ಭಾರತೀಯ ಷೇರು ಪೇಟೆಯು ಸೋಮವಾರ ಹೊಸ ದಾಖಲೆಯನ್ನು ಬರೆದಿದೆ. ಪ್ರಮುಖ ರಾಜ್ಯ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಬಿಜೆಪಿ) ಗೆಲುವು ಸಾಧಿಸುತ್ತಿದ್ದಂತೆ ಸೋಮವಾರ ಸೆನ್ಸೆಕ್ಸ್ ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ, ಸಾರ್ವಕಾಲಿಕವಾಗಿ ಏರಿಕೆಯಾಗಿದೆ.
ಬಿಎಸ್‌ಇ ಸೆನ್ಸೆಕ್ಸ್ 902 ಪಾಯಿಂಟ್‌ಗಳು ಅಥವಾ ಶೇಕಡ 1.34 ಏರಿಕೆಯಾಗಿ 68,383 ಕ್ಕೆ ತಲುಪಿ ವಹಿವಾಟು ನಡೆಸುತ್ತಿದೆ. ನಿಫ್ಟಿ 50 ಬೆಳಿಗ್ಗೆ 9.17 ರ ಸುಮಾರಿಗೆ 286 ಪಾಯಿಂಟ್‌ಗಳು ಅಥವಾ ಶೇಕಡ 1.41 ರಷ್ಟು ಏರಿಕೆಯಾಗಿ 20,554 ನಲ್ಲಿ ವಹಿವಾಟು ನಡೆಸುತ್ತಿದೆ.

ಬಿಎಸ್‌ಇಯಲ್ಲಿ ಎಲ್ಲಾ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು 4.09 ಲಕ್ಷ ಕೋಟಿ ರೂಪಾಯಿಯಷ್ಟು ಜಿಗಿದು, 341.76 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಅದಾನಿ ಸ್ಟಾಕ್‌ಗಳು ಸುಮಾರು ಶೇಕಡ 14 ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ರಾಜ್ಯ ಚುನಾವಣಾ ಫಲಿತಾಂಶಗಳು
ಭಾರತದ ಮೂರು ಪ್ರಮುಖ ಉತ್ತರ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟವಾಗಿ ಗೆಲುವು ಸಾಧಿಸಿದೆ. ಅದಾದ ಬಳಿಕ ದಲಾಲ್ ಸ್ಟ್ರೀಟ್ ಏರಿಕೆಯನ್ನು ಕಂಡಿದೆ. ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. "ರಾಜ್ಯ ಚುನಾವಣಾ ಫಲಿತಾಂಶಗಳು ಷೇರುಪೇಟೆ ಆಶಾದಾಯಕವಾಗಿದೆ. ಮಾರುಕಟ್ಟೆಯು ಎಂದಿಗೂ ಕೂಡಾ ರಾಜಕೀಯ ಸ್ಥಿರತೆಯನ್ನು ಬಯಸುತ್ತದೆ," ಎಂದು ತಜ್ಞರು ಹೇಳುತ್ತಾರೆ.
ಮಾರುಕಟ್ಟೆಗೆ ಬೇಕಾದಂತಹ ಮಾರುಕಟ್ಟೆ ಸ್ನೇಹಿ ಸರ್ಕಾರವನ್ನು ಇಷ್ಟಪಡುತ್ತದೆ. ಮಾರುಕಟ್ಟೆಯ ದೃಷ್ಟಿಕೋನದಿಂದ, ಫಲಿತಾಂಶಗಳು ನಿರೀಕ್ಷೆಗಿಂತ ಉತ್ತಮವಾಗಿವೆ," ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ಹೇಳಿದ್ದಾರೆ.
ಏಷ್ಯಾದ ಮಾರುಕಟ್ಟೆ
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಏಷ್ಯಾದ ಷೇರುಗಳು ಮಿಶ್ರವಾಗಿದ್ದವು. ಜಪಾನ್‌ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಎಂಎಸ್‌ಸಿಐಯ ವಿಶಾಲವಾದ ಸೂಚ್ಯಂಕವು ಇನ್ನೂ ಶೇಕಡ 0.4 ರಷ್ಟು ಏರಿಕೆಯಾಗಿದೆ. ಇದು ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದಲ್ಲಿನ ಲಾಭಗಳಿಗೆ ಕಾರಣವಾಗಿದೆ. ಯೆನ್ ಲಾಭ ಹೆಚ್ಚಿಸಿದ್ದರಿಂದ ಜಪಾನ್‌ನ ನಿಕ್ಕಿ ಶೇಕಡ 0.4 ರಷ್ಟು ಕುಸಿದಿದೆ.
ಯುಎಸ್ ಬಾಂಡ್ ಯೀಲ್ಡ್
ಯುಎಸ್ ಫೆಡರಲ್ ರಿಸರ್ವ್ ಅಧಿಕಾರಿಯೊಬ್ಬರು ಬಡ್ಡಿದರ ಕಡಿತದ ಹೊಸ ಸುಳಿವುಗಳನ್ನು ನೀಡಿದ ನಂತರ ಯುಎಸ್ ಬಾಂಡ್ ಯೀಲ್ಡ್ ಕಳೆದ ವಾರ ಬಹು-ತಿಂಗಳ ಕನಿಷ್ಠ ಮಟ್ಟವನ್ನು ಮುಟ್ಟಿದೆ. ಎರಡು ವರ್ಷಗಳ ಯೀಲ್ಡ್ ಜುಲೈ ಮಧ್ಯದಿಂದ ಶೇಖಡ 4.6 ರಷ್ಟು ಕಡಿಮೆಯಾಗಿದೆ. ಬೆಂಚ್‌ಮಾರ್ಕ್ 10-ವರ್ಷದ ಯೀಲ್ಡ್ ಸೆಪ್ಟೆಂಬರ್‌ನಿಂದ ಶೇಕಡ 4.23 ಕ್ಕೆ ಕಡಿಮೆಯಾಗಿದೆ.
ಎಫ್‌ಐಐಗಳು ನಿವ್ವಳ ಖರೀದಿದಾರರು
ಎಫ್‌ಐಐಗಳು ಶುಕ್ರವಾರ 1,589 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಷೇರುಗಳನ್ನು ನಿವ್ವಳ ಆಧಾರದ ಮೇಲೆ ಖರೀದಿಸಿವೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 1,448 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಎಫ್‌ಐಐಗಳು ನವೆಂಬರ್‌ನಲ್ಲಿ 9,001 ಕೋಟಿ ಮೌಲ್ಯದ ಷೇರುಗಳನ್ನು ಸೇರಿಸಿದ್ದಾರೆ.
ಕಚ್ಚಾ ತೈಲ
ಬ್ರೆಂಟ್ ಕ್ರೂಡ್ ಫ್ಯೂಚರ್ಸ್ 52 ಸೆಂಟ್ಸ್ ಅಥವಾ 0.5% ರಷ್ಟು ಕುಸಿದು ಬ್ಯಾರೆಲ್‌ಗೆ 78.36 ಡಾಲರ್‌ಗೆ ತಲುಪಿದೆ. ಆದರೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಫ್ಯೂಚರ್ಸ್ ಬ್ಯಾರೆಲ್‌ಗೆ 45 ಸೆಂಟ್ಸ್ ಅಥವಾ 0.6% ರಷ್ಟು ಕಡಿಮೆಯಾಗಿ 73.62 ಡಾಲರ್‌ಗೆ ತಲುಪಿದೆ. ಇದು ಷೇರುಪೇಟೆಗೆ ಸಹಾಯಕವಾಗಿದೆ.
ರೂಪಾಯಿ ಬಲವರ್ಧನೆ
ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್ ಅವರ ಕಾಮೆಂಟ್‌ಗಳ ನಂತರ ಮತ್ತು ಭಾರತದ ಆಡಳಿತ ಪಕ್ಷಕ್ಕೆ ರಾಜ್ಯ ಚುನಾವಣಾ ವಿಜಯಗಳ ಹಿನ್ನೆಲೆಯಲ್ಲಿ ಯುಎಸ್ ಯೀಲ್ಡ್ ಕುಸಿತವಾಗಿದೆ. ಅದಾದ ಬಳಿಕ ಭಾರತೀಯ ರೂಪಾಯಿ ಯುಎಸ್ ಡಾಲರ್‌ಗೆ 6 ಪೈಸೆ ಏರಿಕೆಯಾಗಿ 83.27 ಡಾಲರ್‌ಗೆ ತಲುಪಿದೆ. ಇದು ಷೇರು ಪೇಟೆ ಬೆಳವಣಿಗೆಗೆ ಸಹಾಯಕವಾಗಿದೆ.


Click it and Unblock the Notifications