಅಕ್ಟೋಬರ್ ನಲ್ಲಿ 7 ಪರ್ಸೆಂಟ್ ದಾಟಿದೆ. ಸಾಂಖ್ಯಿಕ ಮತ್ತ ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಗುರುವಾರದಂದು ಭಾರತದ ಚಿಲ್ಲರೆ ಹಣದುಬ್ಬರ ದರದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರದಲ್ಲಿ ರೀಟೇಲ್ ಹಣದುಬ್ಬರ ದರವು ಅಕ್ಟೋಬರ್ ನಲ್ಲಿ 7.61 ಪರ್ಸೆಂಟ್ ಇದ್ದು, ಸೆಪ್ಟೆಂಬರ್ ನಲ್ಲಿ 7.27 ಪರ್ಸೆಂಟ್ ಇತ್ತು.
ಈ ಮಧ್ಯೆ, ದೇಶದ ಕೈಗಾರಿಕೆ ಉತ್ಪಾದನೆಯನ್ನು ತೋರಿಸುವ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ) ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 0.2 ಪರ್ಸೆಂಟ್ ಬೆಳವಣಿಗೆ ದಾಖಲಿಸಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ 123.2 ಇದೆ. ಗ್ರಾಹಕ ದರ ಸೂಚ್ಯಂಕವು ಆರ್ ಬಿಐ ಇರಿಸಿಕೊಂಡಿರುವ 6 ಪರ್ಸೆಂಟ್ ಮಿತಿಗಿಂತ ಮೇಲಕ್ಕೆ ಸತತ ಏಳನೇ ತಿಂಗಳು ಹೆಚ್ಚಳ ಕಂಡಿದೆ.
ಸದ್ಯಕ್ಕೆ ಹಣಕಾಸು ನೀತಿಯಲ್ಲಿ ಸರಳ ಮಾಡುವ ಭರವಸೆ ಇಲ್ಲದಂತಾಗಿದೆ. ಆಹಾರ ಬೆಲೆಯಲ್ಲಿ ಹೆಚ್ಚಳ ಮುಂದುವದಿದೆ. ಕಳೆದ ಅಕ್ಟೋಬರ್ ನಲ್ಲಿ ಇದು 11 ಪರ್ಸೆಂಟ್ ದಾಟಿದೆ. ಗ್ರಾಹಕ ಆಹಾರ ದರ ಸೂಚ್ಯಂಕ (ಸಿಎಫ್ ಪಿಐ) ಅಥವಾ ಆಹಾರ ಹಣದುಬ್ಬರ ದರವು ಅಕ್ಟೋಬರ್ ನಲ್ಲಿ 11.07 ಪರ್ಸೆಂಟ್ ಆಗಿದ್ದರೆ, ಸೆಪ್ಟೆಂಬರ್ ನಲ್ಲಿ 10.68 ಪರ್ಸೆಂಟ್ ಇತ್ತು.

ಅಕ್ಟೋಬರ್ ಕೊನೆಗೆ ಈರುಳ್ಳಿ ಬೆಲೆಯು ನೂರು ರುಪಾಯಿ ಇತ್ತು. ಚಳಿಗಾಲದ ಬೆಳೆ ಮಾರುಕಟ್ಟೆಗೆ ಬರುವ ಸಾಧ್ಯತೆ ಹಾಗೂ ಸರ್ಕಾರದ ಕ್ರಮಗಳ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಇಳಿಕೆ ಮಾಡಲು ಸಹಾಯ ಆಯಿತು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications