ಭಾರತದ ಅತಿದೊಡ್ಡ ಲಿಕ್ವಿಡ್ ಆಕ್ಸಿಜನ್ ಉತ್ಪಾದಕವಾಗಿ ಹೊರಹೊಮ್ಮಿದ ರಿಲಯನ್ಸ್ ಇಂಡಸ್ಟ್ರೀಸ್

ಭಾರತವು ಹಿಂದೆಂದೂ ಕಾಣದ ರೀತಿಯಲ್ಲಿ ಕೋವಿಡ್-19 ಸಂಕಷ್ಟವನ್ನು ಅನುಭವಿಸುತ್ತಿದೆ. ಆಕ್ಸಿಜನ್ ಕೊರತೆ ಕೂಡ ದೇಶದಲ್ಲಿ ಹೆಚ್ಚಾಗಿದ್ದು, ಕೋವಿಡ್ ಎರಡನೆಯ ಅಲೆಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ರಿಲಯನ್ಸ್ ಇಂಡಸ್ಟ್ರೀಸ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ದೇಶದೆಲ್ಲೆಡೆ ತೀವ್ರ ಅನಾರೋಗ್ಯಕ್ಕೆ ಒಳಗಾದ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಲಭ್ಯತೆಯ ಖಾತರಿಯು ಈ ಸಂಕಷ್ಟದ ಸಮಯದ ತುರ್ತು ಅಗತ್ಯವಾಗಿದೆ. ರಿಲಯನ್ಸ್ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್‌ಗಳ ಸಾಂಪ್ರದಾಯಿಕ ಉತ್ಪಾದಕ ಕಂಪೆನಿಯಲ್ಲ. ಆದರೂ ಸಾಂಕ್ರಾಮಿಕದ ಕಾರಣದಿಂದಾಗಿ ವೈದ್ಯಕೀಯ ಆಕ್ಸಿಜನ್ ಉತ್ಪಾದನೆಗೆ ಮುಂದಾಗಿದ್ದು, ಪ್ರಸ್ತುತ ಭಾರತದ ಅತಿ ದೊಡ್ಡ ಉತ್ಪಾದಕನಾಗಿ ರಿಲಯನ್ಸ್ ಇಂಡಸ್ಟ್ರೀಸ್ ಬೆಳೆದಿದೆ.

ಭಾರತದ ಅತಿದೊಡ್ಡ ಲಿಕ್ವಿಡ್ ಆಕ್ಸಿಜನ್ ಉತ್ಪಾದಕ ರಿಲಯನ್ಸ್

ಜಾಮ್ನಗರ ಮತ್ತು ಇತರೆ ಸ್ಥಳಗಳಲ್ಲಿನ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ಗಳಲ್ಲಿ ರಿಲಯನ್ಸ್ ಪ್ರಸ್ತುತ 1000 ಮೆಟ್ರಿಕ್ ಟನ್‌ನಷ್ಟು ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್‌ಗಳನ್ನು ಪ್ರತಿದಿನ ಉತ್ಪಾದಿಸುತ್ತಿದೆ. ಇದು ಭಾರತದ ಒಟ್ಟಾರೆ ಉತ್ಪಾದನೆಯ ಶೇ 11ರಷ್ಟು ಪಾಲು ಹೊಂದಿದೆ. ಈ ಮೂಲಕ ದೇಶದ ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರ ಆಕ್ಸಿಜನ್ ಅಗತ್ಯವನ್ನು ರಿಲಯನ್ಸ್ ಪೂರೈಸುತ್ತಿದೆ.

'ಭಾರತವು ಕೋವಿಡ್-19 ಸಾಂಕ್ರಾಮಿಕದ ಹೊಸ ಅಲೆಯ ವಿರುದ್ಧ ಹೋರಾಡುತ್ತಿರುವಾಗ ನನಗೆ ಹಾಗೂ ರಿಲಯನ್ಸ್‌ನ ಸಮಸ್ತರಿಗೂ, ಪ್ರತಿ ಜೀವವನ್ನು ಉಳಿಸುವುದಕ್ಕಿಂತ ಮುಖ್ಯವಾಗಿರುವುದು ಬೇರೇನೂ ಇಲ್ಲ. ಭಾರತದ ವೈದ್ಯಕೀಯ ಶ್ರೇಣಿಯ ಆಕ್ಸಿಜನ್‌ಗಳ ಉತ್ಪಾದನೆ ಮತ್ತು ಸಾಗಾಣಿಕೆ ಸಾಮರ್ಥ್ಯವನ್ನು ಹೆಚ್ಚಿಸುವುದು ತಕ್ಷಣದ ಅಗತ್ಯವಾಗಿದೆ. ಜಾಮ್ನಗರದಲ್ಲಿರುವ ನಮ್ಮ ಎಂಜಿನಿಯರ್‌ಗಳು ಈ ಹೊಸ ಸವಾಲನ್ನು ಎದುರಿಸುವ ಸಲುವಾಗಿ, ದೇಶಾಭಿಮಾನದ ಪ್ರಜ್ಞೆಯೊಂದಿಗೆ ದಣಿವಿಲ್ಲದೆ ಕೆಲಸ ಮಾಡುತ್ತಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಭಾರತಕ್ಕೆ ಹೆಚ್ಚಿನ ಅಗತ್ಯಬಿದ್ದ ಸಂದರ್ಭದಲ್ಲಿ ರಿಲಯನ್ಸ್ ಕುಟುಂಬದ ಯುವ ಸದಸ್ಯರು ಮತ್ತೆ ಸಕ್ರಿಯವಾಗಿ ಅದನ್ನು ಪೂರೈಸುವ ಬದ್ಧತೆ ಮತ್ತು ಸಂಕಲ್ಪದ ಪ್ರಜ್ಞೆ ಪ್ರದರ್ಶಿಸುವುದನ್ನು ಕಂಡು ನಾನು ನಿಜಕ್ಕೂ ವಿನೀತನಾಗಿದ್ದೇನೆ' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಸಂಸ್ಥೆಯು ದೇಶದ ವಿವಿಧ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುತ್ತಿದ್ದು, ಇದು ಪ್ರತಿ ದಿನವೂ 1 ಲಕ್ಷಕ್ಕೂ ಅಧಿಕ ರೋಗಿಗಳಿಗೆ ನೆರವಾಗುತ್ತಿದೆ. 2020ರ ಮಾರ್ಚ್‌ನಲ್ಲಿ ಕೊರೊನಾ ಆರಂಭವಾದಾಗಿನಿಂದ ದೇಶದಾದ್ಯಂತ 55,000 ಎಂಟಿಗಿಂತಲೂ ಅಧಿಕ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಅನ್ನು ರಿಲಯನ್ಸ್ ಪೂರೈಕೆ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+