ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ 6.58 ಪರ್ಸೆಂಟ್‌ಗೆ ಇಳಿಕೆ

ಫೆಬ್ರವರಿಯಲ್ಲಿ ಆರು ತಿಂಗಳ ನಂತರ ಚಿಲ್ಲರೆ ಹಣದುಬ್ಬರವು ಮೊದಲ ಬಾರಿಗೆ ಕುಸಿದಿದ್ದು, ತರಕಾರಿಗಳು ಮತ್ತು ಇತರ ಅಡುಗೆ ವಸ್ತುಗಳ ಬೆಲೆಗಳು 6.58 ಪರ್ಸೆಂಟ್‌ಗೆ ಇಳಿದಿದೆ ಎಂದು ಸರ್ಕಾರದ ಅಂಕಿ ಅಂಶಗಳು ಗುರುವಾರ ತೋರಿಸಿದೆ.

ಚಿಲ್ಲರೆ ಹಣದುಬ್ಬರವು ಈ ವರ್ಷದ ಜನವರಿಯಲ್ಲಿ 7.59 ಪರ್ಸೆಂಟ್ ಮತ್ತು 2019 ರ ಫೆಬ್ರವರಿಯಲ್ಲಿ 2.57 ರಷ್ಟಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ ಇದರ ಪ್ರಮಾಣವು ಸ್ವಲ್ಪ ತಗ್ಗಿದೆ.
ಜನವರಿ ತಿಂಗಳಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಮಾಂಸ ಮತ್ತು ಮೀನು ವಿಭಾಗದಲ್ಲಿ ಹಣದುಬ್ಬರವು 10.5 ಪರ್ಸೆಂಟ್‌ನಿಂದ 10.2 ಪರ್ಸೆಂಟ್‌ಗೆ ಇಳಿಕೆಯಾಗಿದೆ.

ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ 6.58 ಪರ್ಸೆಂಟ್‌ಗೆ ಇಳಿಕೆ

ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕಹಾಕಲಾಗಿದೆ. 2019ರಿಂದ ಹೆಚ್ಚುತ್ತಲ್ಲೇ ಸಾಗಿದ್ದ ಚಿಲ್ಲರೆ ಹಣದುಬ್ಬರವು ಮೊದಲ ಬಾರಿಗೆ ಇಳಿಮುಖದತ್ತ ಮುಖಮಾಡಿದೆ.

ತರಕಾರಿ ಬೆಲೆಯಲ್ಲಿನ ಹಣದುಬ್ಬರವು ಜನವರಿಯಲ್ಲಿ ಗರಿಷ್ಠ 50.19 ಪರ್ಸೆಂಟ್‌ ನಷ್ಟಿತ್ತು. ಆದರೆ ಫೆಬ್ರವರಿಯಲ್ಲಿ 31.61 ಪರ್ಸೆಂಟ್‌ಗೆ ಇಳಿದಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+