ರುಪೇ ಮತ್ತು ಯುಪಿಐ ತಂತ್ರಜ್ಞಾನವು ವಿಶ್ವದಲ್ಲಿ ಭಾರತದ ಹೆಗ್ಗುರುತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. "ಈ ಯುಗವು 'ಇಂಡಸ್ಟ್ರಿ 4.0' ಯುಗವಾಗಿದೆ, ಈ ಯುಗದಲ್ಲಿ ಭಾರತವು ವಿಶ್ವಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದ್ದು," ಎಂದು ಕೂಡಾ ಪ್ರಧಾನಿ ಮೋದಿ ಹೇಳಿದ್ದಾರೆ. 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳನ್ನು ಹೆಚ್ಚಿಸುವುದು' ಎಂಬ ವಿಚಾರದಲ್ಲಿ ನಡೆದ ವೆಬಿನಾರ್‌ನಲ್ಲಿ ಪ್ರಧಾನಿ ಈ ಮಾತನ್ನು ಹೇಳಿದ್ದಾರೆ.
ಸರ್ಕಾರವು ಬಜೆಟ್ ಬಳಿಕ ಒಟ್ಟು 12 ವೆಬಿನಾರ್‌ಗಳನ್ನು ಆಯೋಜನೆ ಮಾಡಿದೆ. ಈ ಪೈಕಿ ಈ ವೆಬಿನಾರ್ 10ನೇ ವೆಬಿನಾರ್ ಆಗಿದೆ. ಕೇಂದ್ರ ಬಜೆಟ್ 2023ರಲ್ಲಿ ಘೋಷಣೆ ಮಾಡಿದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುವ ನಿಟ್ಟಿನಲ್ಲಿ ಸಲಹೆ ಪಡೆಯಲು ಈ ವೆಬಿನಾರ್‌ಗಳನ್ನು ಆಯೋಜನೆ ಮಾಡಲಾಗಿದೆ. 10ನೇ ಈ ವೆಬಿನಾರ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಆರ್ಥಿಕ ಕ್ಷೇತ್ರಕ್ಕೆ ಭಾರತವು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.

ರುಪೇ ಮತ್ತು ಯುಪಿಐ ಮಹತ್ವದ ಕೊಡುಗೆ
"ರುಪೇ ಮತ್ತು ಯುಪಿಐ ಬರೀ ಕಡಿಮೆ ದರದಲ್ಲಿ, ಅಧಿಕವಾಗಿ ಸುರಕ್ಷಿತವಾದ ತಂತ್ರಜ್ಞಾನ ಮಾತ್ರವಲ್ಲ, ಬದಲಾಗಿ ಇದು ವಿಶ್ವದಲ್ಲಿಯೇ ಭಾರತದ ಒಂದು ಮಹತ್ವವಾದ ಗುರುತಾಗಿದೆ. ವಿಶ್ವದಲ್ಲಿ ಹೊಸ ಸಂಶೋಧನೆಗೆ ಭಾರೀ ವ್ಯಾಪ್ತಿಯಿದೆ. ವಿಶ್ವದಲ್ಲೇ ಯುಪಿಐ ಅತೀ ಪ್ರಬಲವಾದ ತಂತ್ರಜ್ಞಾನವಾಗಬೇಕಾಗಿದೆ. ಹಾಗೆಯೇ ನಮ್ಮ ಹಣಕಾಸು ಸಂಸ್ಥೆಗಳು ತಮ್ಮ ವ್ಯಾಪ್ತಿ ಹೆಚ್ಚಿಸಲು ಫಿನ್‌ಟೆಕ್‌ಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು ಉತ್ತಮ ಎಂದು ನನ್ನ ಸಲಹೆ," ಎಂದು ಪ್ರಧಾನಿ ಹೇಳಿದ್ದಾರೆ.
ಫಿನ್‌ಕೆಟ್ ಸಂಶೋಧನೆಗೆ ಸಂಬಂಧಿಸಿದಂತೆ ಭಾರವು ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಾಗಿದೆ. ಭಾರತದ ಡಿಜಿಟಲ್ ಪಾವತಿ ವಿಧಾನವನ್ನು ಜಾಗತಿಕವಾಗಿ ಹಬ್ಬಿಸಲು ಭಾರತವು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಯುಪಿಐ ಪಾವತಿ ವಿಧಾನದ ಪ್ರಯೋಜನಗಳನ್ನು ವಿವರಿಸಿದ ಮೋದಿ, ಇದು ಭಾರತಕ್ಕೆ ಮಾತ್ರವಲ್ಲ ಬೇರೆ ದೇಶಗಳಿಗೂ ಪ್ರಯೋಜನ ಉಂಟು ಮಾಡಲಿದೆ. ಬೇರೆ ದೇಶಗಳಿಗೂ ಸಹಕಾರಿಯಾಗಲಿದೆ ಎಂದಿದ್ದಾರೆ.
ಇನ್ನು ಜಾಗತಿಕವಾಗಿ ಡಿಜಿಟಲೀಕರಣದ ಹಾದಿಯಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆಯಲು ಮುಂದಾಗಿದೆ. ವಿಶ್ವದಾದ್ಯಂತ ಜನರಿಗೆ ಡಿಜಿಟಲ್ ಆಧಾರದಲ್ಲಿ ಟ್ರೈನಿಂಗ್ ನೀಡುವುದು, ಡಿಜಿಟಲ್ ಮೂಲಸೌಕರ್ಯವನ್ನು ಆರಂಭಿಸುವುದು ಸೇರಿದಂತೆ ಹಲವಾರು ವಿಚಾರದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಈಗ ಜಾಗತಿಕ ಡಿಜಿಟಲೀಕರಣಕ್ಕೆ ಭಾರತದ ಮಹತ್ತರ ಕೊಡುಗೆಯೊಂದನ್ನು ಅಳವಡಿಸಲು ಹಲವಾರು ದೇಶಗಳು ಸಜ್ಜಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಟೆಲಿಕಾಂ, ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, "ಈಗಾಗಲೇ 13 ದೇಶಗಳು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಅನ್ನು ಪಾವತಿ ವಿಧಾನವನ್ನು ಅಳವಡಿಸಿಕೊಳ್ಳಲು ಒಪ್ಪಿದೆ. ಶೀಘ್ರದಲ್ಲೇ ಸಿಂಗಾಪುರದಲ್ಲಿ ಯುಪಿಐ ವಹಿವಾಟು ಆರಂಭವಾಗಲಿದೆ," ಎಂದು ತಿಳಿಸಿದ್ದರು.ಇತರೆ ದೇಶಗಳಲ್ಲಿ ಡಿಜಿಟಲ್ ವ್ಯವಸ್ಥೆಯು ಭಾರತದಂತಿಲ್ಲ. ಕೆಲವೇ ಸಂಸ್ಥೆಗಳ ನಿಯಂತ್ರಣದಲ್ಲಿದೆ. ಭಾರತದಲ್ಲಿ ಮಾತ್ರ ಡಿಜಿಟಲ್ ವ್ಯವಸ್ಥೆಯು ಎಲ್ಲರಿಗೂ ಬಳಸಲು ಸಾಧ್ಯವಾಗುವಂತಿದೆ ಎಂದು ತಿಳಿಸಿದ್ದಾರೆ.
ಗೂಗಲ್ ತನ್ನ ಪೇಮೆಂಟ್ ವಿಧಾನವನ್ನು ತೊರೆದು ಯುಪಿಐ ಅನ್ನು ಅಳವಡಿಸಿಕೊಂಡಿದೆ. ಪ್ರಜಾಸತಾತ್ಮಕವಾಗಿ ಈ ವಿಧಾನವು ನಡೆಯುತ್ತಿದೆ. ಎರಡು ರೂಪಾಯಿಯಿಂದ ಎರಡು ಲಕ್ಷ ರೂಪಾಯಿಯವರೆಗಿನ ವಹಿವಾಟನ್ನು ಕೆಲವೇ ಸೆಕೆಂಡುಗಳಲ್ಲಿ ಮಾಡಲು ಸಾಧ್ಯವಾಗುತ್ತಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications