ಭಾರತದ ಚಿಲ್ಲರೆ ಹಣದುಬ್ಬರವು 6 ವರ್ಷದ ಗರಿಷ್ಟ ಮಟ್ಟಕ್ಕೆ ತಲುಪುವ ಸಾಧ್ಯತೆ

ಜನವರಿ ತಿಂಗಳಿನಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಆರು ವರ್ಷದ ಗರಿಷ್ಟ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ಸಮೀಕ್ಷೆಯಲ್ಲಿ ತಿಳಿಸಿದೆ.

ರಾಯಿಟರ್ಸ್ ಸಮೀಕ್ಷೆಯಲ್ಲಿ ಅಲ್ಪಸಂಖ್ಯಾತ ಅರ್ಥಶಾಸ್ತ್ರಜ್ಞರ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಬಡ್ಡಿದರಗಳನ್ನು ತಡೆಹಿಡಿಯಲು ಕೇಂದ್ರ ಬ್ಯಾಂಕನ್ನು ಮನವೊಲಿಸಬಹುದು ಎಂದು ಹೇಳಿದೆ.
ಫೆಬ್ರವರಿ 5 ರಿಂದ 7ರ ಸಮೀಕ್ಷೆಯಲ್ಲಿ 40ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ಸಮೀಕ್ಷೆಯ ಭಾಗವಾಗಿ ವರದಿಯಲ್ಲಿ ತಿಳಿಸಿದ್ದು, ಭಾರತದ ವಾರ್ಷಿಕ ಗ್ರಾಹಕ ಬೆಲೆ ಹಣದುಬ್ಬರವು ಜನವರಿಯಲ್ಲಿ 7.40 ಪರ್ಸೆಂಟ್ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಕಳೆದ ಡಿಸೆಂಬರ್‌ನ 7.35 ಪರ್ಸೆಂಟ್‌ಗಿಂತ ಹೆಚ್ಚಾಗಿದೆ ಮತ್ತು 2014ರ ಮೇ ತಿಂಗಳ ನಂತರದ ಗರಿಷ್ಠ ದರವಾಗಿದೆ.

ಚಿಲ್ಲರೆ ಹಣದುಬ್ಬರವು 6 ವರ್ಷದ ಗರಿಷ್ಟ ಮಟ್ಟಕ್ಕೆ ತಲುಪುವ ಸಾಧ್ಯತೆ

ಜನವರಿಯಲ್ಲಿ ಅರ್ಧದಷ್ಟು ಅರ್ಥಶಾಸ್ತ್ರಜ್ಞರು ಬೆಲೆ ಮೇಲೆ ಒತ್ತಡಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದಿದ್ದರು. ಆದರೆ ಆರ್‌ಬಿಐನ ಮಧ್ಯಮ ಅವಧಿಯ ಗುರಿ ವ್ಯಾಪ್ತಿಯು 2 ಪರ್ಸೆಂಟ್‌ನಿಂದ 6 ಪರ್ಸೆಂಟ್‌ರೊಳಗೆ ಅದು ಬೀಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದು ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರದಲ್ಲಿ ಗಮನಾರ್ಹ ಕುಸಿತವು ಅಸಂಭವವಾಗಿದೆ ಎಂದು ಸೂಚಿಸುತ್ತದೆ.

ಆರ್ಥಿಕ ಬೆಳವಣಿಗೆಯು ನಿಧಾನವಾಗಿದ್ದರೂ, ಆರ್‌ಬಿಐ ತನ್ನ ರೆಪೊ ದರವನ್ನು(ಬಡ್ಡಿ ದರಗಳು) 5.15ಪರ್ಸೆಂಟ್‌ಗೆ ಬದಲಾಯಿಸದೆ ಮುಂದುವರಿಸಿತು. ಇದು ಮುಂಬರುವ ಹಣಕಾಸು ವರ್ಷದ ಮೊದಲಾರ್ಧದಲ್ಲಿ 5 ಪರ್ಸೆಂಟ್ ಮತ್ತು 5.4 ಪರ್ಸೆಂಟ್ ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+