Jio AirFiber: ಗಣೇಶ ಚತುರ್ಥಿ ದಿನ ಜಿಯೋ ಏರ್‌ಫೈಬರ್ ಪ್ರಾರಂಭ, ಮುಕೇಶ್ ಅಂಬಾನಿ ಘೋಷಣೆ

ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್) 46 ನೇ ವಾರ್ಷಿಕ ಸಾಮಾನ್ಯ ಸಭೆಯು (ಎಜಿಎಂ) ಸೋಮವಾರ (ಆಗಸ್ಟ್ 28) ನಡೆದಿದ್ದು, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಸಭೆಯಲ್ಲಿ ಮಾತನಾಡಿದ್ದಾರೆ. ಮುಕೇಶ್ ಅಂಬಾನಿ ಎಜಿಎಂನಲ್ಲಿ ತಮ್ಮ ಭಾಷಣದಲ್ಲಿ ಜಿಯೋ ಏರ್‌ಫೈಬರ್ ಅನ್ನು ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.

ರಿಲಯನ್ಸ್ ಜಿಯೋ ಸೋಮವಾರ ತನ್ನ ಹೊಸ ಏರ್‌ಫೈಬರ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರೊಂದಿಗೆ, ಕಂಪನಿಯು ದಿನಕ್ಕೆ 1,50,000 ಸಂಪರ್ಕಗಳನ್ನು ಒದಗಿಸಲು ಯೋಜಿಸಿದೆ. ಜಿಯೋ ನೆಟ್‌ವರ್ಕ್ ಅನ್ನು 200 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ಗಣೇಶ ಚತುರ್ಥಿ ದಿನ ಜಿಯೋ ಏರ್‌ಫೈಬರ್ ಪ್ರಾರಂಭ, ಅಂಬಾನಿ ಘೋಷಣೆ

ಕಂಪನಿಯು ಸುಮಾರು 10 ಮಿಲಿಯನ್ ಜಿಯೋಫೈಬರ್ ಗ್ರಾಹಕರನ್ನು ಹೊಂದಿದೆ. ನೆಟ್‌ವರ್ಕ್ 1.5 ಮಿಲಿಯನ್ ಕಿಮೀಗಳಲ್ಲಿ ಹರಡಿದೆ ಎಂದು ಹೇಳಿಕೊಂಡಿದೆ. "ಜಿಯೋ ಏರ್‌ಫೈಬರ್ ಫೈಬರ್‌ನ ಅಗತ್ಯವನ್ನು ಪೂರೈಸಲು ಪ್ಯಾನ್ ಇಂಡಿಯಾ 5ಜಿ ನೆಟ್‌ವರ್ಕ್ ಅನ್ನು ಬಳಸುತ್ತದೆ. ಜಿಯೋ ಏರ್‌ಫೈಬರ್‌ನೊಂದಿಗೆ ನಾವು ದಿನಕ್ಕೆ 150,000 ಸಂಪರ್ಕಗಳಿಗೆ ಇಂಟರ್ನೆಟ್ ವಿಸ್ತರಣೆಯನ್ನು ಸೂಪರ್‌ಚಾರ್ಜ್ ಮಾಡಬಹುದು," ಎಂದು ಮುಕೇಶ್ ಅಂಬಾನಿ ಭಾಷಣದಲ್ಲಿ ಹೇಳಿದ್ದಾರೆ.

ಜಿಯೋ ಏರ್‌ಫೈಬರ್ ಎಂದರೇನು?

ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯು ಯಾವುದೇ ತಂತಿಗಳನ್ನು ಬಳಸದೆಯೇ ಇಂಟರ್‌ನೆಟ್ ಅನ್ನು ಸರಬರಾಜು ಮಾಡುವ ವ್ಯವಸ್ಥೆಯೇ ಜಿಯೋ ಏರ್‌ಫೈಬರ್ ಆಗಿದೆ. ಜಿಯೋ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡೇಟಾದ ಪ್ರಕಾರ, ಜಿಯೋ ಏರ್‌ಫೈಬರ್ ಅನ್ನು ಆಯ್ಕೆ ಮಾಡಬಹುದು, ಮತ್ತು ಅದನ್ನು ಬಳಕೆ ಮಾಡಬಹುದಾಗಿದೆ.

ಇದರೊಂದಿಗೆ ಬಳಕೆದಾರರು ತಮ್ಮ ಮನೆಯಲ್ಲಿ ತಮ್ಮದೇ ಆದ ವೈ-ಫೈ ಹಾಟ್‌ಸ್ಪಾಟ್ ಅನ್ನು ಹೊಂದಬಹುದು. ಟ್ರೂ 5ಜಿ ಬಳಸಿಕೊಂಡು ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್‌ಗೆ ಸಂಪರ್ಕಪಡಿಸಬಹುದು. ಜಿಯೋ ಏರ್‌ಪೈಬರ್ ಜೊತೆಗೆ ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಗಿಗಾಬಿಟ್ ವೇಗದ ಇಂಟರ್ನೆಟ್‌ ಅನ್ನು ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+