Karnataka RTO: ಕರ್ನಾಟಕದಲ್ಲಿ ಮರುನೋಂದಣಿಗೆ ಆರ್‌ಟಿಓ ಅಧಿಕಾರಿಗಳು ನೀಡುತ್ತಿಲ್ಲ ಅವಕಾಶ! ಎನ್‌ಒಸಿಗಾಗಿ ವಾಹನ ಮಾಲೀಕರು ಪರದಾಟ

ಯಾವುದೇ ವಾಹನಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಅದರದೇ ಆದ ಕೆಲವೊಂದು ನಿಯಮಗಳಿರುತ್ತದೆ. ಅದೇ ರೀತಿ ಇವೆಲ್ಲವನ್ನು ಆರ್‌ಟಿಒ (RTO) ಗಮನಿಸುತ್ತಿರುತ್ತದೆ. ಇದೀಗ ಕರ್ನಾಟಕದಲ್ಲಿ ತಮ್ಮ ವಾಹನಗಳನ್ನು ಮಾರಾಟ ಮಾಡಿದ ಮಾಲೀಕರು ಕಳೆದ ಮೂರು ತಿಂಗಳಿನಿಂದ ವಾಹನಗಳ ಮಾಲೀಕತ್ವ ಬದಲಾಯಿಸಲು ಪರದಾಡುತ್ತಿದ್ದಾರೆ. ಮಾಲೀಕತ್ವ ಬದಲಾಯಿಸಿ, ಮರು ನೋಂದಣಿ ಮಾಡಲು NOCಗೆ (No Objection Certificate) ಆರ್‌ಟಿಒ ಅಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ವಾಹನಗಳ ಮಾಲೀಕತ್ವ ಬದಲಾವಣೆಗೆ ಅಗತ್ಯವಿರುವ ಪ್ರಮುಖ ದಾಖಲೆಯಾದ ಆಕ್ಷೇಪಣಾ ರಹಿತ ಪ್ರಮಾಣಪತ್ರ (NOC) ನೀಡದೆ, ಯಾವುದೇ ಸ್ಪಷ್ಟ ಕಾರಣಗಳನ್ನು ನೀಡದೆ ಆರ್‌ಟಿಒ ಸತಾಯಿಸುತ್ತಿದೆ ಎನ್ನಲಾಗಿದೆ.

ವಾಹನಗಳ ಮರುನೋಂದಣಿಗೆ ಆರ್‌ಟಿಓ ಅಧಿಕಾರಿಗಳು ನೀಡುತ್ತಿಲ್ಲ ಅವಕಾಶ!

ಯಾವುದೇ ವಾಹನ ಮಾರಾಟ ಮಾಡಿದ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗಳು (RTOs) ಮಾಲೀಕತ್ವ ಬದಲಾವಣೆಗೆ NOC ನೀಡುತ್ತವೆ. ಈ ಪ್ರಮಾಣಪತ್ರವು ವಾಹನಕ್ಕೆ ಯಾವುದೇ ಬಾಕಿ ಸಾಲಗಳು, ಚಲನ್ ಅಥವಾ ಹೊಣೆಗಾರಿಕೆ ಇಲ್ಲ ಎಂದು ಅಧಿಕೃತವಾಗಿ ದೃಢೀಕರಣ ನೀಡುತ್ತದ. ಇದು ವಾಹನದ ಮಾಲೀಕತ್ವ ವರ್ಗಾವಣೆ ಮತ್ತು ಹೊಸ RTO ನಲ್ಲಿ ಮರು-ನೋಂದಣಿ ಮಾಡಲು ಅನುವು ಮಾಡಿಕೊಡುವುದಾಗಿದೆ. ಆದರೆ ಸದ್ಯ ವಾಹನ ಮರುನೋಂದಣಿ ಅಥವಾ ಮಾಲೀಕತ್ವ ವರ್ಗಾವಣೆ ಮಾಡಲು ಎನ್‌ಒಸಿ ನೀಡದೆ ಆರ್‌ಟಿಒ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಉದಾಹರಣೆಗೆ, ಬೆಂಗಳೂರಿನ ಒಂದು RTO ದಲ್ಲಿ ವಾಹನ ಖರೀದಿಸಿ ತುಮಕೂರಿನ RTO ಕಚೇರಿಯಲ್ಲಿ ಅದನ್ನು ನೋಂದಾಯಿಸಬೇಕೆಂದರೆ, ಬೆಂಗಳೂರಿನ RTO ಕಚೇರಿಯಿಂದ NOC ಪಡೆಯುವುದು ಅಗತ್ಯವಾಗಿದೆ. ಸದ್ಯ NOC ನೀಡದಿರುವುದರಿಂದ, ಸಾವಿರಾರು ವಾಹನಗಳು ಮಾರಾಟವಾಗಿದೆ. ಆದ್ರೆ ಖರೀದಿಸಿದ ಹೊಸ ಮಾಲೀಕರು ಅದನ್ನು ಬಳಸುತ್ತಿದ್ದರೂ, ವಾಹನ ಮಾತ್ರ ಮಾರಾಟ ಮಾಡಿದವರ ಹೆಸರಿನಲ್ಲೇ ನೋಂದಾಯಿಸಲ್ಪಿಟ್ಟಿದೆ.

ಆರ್‌ಟಿಒ NOC ನೀಡದಿರುವುದರಿಂದ ಮೂಲಕ ಮಾಲೀಕರಿಗೆ ಸಮಸ್ಯೆಯುಂಟಾಗಿದೆ. ಏಕೆಂದರೆ ತಾವು ಮಾರಾಟ ಮಾಡಿದ ವಾಹನಗಳು ಯಾವುದೇ ಅಪಘಾತಗಳು ಅಥವಾ ಅಕ್ರಮ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮೂಲ ಮಾರಾಟಗಾರರೇ ಹೊಣೆಗಾರರಾಗಿರುತ್ತಾರೆ.

ಮಾರಾಟಗಾರರಲ್ಲಿ ಉಂಟಾಯ್ತು ಆತಂಕ!
ಇದು ಮೂಲ ಮಾಲೀಕರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ, ಏಕೆಂದರೆ ವಾಹನಕ್ಕೆ ಸಂಬಂಧಿಸಿದ ಯಾವುದೇ ಅಪಘಾತಗಳು ಅಥವಾ ಅಕ್ರಮ ಚಟುವಟಿಕೆಗಳಿಗೆ ಅವರೇ ಹೊಣೆಗಾರರಾಗಿರುತ್ತಾರೆ. ದೆಹಲಿ ಸ್ಫೋಟವನ್ನು ನೋಡಿ ಆತಂಕಗೊಂಡು ಅನಂತ್‌ ಹುಡೆಂಗಂಜ್‌ ಎಂಬವರು ಮಾತನಾಡಿದ್ದು,"ನಾನು ಗಣೇಶ ಹಬ್ಬಕ್ಕೂ ಮುನ್ನವೇ ನನ್ನ ವಾಹನವನ್ನು ಮಾರಾಟ ಮಾಡಿದೆ. ಆದರೆ ಇಂದಿಗೂ ಮಾಲೀಕತ್ವ ಬದಲಾಗಿಲ್ಲ. ನಿನ್ನೆ ದೆಹಲಿ ಸ್ಫೋಟದಲ್ಲಿ ಬಳಸಿದಂತೆಯೇ ನನ್ನ ವಾಹನ ಕೂಡಾ ಅಕ್ರಮ ಚಟುವಟಿಕೆಗಳಿಗೆ ಬಳಸಿದರೆ ಅಥವಾ ಅಪಘಾತಕ್ಕೀಡಾದರೆ ಯಾರು ಜವಾಬ್ದಾರರು? ಸರ್ಕಾರ ತಕ್ಷಣವೇ ಈ ವಿಷಯವನ್ನು ಪರಿಹರಿಸಿ NOC ಗಳನ್ನು ನೀಡಲು ಪ್ರಾರಂಭಿಸಬೇಕು" ಎಂದು ಹೇಳಿದ್ದಾರೆ.

ಕಾರಣ ಒಂದು, ಸಮಸ್ಯೆ ನೂರು!
ಅನಂತ್ ಅವರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬಳಸಿದ ಕಾರನ್ನು ಖರೀದಿಸಿ, ತಮ್ಮ ಹಳೆಯ ಕಾರನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಿದರು. ಅನೇಕ ಕಡೆಗಳಲ್ಲಿ ವಿಚಾರಿಸಿ ಮತ್ತು ಸಂಬಂಧಿತ RTO ಗಳಿಗೆ ಭೇಟಿ ನೀಡಿದ್ದರೂ, ಎರಡೂ ಕಾರುಗಳ ಮಾಲೀಕತ್ವ ಇಂದಿಗೂ ಬದಲಾಗಿಲ್ಲ ಎಂದು ಹೇಳಿದ್ದಾರೆ. "ನಾನು ವಿಚಾರಿಸಿದಾಗಲೆಲ್ಲಾ ಅಧಿಕಾರಿಗಳು ಹೊಸ ಸಾಫ್ಟ್‌ವೇರ್ ಅಳವಡಿಸಲಾಗುತ್ತಿದೆ, ಅದಕ್ಕಾಗಿಯೇ NOC ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ಸಾಫ್ಟ್‌ವೇರ್ ಅಳವಡಿಸಲು ಅವರಿಗೆ ಮೂರು ತಿಂಗಳು ಬೇಕೇ? ಕೆಲವರು ಸರ್ಕಾರ NOC ನೀಡುವ ವ್ಯವಸ್ಥೆಯನ್ನೇ ತೆಗೆದುಹಾಕಲು ಆಲೋಚಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಲಿ, ಆದರೆ ಮಾಲೀಕತ್ವ ತಿದ್ದುಪಡಿ ಆದಷ್ಟು ಬೇಗ ಮಾಡಲಿ" ಎಂದು ಅನಂತ್ ಹೇಳಿದ್ದಾರೆ.

ವೈಯಕ್ತಿಕ ವಾಹನ ಮಾಲೀಕರು ಮಾತ್ರವಲ್ಲದೇ, ಹಳೆಯ ವಾಹನಗಳ ವ್ಯಾಪಾರಿಗಳೂ ಸಹ ಈ ಸಮಸ್ಯೆಯಿಂದಾಗಿ ಪೇಮೆಂಟ್‌ಗಳು ಬಾಕಿ ಉಳಿಸಿಕೊಂಡಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. "ಸಾಮಾನ್ಯವಾಗಿ, ಖರೀದಿದಾರರು ಅಡ್ವಾನ್ಸ್‌ ಕೊಟ್ಟು ದಾಖಲಾತಿ ಪೂರ್ಣಗೊಳ್ಳುವವರೆಗೆ ಸ್ವಲ್ಪ ಹಣವನ್ನು ಕೊಡುವುದಿಲ್ಲ. ಆದರೆ ಪ್ರಸ್ತುತ ನಾವು ವಾಹನಗಳನ್ನು ಅವರ ಹೆಸರಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಹಣ ಹಾಗೇ ಬಾಕಿ ಉಳಿದಿದೆ" ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ. "ಕಳೆದ ಎರಡು ತಿಂಗಳಲ್ಲಿ ನಾನು ಆರು ಕಾರುಗಳನ್ನು ಮಾರಾಟ ಮಾಡಿದ್ದೇನೆ. ಆದರೆ ಇಂದಿಗೂ ಅವುಗಳ ಮಾಲೀಕತ್ವವನ್ನು ಬದಲಾಯಿಸಲು ನನಗೆ ಸಾಧ್ಯವಾಗಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

700 ಕ್ಕೂ ಅಧಿಕ ವಾಹನಗಳ ತಿದ್ದುಪಡಿಗೆ ವೈಟಿಂಗ್‌!
ಉಡುಪಿಯ ಒಬ್ಬ RTO ಏಜೆಂಟ್ ಪ್ರಕಾರ, ಈ ಎನ್‌ಒಸಿ ದಾಖಲಾತಿ ವಿಳಂಬದಿಂದಾಗಿ ಪ್ರಸ್ತುತ ರಾಜ್ಯಾದ್ಯಂತ 700 ಕ್ಕೂ ಹೆಚ್ಚು ವಾಹನಗಳು ಮಾಲೀಕತ್ವ ಬದಲಾವಣೆಗೆ ಕಾಯುತ್ತಿದೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ತಮಗೆ ಈ ಸಮಸ್ಯೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ನವೆಂಬರ್ 13, 2025 ರಂದು ನಿಗದಿಪಡಿಸಲಾಗಿರುವ ಪರಿಶೀಲನಾ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+