For Quick Alerts
ALLOW NOTIFICATIONS  
For Daily Alerts

ಮೊದಲ ವಹಿವಾಟಿನ ಹೋಲಿಕೆಯಲ್ಲಿ 41% ಹೆಚ್ಚಳ ಕಂಡ ಆರ್‌ಐಎಲ್-ರೈಟ್ಸ್ ಎಂಟೈಟಲ್‌ಮೆಂಟ್ ವಹಿವಾಟು

|

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ - ರೈಟ್ಸ್ ಎಂಟೈಟಲ್‌ಮೆಂಟ್‌ನ (RIL-RE) ಡಿ-ಮಟೀರಿಯಲೈಸ್ಡ್ ಟ್ರೇಡಿಂಗ್‌ನಲ್ಲಿ ಶುಕ್ರವಾರ ದಿನದಂತ್ಯದ ವಹಿವಾಟು 223 ರುಪಾಯಿಗಳಲ್ಲಿ ನಡೆದಿದ್ದು, ಶೇರು ವಿನಿಮಯ ಕೇಂದ್ರ ದತ್ತಾಂಶದ ಪ್ರಕಾರ ಇದು ಮೊದಲ ವಹಿವಾಟಿನ ಹೋಲಿಕೆಯಲ್ಲಿ 41%ನಷ್ಟು ಹೆಚ್ಚಾಗಿದೆ.

 

ಕೇವಲ ಏಳು ವಹಿವಾಟು ಅವಧಿಗಳಲ್ಲಿ, RIL-REಗಳು ಹೂಡಿಕೆದಾರರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಿವೆ. ಶುಕ್ರವಾರದ ಮುಕ್ತಾಯದ ಬೆಲೆಯಲ್ಲಿ, ಆರ್‌ಐಎಲ್ ಷೇರುದಾರರು ಆರ್‌ಇಗಳಿಂದಾಗಿ ಒಟ್ಟಾರೆ ಸುಮಾರು 9,425 ಕೋಟಿ ರುಪಾಯಿಗಳಿಂದ ಶ್ರೀಮಂತರಾಗಿದ್ದಾರೆ.

 

RIL-REಗಳು ಏಳು ವಹಿವಾಟು ಅವಧಿಗಳ ಪೈಕಿ ಪ್ರತಿಯೊಂದರಲ್ಲೂ ತಮ್ಮ ಆಂತರಿಕ ಮೌಲ್ಯದ ಹೋಲಿಕೆಯಲ್ಲಿ ಹೆಚ್ಚಿನ ಬೆಲೆಯನ್ನು ಗಳಿಸಿವೆ.

ಮೊದಲ ವಹಿವಾಟಿನ ಹೋಲಿಕೆಯಲ್ಲಿ 41% ಹೆಚ್ಚಳ ಕಂಡ RIL-RE

ಶುಕ್ರವಾರದ ಮುಕ್ತಾಯದ ವೇಳೆಗೆ, ಎನ್‌ಎಸ್‌ಇಯಲ್ಲಿ 4.8 ಲಕ್ಷ ಆರ್‌ಇಗಳಿಗಾಗಿ ಖರೀದಿ ಆದೇಶಗಳು ಬಾಕಿ ಉಳಿದಿದ್ದು, ಇದು ಬಾಕಿ ಉಳಿದಿರುವ 2.4 ಲಕ್ಷ ಮಾರಾಟದ ಆದೇಶಗಳಿಗಿಂತ ಎರಡು ಪಟ್ಟು ಹೆಚ್ಚಿನದ್ದಾಗಿದೆ.

ಏಳು ವಹಿವಾಟು ಅವಧಿಗಳಲ್ಲಿ 11.4 ಕೋಟಿ ಆರ್‌ಇಗಳು (ಒಟ್ಟು ಆರ್‌ಇಗಳಲ್ಲಿ 27 ಪರ್ಸೆಂಟ್‌ರಷ್ಟು) ಕೈ ಬದಲಿಸಿದ್ದು, ಇದರ ಒಟ್ಟು ಮೌಲ್ಯ ಸುಮಾರು 300 ಮಿಲಿಯನ್ ಯುಎಸ್ ಡಾಲರ್ ಅಥವಾ 2,243 ಕೋಟಿ ರೂ.ಗಳಾಗಿದೆ.

ಇದೇ ಮೊದಲ ಬಾರಿಗೆ ಮಾಡಲಾದ ಆರ್‌ಇಗಳ ಆನ್‌ಲೈನ್ ಲಿಸ್ಟಿಂಗ್‌ನಿಂದಾಗಿ ಹೂಡಿಕೆದಾರರಿಗೆ ತಮ್ಮ ರೈಟ್ ಎಂಟೈಟಲ್‌ಮೆಂಟ್‌ಗಳ ಮೌಲ್ಯವನ್ನು ಪಾರದರ್ಶಕವಾಗಿ ಕಂಡುಕೊಳ್ಳುವ ಅವಕಾಶ ದೊರಕಿತು. ಇದು RIL-REಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಅನುಕೂಲಕರ ಮಾರ್ಗವನ್ನೂ ಒದಗಿಸಿತು.

ಆರ್‌ಇಗಳ ವಾಲ್ಯೂಮ್-ವೈಟೆಡ್ ಸರಾಸರಿ ಬೆಲೆ (ವಿಡಬ್ಲ್ಯುಎಪಿ) ಗುರುವಾರದಿಂದ ಸ್ವಲ್ಪ ಕಡಿಮೆಯಾಗಿ ಶುಕ್ರವಾರ 218.40 ರುಪಾಯಿಗಳಿಗೆ ತಲುಪಿದ್ದು, 38 ಲಕ್ಷ ಆರ್‌ಇಗಳು ಕೈ ಬದಲಿಸಿವೆ. ಆರ್‌ಇಗಳು ದಿನದಲ್ಲಿ ತಮ್ಮ ಆಂತರಿಕ ಮೌಲ್ಯಕ್ಕಿಂತ ಸರಾಸರಿ 7.9 ರುಪಾಯಿಗಳ ಹೆಚ್ಚು ಬೆಲೆಗೆ ವಹಿವಾಟು ನಡೆಸಿದವು. ಶುಕ್ರವಾರ ಆರ್‌ಐಎಲ್ ವಿಡಬ್ಲ್ಯುಎಪಿ 1,467.5 ರೂ.ಗಳ ಪರಿಗಣನೆಯಲ್ಲಿ, ಆರ್‌ಇಗಳ ಆಂತರಿಕ ಮೌಲ್ಯ 210.5 ರುಪಾಯಿಗಳಷ್ಟಿತ್ತು.

ಮೇ 20ರಂದು ರೈಟ್ಸ್ ಇಶ್ಯೂವಿನ ಆರಂಭದ ಜೊತೆಯಲ್ಲೇ RIL-RE ಟ್ರೇಡಿಂಗ್ ಕೂಡ ಪ್ರಾರಂಭವಾಗಿತ್ತು. ಎನ್‌ಎಸ್‌ಇ/ಬಿಎಸ್‌ಇಗಳಲ್ಲಿ ರೈಟ್ಸ್ ಎಂಟೈಟಲ್‌ಮೆಂಟ್ ಅನ್ನು ಕೊಳ್ಳಲು ಅಥವಾ ಮಾರಲು ಶುಕ್ರವಾರ ಕೊನೆಯ ದಿನವಾಗಿತ್ತು.

ಪ್ರತಿ ಆರ್‌ಇ, 2020ರ ಜೂನ್ 3ರ ಮುನ್ನ 314.25 ರೂ.ಗಳನ್ನು ಪಾವತಿಸುವ ಮೂಲಕ ಒಂದು ಆರ್‌ಐಎಲ್ ಭಾಗಶಃ-ಪಾವತಿಸಿದ ಶೇರನ್ನು ಪಡೆಯುವ ಅವಕಾಶವನ್ನು ತನ್ನ ಮಾಲೀಕರಿಗೆ ನೀಡುತ್ತದೆ.

ಆಯಿಲ್-ಟು-ಟೆಲಿಕಾಂ ದೈತ್ಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನ 53,125 ಕೋಟಿ ರೂ. ಮೌಲ್ಯದ ಬೃಹತ್ ರೈಟ್ಸ್ ಇಶ್ಯೂವನ್ನು ಶೇರುದಾರರಿಂದ ಚಂದಾದಾರಿಕೆಗಾಗಿ ಕಳೆದ ವಾರ ತೆರೆಯಲಾಗಿತ್ತು. ಅರ್ಹ ಶೇರುದಾರರು ರೈಟ್ಸ್ ಎಂಟೈಟಲ್‌ಮೆಂಟ್‌ಗಳನ್ನು ಡಿಮ್ಯಾಟ್‌ನಲ್ಲಿ ಪಡೆದ ಮೊದಲ ಇಶ್ಯೂ ಇದಾಗಿದ್ದು, ಶೇರು ವಿನಿಮಯ ಕೇಂದ್ರಗಳಲ್ಲಿ ಅವುಗಳ ವ್ಯವಹಾರವನ್ನು ನಡೆಸಬಹುದಾಗಿದೆ.

ರೈಟ್ಸ್ ಇಶ್ಯೂವಿನ ಅಂಗವಾಗಿ, ಪ್ರತಿ 15 ಶೇರುಗಳಿಗೆ ಒಂದರಂತೆ, ತಲಾ 1,257 ರುಪಾಯಿಗಳಂತೆ ಒಂದು ಶೇರನ್ನು ಸಂಸ್ಥೆಯು ನೀಡಲಿದೆ. ಮುಕ್ತವಾಗಿ ವ್ಯಾಪಾರ ಮಾಡಲಾಗುವಂತೆ ರೈಟ್ಸ್ ಎಂಟೈಟಲ್‌ಮೆಂಟ್‌ಗಳನ್ನು ಅರ್ಹ ಶೇರುದಾರರ ಡಿಮ್ಯಾಟ್ ಖಾತೆಗಳಿಗೆ ಜಮಾ ಮಾಡಲಾಗುವ ಮೊದಲ ಇಶ್ಯೂ ಇದಾಗಿದೆ

English summary

RIL-Rights Entitlement Trade Ends 41% Higher Than First Trade

Reliance Industries Ltd-Rights Entitlement (RIL-RE) on Friday ended with last trade happening at Rs 223, up 41 per cent over the first trade, according to stock exchange data.
Story first published: Saturday, May 30, 2020, 13:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X