ಮುಕೇಶ್ ಅಂಬಾನಿ ಈಗ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ. ಇದು ತಿಳಿದುಬಂದಿರುವುದು ಫೋರ್ಬ್ಸ್ ನ 'ದ ರಿಯಲ್ ಟೈಮ್ ಬಿಲಯನೇರ್ಸ್ ಪಟ್ಟಿಯಲ್ಲಿ'. ಈ ವರ್ಷದ ಫೆಬ್ರವರಿಯಲ್ಲಿ ಮುಕೇಶ್ ಹದಿಮೂರನೇ ಸ್ಥಾನದಲ್ಲಿ ಇದ್ದರು. ಗುರುವಾರದಂದು ರಿಲಯನ್ಸ್ ಇಂಡಸ್ಟ್ರೀಸ್ ನ ಮಾರುಕಟ್ಟೆ ಬಂಡವಾಳ ಮೌಲ್ಯವು ಹತ್ತು ಲಕ್ಷ ಕೋಟಿ ದಾಟಿದ್ದು, ಈ ಸೂಚ್ಯಂಕದಲ್ಲಿನ ಏರಿಕೆಗೆ ಕಾರಣವಾಗಿದೆ.

ಫೋರ್ಬ್ಸ್ ನ 'ದ ರಿಯಲ್ ಟೈಮ್ ಬಿಲಯನೇರ್ಸ್ ಪಟ್ಟಿ'ಯ ಪ್ರಕಾರ ಮುಕೇಶ್ ಅಂಬಾನಿಯ ರಿಯಲ್ ಟೈಮ್ ಆಸ್ತಿ ಮೌಲ್ಯ $ 60.8 ಬಿಲಿಯನ್ ಇದೆ (ಗುರುವಾರಕ್ಕೆ). ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಅಮೆಜಾನ್ ನ ಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್. ಗುರುವಾರದಂದು ಅವರ ರಿಯಲ್ ಟೈಮ್ ಆಸ್ತಿ ಮೌಲ್ಯ $ 113 ಬಿಲಿಯನ್.

ಮುಕೇಶ್ ಅಂಬಾನಿ ಈಗ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಗುರುವಾರದಂದು 52 ವಾರಗಳ ಗರಿಷ್ಠ ಮಟ್ಟವಾದ 1,581.25 ರುಪಾಯಿ ತಲುಪಿತು. ಈ ವರ್ಷ ರಿಲಯನ್ಸ್ ಷೇರುಗಳ ಮೌಲ್ಯದಲ್ಲಿ 40 ಪರ್ಸೆಂಟ್ ಏರಿಕೆಯಾಗಿದೆ. ಅತಿ ಹೆಚ್ಚು ಮೌಲ್ಯಯುತ ಕಂಪೆನಿಗಳಲ್ಲಿ ರಿಲಯನ್ಸ್ ಮೊದಲ ಸ್ಥಾನದಲ್ಲಿದ್ದರೆ, ಆ ನಂತರದ ಸ್ಥಾನಗಳಲ್ಲಿ ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್ ಹಾಗೂ ಎಚ್ ಡಿಎಫ್ ಸಿ ಇವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+