ಬೆಂಗಳೂರು, ಜೂನ್ 21: ಆಂಧ್ರಪ್ರದೇಶದ ವಿಶಾಖಪಟ್ಟಣದ ಋಷಿಕೊಂಡ ಬೆಟ್ಟದ ನೆತ್ತಿ ಮೇಲೆ ವೈ ಎಸ್ ಆರ್ ಕಾಂಗ್ರೆಸ್ ಪಕ್ಷವು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಾಸ್ತ್ಯವ್ಯಕ್ಕಾಗಿ ಐಷಾರಾಮಿ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.
ಪ್ರವಾಸೋದ್ಯಮ ಯೋಜನೆಯಡಿ ಬಿಡುಗಡೆಯಾದ ಸರ್ಕಾರದ ಹಣದಲ್ಲಿ ಜಗನ್ ರಹಸ್ಯ ಕಟ್ಟಡವನ್ನು ನಿರ್ಮಿಸಿದ್ದಾರೆ ಮತ್ತು ಅದನ್ನು ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ. ಮರಳಿ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸದಿಂದಲೇ ತಮ್ಮ ವೈಯಕ್ತಿಕ ಬಳಕೆಗೆ ಜಗನ್ ಮೋಹನ್ ರೆಡ್ಡಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಕಟ್ಟಡಗಳ ಸಂಕೀರ್ಣ ನಿರ್ಮಾಣ ಮಾಡಿದ್ದು ಚರ್ಚೆಗೆ ಕಾರಣವಾಗಿದೆ.

ಋಷಿಕೊಂಡ ಹಿಲ್ಸ್ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಈ ವಿವಾದ 2021ರಿಂದಲೇ ಹುಟ್ಟುಕೊಂಡಿದೆ. 2021 ರ ಕೊನೆಯಲ್ಲಿ, YSRCP ಸರ್ಕಾರವು ಆಂಧ್ರ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APTDC) ನಡೆಸುತ್ತಿರುವ ಹರಿತಾ ರೆಸಾರ್ಟ್ ಅನ್ನು ಪ್ರಮುಖ ಪ್ರವಾಸಿ ಆಕರ್ಷಣೆಯನ್ನಾಗಿ ಮಾಡಲು ರುಷಿಕೊಂಡ ಬೆಟ್ಟದ ಪುನರಾಭಿವೃದ್ಧಿಯನ್ನು ಘೋಷಿಸಿತು. ಅಂದಿನಿಂದ, ರೆಸಾರ್ಟ್‌ನ 9.88 ಎಕರೆ ಪ್ರದೇಶವನ್ನು ನಿರ್ಬಂಧಿಸಲಾಗಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳಿಕೊಂಡಿತ್ತು.
ಋಷಿಕೊಂಡ ಬೆಟ್ಟದ ಮೇಲೆ 61 ಎಕ್ರೆ ವಿಸ್ತೀರ್ಣದ ಜಾಗದ 9.8 ಎಕ್ರೆ ಪ್ರದೇಶದಲ್ಲಿ 12 ಬೆಡ್ ರೂಮ್ ಗಳ ಕಟ್ಟಡವು ವೈಭವೋಪೇತ ಬಂಗಲೆಗೆ ಕಮ್ಮಿ ಇಲ್ಲ. ಈ ಸಂಕೀರ್ಣದಲ್ಲಿ ಒಟ್ಟು ಮೂರು ಕಟ್ಟಡಗಳಿದ್ದು, ಇದಕ್ಕಾಗಿ ಅಂದಾಜು 500 ಕೋ.ರೂ ವೆಚ್ಚಮಾಡಲಾಗಿದೆ. ಈ ಅರಮನೆಯಲ್ಲಿ ಕೆಲವು ಬಾರ್ ರೂಂ 480 ಚದರ ಅಡಿಗಳಷ್ಟು ವಿಸ್ತಾರವಾಗಿದೆ.
ಈ ಸಂಕೀರ್ಣದಲ್ಲಿ ಒಟ್ಟು ಏಳು ಬ್ಲಾಕ್ ಗಳಿದ್ದು ಪ್ರತಿ ಬ್ಲಾಕ್ ನಲ್ಲೂ ಬಾಂಕ್ವೆಟ್ ಹಾಲ್ , ಗೆಸ್ಟ್ ರೂಂ ರೆಸ್ಟೋರೆಂಟ್ , ವಿಲ್ಲಾ ಸೂಟ್ , ಸ್ಪಾ ಫಿಟ್ನೇಸ್ , ಇಂಡೋರ್ ಗೇಮ್ಸ್ , ಬ್ಯಾಕ್ ಆಫೀಸ್ ಗಳಿವೆ. ಒಂದು ಬ್ಲಾಕ್ ನಲ್ಲಿ ಬ್ಯುಸಿನೆಸ್ ಹೊಟೇಲ್ ಮತ್ತೊಂದು ಕಡೆ ಕಾನ್ಫರೆನ್ಸ್ ಹಾಲ್ ಗಳಿವೆ.
ಪ್ರವಾಸೋದ್ಯಮಕ್ಕಾಗಿ ಕಟ್ಟಡ ನಿರ್ಮಿಸಿದ್ದರೆ, 7,266 ಚದರ ಮೀಟರ್ ಅಳತೆಯ ಸಭಾಂಗಣಗಳ ಅಗತ್ಯವಿಲ್ಲ ಎಂದು ಟಿಡಿಪಿ ವಾದವಾಗಿದೆ. ಇಲ್ಲಿರುವ ಏಳು ಬ್ಲಾಕ್ ಗಳಿಗೆ ವೆಂಗಿ ಎ, ವೆಂಗಿ ಬಿ, ಕಳಿಂಗ, ಗಜಪತಿ, ಮತ್ತು ವಿಜಯನಗರ ಎ,ಬಿ,ಸಿ ಎಂದು ಹೆಸರಿಸಲಾಗಿದೆ. ಕಳಿಂಗ ಬ್ಲಾಕ್‌ನ ಮೊದಲ ಮಹಡಿಯ ಸಭಾಂಗಣವು 2 ಲಕ್ಷ ರೂ ವೆಚ್ಚದ ಷಾಂಡಿಲಿಯರ್ (ಗೊಂಚಲು ದೀಪ) ಹೊಂದಿದ್ದು, ಇವುಗಳನ್ನು ಬೃಹತ್ ಕಾರಿಡಾರ್‌ಗಳಲ್ಲೂ ಹಾಕಲಾಗಿದ್ದು ದುಬಾರಿ ಆಮದು ಮಾಡಿದ ಅಮೃತಶಿಲೆಯಿಂದ ನೆಲಕ್ಕೆ ಬಳಸಲಾಗಿದೆ. ಕಳಿಂಗ ಬ್ಲಾಕ್ ವಾಲ್ ಟು ವಾಲ್ ಸ್ಕೀನ್ ನೊಂದಿಗೆ ಹೋಮ್ ಥಿಯೇಟರ್ ಅನ್ನು ಸಹ ಒಳಗೊಂಡಿದೆ.
ಸೋಲಾರ್ ವಾಟರ್ ಹೀಟಿಂಗ್ ಮತ್ತು ಕಾಮನ್ ಲೈಟಿಂಗ್ ಗೆ ಎರಡು ಕೋಟಿ ವೆಚ್ಚ ಮಾಡಲಾಗಿದ್ದು, 36 ಲಕ್ಷ ರೂ ಬಾತ್ ಟಬ್ ಗಾಗಿ , 3.5 ಲಕ್ಷ ವೆಸ್ಟರ್ನ್ ಟಾಯ್ಲೆಟ್ . 33 ಕೋ. ರೂ ಒಳಾಂಗಣ ವಿನ್ಯಾಸ, 22 ಕೋ. ರೂ. ಹೂದೋಟ ನಿರ್ಮಾಣ ವೆಚ್ಚ ಮಾಡಲಾಗಿದೆ.


Click it and Unblock the Notifications