For Quick Alerts
ALLOW NOTIFICATIONS  
For Daily Alerts

ಚಿಲ್ಲರೆ ಹಣದುಬ್ಬರ ದರ ಡಿಸೆಂಬರ್ ನಲ್ಲಿ 7.35 ಪರ್ಸೆಂಟ್ ಗೆ ಏರಿಕೆ

|

ಚಿಲ್ಲರೆ ಹಣದುಬ್ಬರ ದರವು 2019ರ ಡಿಸೆಂಬರ್ ನಲ್ಲಿ 7.35% ಗೆ ಏರಿಕೆಯಾಗಿದೆ. ನವೆಂಬರ್ ತಿಂಗಳಲ್ಲಿ ಈ ಪ್ರಮಾಣ 5.54% ಇತ್ತು ಎಂದು ಸರ್ಕಾರದ ದತ್ತಾಂಶಗಳ ಮೂಲಕ ತಿಳಿದುಬಂದಿದೆ. 2018ರ ಡಿಸೆಂಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು 2.11 ಪರ್ಸೆಂಟ್ ಇತ್ತು.

2019ರ ಡಿಸೆಂಬರ್ ನಲ್ಲಿ ತರಕಾರಿಗಳ ಹಣದುಬ್ಬರವು 60.5%ಗೆ ಏರಿಕೆಯಾಗಿದೆ. ನವೆಂಬರ್ ನಲ್ಲಿ ಇದರ ಪ್ರಮಾಣ 36% ಇತ್ತು. ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡೇ ಡಿಸೆಂಬರ್ ನಲ್ಲಿ ಬಡ್ಡಿ ದರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅದಕ್ಕೂ ಮುನ್ನ ಐದು ಬಾರಿ ಬಡ್ಡಿ ಕಡಿತಗೊಳಿಸಿ, 135 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿತ್ತು.

ಚಿಲ್ಲರೆ ಹಣದುಬ್ಬರ ದರ ಡಿಸೆಂಬರ್ ನಲ್ಲಿ 7.35 ಪರ್ಸೆಂಟ್ ಗೆ ಏರಿಕೆ

ಭಾರತದ ವಾರ್ಷಿಕ ಹಣದುಬ್ಬರ ದರವು 6.20%ಗೆ ಏರಿಕೆ ಆಗಲಿದೆ ಎಂದು ರಾಯಿಟರ್ಸ್ ನಿಂದ ನಡೆಸಿದ ಸಮೀಕ್ಷೆಯಲ್ಲಿ ಐವತ್ತರಷ್ಟು ಆರ್ಥಿಕತಜ್ಞರು ಅಭಿಪ್ರಾಯ ಪಟ್ಟಿದ್ದರು. ಬಡ್ಡಿ ದರದ ಬಗ್ಗೆ ಫೆಬ್ರವರಿ 6ನೇ ತಾರೀಕು ನಡೆಯುವ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧಾರ ಮಾಡಲಿದೆ.

English summary

Retail inflation In December Increase To 7.35 Percent

India's retail inflation increased to 7.35% in December. Here is the complete details.
Story first published: Monday, January 13, 2020, 18:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X