ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್) 46 ನೇ ವಾರ್ಷಿಕ ಸಾಮಾನ್ಯ ಸಭೆಯು (ಎಜಿಎಂ) ಸೋಮವಾರ (ಆಗಸ್ಟ್ 28) ನಡೆಯಲಿದ್ದು, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಕೂಡಾ ಉಪಸ್ಥಿತರಿರಲಿದ್ದಾರೆ. ಈ ನಿಟ್ಟಿನಲ್ಲಿ ಈ ಸಭೆಯಲ್ಲಿ ಮುಕೇಶ್ ಅಂಬಾನಿ ಭಾಷಣದ ಮೇಲೆ ಹೂಡಿಕೆದಾರರ ಚಿತ್ತ ನೆಟ್ಟಿದೆ. ಹಾಗೆಯೇ ಬಿಎಸ್‌ಇ, ಎನ್‌ಎಸ್‌ಇ ಸ್ಟಾಕ್ ಮಾರುಕಟ್ಟೆ ಮೇಲೆ ಹೂಡಿಕೆದಾರ ಚಿತ್ತವಿದೆ.
ರಿಟೇಲ್ ಮತ್ತು ಡಿಜಿಟಲ್ ವ್ಯವಹಾರದ ಐಪಿಒಗಾಗಿ ಟೈಮ್‌ಲೈನ್, 5ಜಿ ಆರಂಭ, ಕ್ಲೀನ್ ಎನರ್ಜಿ ವ್ಯವಹಾರದ ಅಡಿಯಲ್ಲಿ ಯೋಜನೆಗಳು ಮತ್ತು O2C ವ್ಯವಹಾರದಲ್ಲಿ ಪಾಲು ಮೊದಲಾದ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಎಜಿಎಂ ವರ್ಚುವಲ್ ಆಗಿ ನಡೆಯಲಿದ್ದು, ದೇಶಾದ್ಯಂತ ಜನರು ಇದನ್ನು ವೀಕ್ಷಿಸಬಹುದಾಗಿದೆ.

ಸಭೆಯ ಸಮಯ ತಿಳಿಯಿರಿ
46 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ವೀಡಿಯೊ ಕಾನ್ಫರೆನ್ಸಿಂಗ್ ("VC") / ಇತರೆ ಆಡಿಯೋ-ವಿಷುಯಲ್ ಜಾಲಗಳ ("OAVM") ಮೂಲಕ ನಡೆಯಲಿದೆ. ಎಜಿಎಂನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಡಿ ಅಂಬಾನಿ ಭಾಷಣವನ್ನು ಮಾಡಲಿದ್ದಾರೆ.
ಮಾಧ್ಯಮಗಳು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿಯ ಭಾಷಣದ ಲೈವ್ ವೀಡಿಯೊ (ಕ್ಲೀನ್ ಫೀಡ್) ಅನ್ನು ಈ ಕೆಳಗಿನ ಮೂಲಗಳಲ್ಲಿ ಲೈವ್ ಆಗಿ ನೋಡಬಹುದಾಗಿದೆ:
ಭಾಷಣ ಎಲ್ಲಿ, ಹೇಗೆ ನೋಡುವುದು?
ಜಿಯೋಮೀಟ್ ಲಿಂಕ್: https://jiomeet.jio.com/rilagm/joinmeeting
ಎಜಿಎಂ ಸಭೆಯನ್ನು ವೀಕ್ಷಿಸಲು ನಿಮ್ಮ ಪೂರ್ಣ ಹೆಸರು ಮತ್ತು ಸಂಸ್ಥೆ, ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಎಜಿಎಂನ ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಆಕ್ಸಸ್ ಲಭ್ಯವಾಗುತ್ತದೆ.
ಆರ್‌ಟಿಎಂಪಿ ಯುಆರ್‌ಎಲ್: ಡೈರೆಕ್ಟ್ ರಿಸೀವ್
ಪ್ರಾಥಮಿಕ ಸ್ಟ್ರೀಮ್ ಲಿಂಕ್: rtmp://136.233.57.194:1935/event/RILAGM2023
ಪ್ರತ್ಯೇಕ ಸ್ಟ್ರೀಮ್ ಲಿಂಕ್:
rtmp://115.241.69.102:1935/event/RILAGM2023
ಯೂಟ್ಯೂಬ್
ರಿಲಯನ್ಸ್ ಅಪ್‌ಡೇಟ್ಸ್ ಚಾನೆಲ್: https://www.youtube.com/@RelianceUpdates
ಇತರೆ ಯುಆರ್‌ಎಲ್:
https://youtube.com/live/I2OV4qbaurUಜಿಯೋ ಚಾನೆಲ್: https://www.youtube.com/jio
https://youtube.com/live/aQNZvj0Q8iQ
ಫೇಸ್‌ಬುಕ್
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪೇಜ್:
https://www.facebook.com/RelianceIndustriesLimitedಇತರೆ: https://www.facebook.com/events/997149691555558/
ಜಿಯೋ ಪೇಜ್: https://www.facebook.com/Jio
ಇತರೆ ಮೂಲ: https://www.facebook.com/events/206530869074918/
ಎಕ್ಸ್ ಅಥವಾ ಟ್ವಿಟ್ಟರ್
@FlameOfTruth (https://twitter.com/flameoftruth)
@RelianceJio (https://twitter.com/reliancejio)
https://twitter.com/i/broadcasts/1jMJgLkEvlOxL
ಇನ್‌ಸ್ಟಾಗ್ರಾಂ
@RelianceUpdates (https://www.instagram.com/relianceupdates)
@RelianceJio (https://www.instagram.com/reliancejio)
ಹ್ಯಾಷ್‌ಟ್ಯಾಗ್‌ಗಳ ಬಳಕೆ #RILAGM ಮತ್ತು #WeCare
"ನಮ್ಮ ಚಾಟ್‌ಬಾಟ್ ವಾಟ್ಸಾಪ್ ಸಂಖ್ಯೆ +91-79771-11111 ಮೂಲಕ ನಿಮಗೆ ಸಹಾಯ ಮಾಡಲು ನಾವು ಸಿದ್ಧವಾಗಿರುತ್ತೇವೆ," ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೇಳಿದೆ.
ಶುಕ್ರವಾರ, ಆರ್‌ಐಎಲ್ ಷೇರಿನ ಬೆಲೆ ಬಿಎಸ್‌ಇಯಲ್ಲಿ ಶೇಕಡ 0.4 ರಷ್ಟು ಕುಸಿದು 2469.95 ರೂಪಾಯಿಗೆ ತಲುಪಿದೆ. ಕಂಪನಿಯು ಮಾರುಕಟ್ಟೆ ಮೌಲ್ಯ ಲೆಕ್ಕಾಚಾರದಲ್ಲಿ ಭಾರತದಲ್ಲಿ ಅತೀ ದೊಡ್ಡ ಸಂಸ್ಥೆಯಾಗಿದೆ. ಆಗಸ್ಟ್ 25, 2023 ರಂತೆ, ಸಂಸ್ಥೆಯ ಮಾರುಕಟ್ಟೆ ಮೌಲ್ಯವು 16.71 ಲಕ್ಷ ಕೋಟಿ ರೂಪಾಯಿ ಆಗಿದೆ. ಸೋಮವಾರ ಈ ಸಮಯಕ್ಕೆ ಆರ್‌ಐಎಲ್ ಷೇರಿನ ಬೆಲೆ ಶೇಕಡ 0.063 ಏರಿಕೆಯಾಗಿ 2,471.70 ರೂಪಾಯಿಗೆ ತಲುಪಿದೆ.


Click it and Unblock the Notifications