ಯುಎಸ್ ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿತ ಕಾಣುತ್ತಿದೆ. ಡಾಲರ್ ಎದುರು ರೂಪಾಯಿ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77.73 ಕ್ಕೆ ತಲುಪಿದೆ. ಕಳೆದ ಹತ್ತು ವಹಿವಾಟು ಅವಧಿಗಳಲ್ಲಿ ಐದನೇ ಬಾರಿಗೆ ಸಾರ್ವಕಾಲಿಕ ಕುಸಿತವನ್ನು ಕಂಡು ವಹಿವಾಟು ಅಂತ್ಯ ಮಾಡಿದೆ.
ಡಾಲರ್ ಬಲಗೊಳ್ಳುತ್ತಿದ್ದಂತೆ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ರೂಪಾಯಿಯು ಸಾರ್ವಕಾಲಿಕ 77.73 ಕ್ಕೆ ದುರ್ಬಲವಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಉಲ್ಲೇಖ ಮಾಡಿದೆ. ಆದರೆ ಕರೆನ್ಸಿಯು ತಾತ್ಕಾಲಿಕವಾಗಿ ಪ್ರತಿ ಡಾಲರ್‌ಗೆ 77.72 ಕ್ಕೆ ಕೊನೆಗೊಂಡಿತು ಎಂದು ಪಿಟಿಐ ವರದಿ ಮಾಡಿದೆ.
ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು ಗ್ರೀನ್‌ಬ್ಯಾಕ್ ವಿರುದ್ಧ 77.72 ರಲ್ಲಿ ಪ್ರಾರಂಭವಾಯಿತು. ಇಂಟ್ರಾ-ಡೇ ಟ್ರೇಡಿಂಗ್‌ನಲ್ಲಿ ಕನಿಷ್ಠ 77.76 ಮತ್ತು ಗರಿಷ್ಠ 77.63 ರ ನಡುವೆ ಇತ್ತು.

ಬುಧವಾರದಂದು, ಹಣದುಬ್ಬರ ಹಾಗೂ ಆರ್ಥಿಕ ಮಂದಗತಿಯ ನಡುವೆ ಗ್ರೀನ್‌ಬ್ಯಾಕ್ ವಿರುದ್ಧ ರೂಪಾಯಿ ಸುಮಾರು 77.61 ರ ದಾಖಲೆಯ ಕನಿಷ್ಠ ಮಟ್ಟದಲ್ಲಿ ವಹಿವಾಟು ಕೊನೆ ಮಾಡಿತು. ಕಳೆದ ಹತ್ತು ದಿನಗಳಲ್ಲಿ ಐದನೇ ಬಾರಿಗೆ ಹೊಸ ಸಾರ್ವಕಾಲಿಕ ಕುಸಿತವನ್ನು ರೂಪಾಯಿ ಕಾಣುತ್ತಿದೆ.
ಮಂಗಳವಾರ ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ
ಸೋಮವಾರ ಬುದ್ಧ ಪೂರ್ಣಿಮೆಯ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆಗಳು ಮುಚ್ಚಲ್ಪಟ್ಟಿತ್ತು. ಇದಾದ ಒಂದು ದಿನದ ನಂತರ ಮಂಗಳವಾರ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 77.73 ಕ್ಕೆ ದಾಖಲೆಯ ಕುಸಿತವನ್ನು ಕಂಡಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಒಂದು ಡಾಲರ್‌ಗೆ 77.73ರಂತೆ ವಿನಿಮಯ ನಡೆದಿದೆ.
ಈ ನಡುವೆ ರೂಪಾಯಿ ಮೌಲ್ಯ ಇಳಿಕೆಗೆ ಪ್ರಮುಖವಾಗಿ ಅಮೆರಿಕದ ಡಾಲರ್ ಬಲಗೊಳ್ಳುತ್ತಿರುವುದು ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ. ಇನ್ನು ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ಕೂಡಾ ರೂಪಾಯಿ ಮೌಲ್ಯ ಕುಸಿತಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications