ಬೆಂಗಳೂರು, ಏಪ್ರಿಲ್ 3: ನೀವು ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬೇಕಾದರೆ ನಿಮ್ಮ ವಾರ್ಡ್ರೋಬ್ , ಲಾಕರ್ ನಲ್ಲಿ ಇರುವಂತಹ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ , ಬೇಕಾಗಿರುವ ದಾಖಲೆಗಳನ್ನು ಮಾತ್ರ ಉಳಿಸಿಕೊಂಡು ಬೇಡವಾದ ಹಳೆಯ ದಾಖಲೆಗಳನ್ನು ಹೊರಗೆ ಹಾಕುವ ಕೆಲಸ ಮಾಡಬೇಕಾದರೆ ಅಚಾನಕ್ಕಾಗಿ ನಿಮಗೆ ಗೊತ್ತಿಲ್ಲದ ಹಾಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ದಾಖಲಾತಿ ಒಂದು ಸಿಕ್ಕರೆ ಎಷ್ಟು ಆಶ್ಚರ್ಯ ಮತ್ತು ಸಂತೋಷ ಆಗಬಹುದಲ್ವಾ ಈ ರೀತಿ ಆಗೋದಕ್ಕೂ ಅದೃಷ್ಟ ಇರಬೇಕು ಚಂಡಿಗಡದ ವೈದ್ಯರೊಬ್ಬರಿಗೆ ಇಂಥ ಅದೃಷ್ಟ ಒಲಿದು ಬಂದಿದೆ.
ಒಂದು ವೇಳೆ 500 ರೂಪಾಯಿ ಹೂಡಿಕೆ ಮಾಡಿ 5000 ಲಾಭ ಬಂದ್ರೆ ಅಬ್ಬಬ್ಬ ಲಾಟರಿ ಹೊಡಿತು ಅನ್ಕೋತಾರೆ ಜನ. ಅದೇ ಐನೂರು ರೂಪಾಯಿ ಹೂಡಿಕೆ ಮಾಡಿ 50,000 ಬಂದ್ರೆ ಅದೃಷ್ಟ ಕುಳಾಯಿಸ್ತು ಅಂತ ಖುಷಿಪಡುತ್ತಾರೆ .ಅದೇ ನೀವು ಹೂಡಿಕೆ ಮಾಡಿದ್ದ 500 ರೂಪಾಯಿಗೆ 3,75,000 ನಿಮ್ಮದಾದರೆ ಎಂಥ ಅದೃಷ್ಟ ಇರಬೇಡ ಹೇಳಿ, ಚಂಡಿಗಢಮೂಲದ ವೈದ್ಯರೊಬ್ಬರಿಗೆ ಇಂಥದ್ದೊಂದು ಬಂಪರ್ ಆಫರ್ ಒಲಿದು ಬಂದಿದೆ .

ಭರ್ಜರಿ ಲಾಭ ತಂದುಕೊಟ್ಟ SBI ಷೇರುಗಳು
ಚಂಡಿಗಢದ ವೈದ್ಯರು ತಮಗೆ ಒಲಿದು ಬಂದ ಈ ಅದೃಷ್ಟದ ಫೋಟೋ ತೆಗೆದು ತಮ್ಮ ಏಕ ಖಾತೆಯಲ್ಲಿ ಪೋಸ್ಟ್ ಮಾಡಿ ಅತೀವ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
1994ರಲ್ಲಿ ಈ ವೈದ್ಯರ ಪೂರ್ವಜರು 500 ರೂಪಾಯಿ ಮೊತ್ತವನ್ನು ಎಸ್‌ಬಿಐ ಮೇಲೆ ಹೂಡಿಕೆ ಮಾಡಿದ್ರು . ಅದರ ಪ್ರತಿಯನ್ನು ಮನೆಯ ಲಾಕರ್ ನಲ್ಲಿ ಇರಿಸಿದ್ದರು. ನಂತರ ತಾವು ಎಸ್‌ಬಿಐ ಶೇರ್ ಮೇಲೆ ಹೂಡಿಕೆ ಮಾಡಿರೋದನ್ನ ಸ್ವತಹ ಅವರೇ ಮರೆತಿದ್ದಾರೆ. ಹೀಗಾಗಿ ಯಾರಿಗೂ ಆ ಮಾಹಿತಿಯನ್ನು ಕೊಟ್ಟಿಲ್ಲ. ಯಾತಕ್ಕಾಗಿ ಅವರು ಎಸ್ ಬಿ ಐ ಸ್ಟಾಕ್ ಮೇಲೆ ಇನ್ವೆಸ್ಟ್ ಮಾಡಿದ್ರು, ಅವರಿಗೆ ಆ ಕಾಲದಲ್ಲಿ ಮಾರ್ಗದರ್ಶನ ಮಾಡಿದ್ದವರು ಯಾರು ಏನೊಂದು ಗೊತ್ತಿಲ್ಲ.
ಇದೀಗ ಮೊನ್ನೆ ಮೊನ್ನೆ ವೈದ್ಯರು ತಮ್ಮ ಇಡೀ ವಾರ್ಡ್ರೋಬ್ ಮತ್ತು ಲಾಕರನ್ನ ಪರಿಶೀಲಿಸಿ ಸ್ವಚ್ಛಪಡಿಸುವಾಗ ಅವರಿಗೆ ತಮ್ಮ ಪೂರ್ವಜರು ಎಸ್ ಬಿ ಐ ಸ್ಟಾಕ್ಸ್ ಮೇಲೆ ಐನೂರು ರೂಪಾಯಿ ಹೂಡಿಕೆ ಮಾಡಿದ್ದ ಈ ದಾಖಲಾತಿ ಸಿಗುತ್ತೆ. ಕೂಡಲೇ ಆಶ್ಚರ್ಯ ಚಕಿತರಾದ ವೈದ್ಯರು ಇದೀಗ ಆ ಸ್ಟಾಕ್ ನ ಬೆಲೆ ಏನಿರಬಹುದು ಅಂತ ಆನ್ಲೈನ್ ನಲ್ಲಿ ಚೆಕ್ ಮಾಡಿದ್ದಾರೆ. ಅವರಿಗೆ ದೊಡ್ಡ ಸಂತೋಷದ ಸುದ್ದಿಯೇ ಕಾದಿತ್ತು , ವೈದ್ಯರ ಹಣೆಬರಹ ರಾತ್ರಿ ಬದಲಾಗಿ ಹೋಗಿತ್ತು.
1994ರಲ್ಲಿ ಈ ದಂಪತಿ ಎಸ್‌ಬಿಐ ಸ್ಟಾಕ್ಸ್ ನ ಮೇಲೆ ಹೂಡಿಕೆ ಮಾಡಿದ್ದ 500 ರೂಪಾಯಿ ಇವತ್ತಿಗೆ ಬರೋಬ್ಬರಿ 3,75,000 ಯಾಗಿ ಬೆಳೆದು ನಿಂತಿದೆ . ಬಹುಶಃ ಇದನ್ನ ಈ ಹೂಡಿಕೆ ಮಾಡಿದ ಪೂರ್ವಜರಾಗಲಿ ಅಥವಾ ಈಗ ಅವರ ಮೊಮ್ಮಗ ಚಂಡಿಗಡ ಮೂಲದ ಈ ವೈದ್ಯರಾಗಲಿ ಯಾರೊಬ್ಬರೂ ಕೂಡ ಇಷ್ಟು ಲಾಭ ಸಿಗಲಿದೆ ಅಂತ ಊಹೆಯೂ ಮಾಡಿರಲಿಲ್ಲ ಅಂತ ಅನ್ನಿಸುತ್ತದೆ . ಆ ಕಾರಣಕ್ಕಾಗಿ ಹೂಡಿಕೆ ಮಾಡಿದ್ದ ದಾಖಲಾತಿಯ ಬಾಂಡನ್ನ ನಿರ್ಲಕ್ಷಿಸಿ ಲಾಕ್ ಬಿಟ್ಟಿದ್ದರು.
ಇದೀಗ ಅನಿರೀಕ್ಷಿತವಾಗಿ ಈ ಡಾಕ್ಯುಮೆಂಟ್ ವೈದ್ಯರ ಕೈಗೆ ಸಿಕ್ಕಿದೆ. ಕುತೂಹಲಕ್ಕೆ ಅಂತ ಅವರು ಇದನ್ನ ಪರೀಕ್ಷಿಸಿದಾಗ ಅದರ ಮೌಲ್ಯ ಬರೋಬ್ಬರಿ ಮೂರು ಮುಕ್ಕಾಲು ಲಕ್ಷ ರೂಪಾಯಿ ಅನ್ನೋದು ತಿಳಿದಿದೆ . ಖುಷಿಗೊಂಡ ವೈದ್ಯರು ಇದು ಈಕ್ವಿಟಿ ಮೇಲೆ ಹೂಡಿಕೆ ಮಾಡಿದರೆ ನಮಗೆ ಸಿಗುವ ಲಾಭ , ಇದು ಈಕ್ವಿಟಿಯ ತಾಕತ್ತು ಅಂತ ಸಂತಸದಿಂದ ಈ ಡಾಕ್ಯುಮೆಂಟ್ನ ಫೋಟೋ ಸಮೇತ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ . ಆಗಾಗ ಉತ್ತಮ ಶೇರುಗಳ ಮೇಲೆ ಹೂಡಿಕೆ ಮಾಡಿ ವರ್ಷಾನುಗಟ್ಟಲೆ ಅದನ್ನ ಮರೆತು.. ಒಮ್ಮೆ ಅದನ್ನ ನೋಡಿದಾಗ ಧಿಡೀರ್ ದೊಡ್ಡ ಮೊತ್ತದ ಲಾಭ ಸಿಕ್ಕಿರುವಂತ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಇದು ಅಂಥದ್ದೇ ಒಂದು ಉದಾಹರಣೆ.


Click it and Unblock the Notifications