E- Passport Seva 2.0: ಭಾರತದಲ್ಲಿ ಇ- ಪಾಸ್‌ಪೋರ್ಟ್ ಆವೃತ್ತಿ 2.0 ಆರಂಭ..ಅರ್ಜಿ ಸಲ್ಲಿಸುವುದು ಹೇಗೆ..? ಇಲ್ಲಿ ತಿಳಿಯಿರಿ

ಭಾರತವು ಶೀಘ್ರದಲ್ಲೇ ಪಾಸ್‌ಪೋರ್ಟ್ ಹೊಸ ಮತ್ತು ಅಪ್​​​ಗ್ರೇಡ್ ಮಾಡಿದ ಸೇವಾ ಕಾರ್ಯಕ್ರಮದ (ಪಿಎಸ್‌ಪಿ-ಆವೃತ್ತಿ 2.0) ಪ್ರಾರಂಭಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪಾಸ್‌ಪೋರ್ಟ್ ಸೇವಾ ದಿವಸ್ ಸಂದರ್ಭದಲ್ಲಿ ಘೋಷಣೆಯನ್ನು ಮಾಡಿದ್ದಾರೆ.

ಈ ಕುರಿತು 13ನೇ ಪಾಸ್‌ಪೋರ್ಟ್ ಸೇವಾ ದಿವಸ್ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ನಾವು ಭಾರತದಲ್ಲಿ ಶೀಘ್ರದಲ್ಲೇ ಪಾಸ್‌ಪೋರ್ಟ್ ಹೊಸ ಮತ್ತು ಅಪ್​​​ಗ್ರೇಡ್ ಮಾಡಿದ ಸೇವಾ ಕಾರ್ಯಕ್ರಮದ ಪಿಎಸ್‌ಪಿ-ಆವೃತ್ತಿ 2.0ಯನ್ನು ಆರಂಭಿಸಲಿದೆ ಎಂದು ಎಂದು ಮಾಹಿತಿಯನ್ನು ತಿಳಿಸಲಾಗಿದೆ.

ಶೀಘ್ರದಲ್ಲೇ  ಭಾರತದಲ್ಲಿ ಇ- ಪಾಸ್‌ಪೋರ್ಟ್ ಆವೃತ್ತಿ 2.0 ಆರಂಭ

ಭಾರತ ಸರ್ಕಾರ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ ಮೂಲಕ ನಾಗರಿಕರಿಗೆ ಸಕಾಲಿಕ,ವಿಶ್ವಾಸಾರ್ಹ, ಪ್ರವೇಶಿಸಬಹುದಾದ, ಪಾರದರ್ಶಕ, ಮತ್ತು ದಕ್ಷ ಸೇವೆಗಳನ್ನು ಒದಗಿಸಲು ಬದ್ಧವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪೋಸ್ಟ್ ಮಾಡಿದ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಸೇವಾ ವಿತರಣೆಯಲ್ಲಿ "ಗಮನಾರ್ಹ ಪರಿವರ್ತನೆ" ಎಂದು ಲೇಬಲ್ ಮಾಡಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ಕಾರ್ಯಕ್ರಮವನ್ನು ಮೂರು ಸ್ತಂಭಗಳೊಂದಿಗೆ ಸಂಯೋಜಿಸಿದ್ದಾರೆ. ಅದರಲ್ಲಿ ಸೇವಾ (ಸೇವೆ), ಸುಶಾಸನ್ (ಉತ್ತಮ ಆಡಳಿತ) ಮತ್ತು ಗರೀಬ್ ಕಲ್ಯಾಣ್ (ಕಲ್ಯಾಣ). ಸಚಿವರಿಗೆ, ಈ ಪರಿಕಲ್ಪನೆಗಳು ಇನ್ನು ಮುಂದೆ ಸೈದ್ಧಾಂತಿಕವಾಗಿಲ್ಲ ಅವುಗಳನ್ನು ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದಂತಹ ಸೇವೆಗಳ ಮೂಲಕ ಕಾರ್ಯಗತವಾಗಿಲ್ಲ ಎಮದು ಪೋಸ್ಟ್ ಮಾಡಿದ್ದಾರೆ.

ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ

ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮವು ಕೇವಲ ಕಾಗದಪತ್ರಗಳನ್ನು ಒದಗಿಸುವ ಪ್ರಕ್ರಿಯೆಗಿಂತಲೂ ಹೆಚ್ಚಿನ ಮಹತ್ವವನ್ನು ಹೊಂದಿದೆ. ಒಂದು ಕಾಲದಲ್ಲಿ ಭಾರತದಲ್ಲಿ ಪಾಸ್‌ಪೋರ್ಟ್ ಪಡೆಯುವುದು ಸುದೀರ್ಘ ಮತ್ತು ಕ್ಲಿಷ್ಟಕರವಾದ ಪ್ರಕ್ರಿಯೆಯಾಗಿತ್ತು. ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿತ್ತು, ಕೆಂಪು ಪಟ್ಟಿಯ ನಿಯಮಗಳು ಅಡ್ಡಿಯಾಗಿದ್ದವು, ಮತ್ತು ವರ್ಷಗಟ್ಟಲೆ ಕಾಯುವಿಕೆ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.

ಭಾರತದಲ್ಲಿ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್‌ಪಿ), ಭಾರತೀಯ ನಾಗರಿಕರು ತಮ್ಮ ಪಾಸ್‌ಪೋರ್ಟ್‌ಗಳನ್ನು ಪಡೆಯುವ, ನವೀಕರಿಸುವ ಮತ್ತು ಅರ್ಜಿ ಸಲ್ಲಿಸುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ. ಈ ಕಾರ್ಯಕ್ರಮವು ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಲಾಗುತ್ತದೆ.

ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು, ಅಪಾಯಿಂಟ್‌ಮೆಂಟ್ ಕಾಯ್ದಿರಿಸುವುದು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡುವ ಸೌಲಭ್ಯಗಳಿವೆ. ಇದರಿಂದಾಗಿ ಕಚೇರಿಗಳಿಗೆ ಅಲೆದಾಡುವ ಮತ್ತು ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವ ತೊಂದರೆ ತಪ್ಪಿದೆ. ಅಲ್ಲದೆ, ಪ್ರಕ್ರಿಯೆಯು ಪಾರದರ್ಶಕವಾಗಿರುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲಾಗುತ್ತದೆ.

ಪಿಎಸ್‌ಪಿ ಸರ್ಕಾರದ ಒಟ್ಟಾರೆ ದೃಷ್ಟಿಕೋನ "ವಿಕ್ಷಿತ್ ಭಾರತ"ದ ಅಭಿವ್ಯಕ್ತಿಯಾಗಿದೆ ಎಂದು ಎಂದು ಹೇಳಿದ್ದಾರೆ. ಇದು ತಂತ್ರಜ್ಞಾನ ಮತ್ತು ಆಡಳಿತವನ್ನು ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಹೊಂದಿಕೊಂಡ ಅಭಿವೃದ್ಧಿ ಹೊಂದಿದ ಭಾರತವಾಗಿದೆ. ಅವರ ಮಾತಿನಲ್ಲಿ ಹೇಳುವುದಾದರೆ, "ಸೇವೆ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ನಮ್ಮನ್ನು ವಿಕ್ಷಿತ್ ಭಾರತಕ್ಕೆ ಕೊಂಡೊಯ್ಯುವ ಆಡಳಿತದ ಮೂರು ಪ್ರಮುಖ ಸ್ತಂಭಗಳಾಗಿವೆ. ಅವೆಲ್ಲವನ್ನೂ ನಮ್ಮ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದಲ್ಲಿ ನಡೆಸಲಾಗುತ್ತದೆ.

ಪಾಸ್‌ಪೋರ್ಟ್ ಸೇವಾ ಯೋಜನೆ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳೊಂದಿಗೆ (POPSK) ಶ್ರೇಣಿ 3 ಮತ್ತು ಶ್ರೇಣಿ 2 ಪಟ್ಟಣಗಳು ಮತ್ತು ಜಿಲ್ಲೆಗಳಿಳಿಗೂ ತನ್ನ ಸೇವೆಯನ್ನು ವಿಸ್ತರ ಮಾಡಿದೆ. ಇದರಿಂದಾಗಿ ಮೊದಲ ಬಾರಿಗೆ ಅರ್ಜಿದಾರರು, ವಲಸೆ ಕಾರ್ಮಿಕರು ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿನ ವಿದ್ಯಾರ್ಥಿಗಳು ಹೆಚ್ಚು ದೂರ ಪ್ರಯಾಣಿಸದೆ ಪಾಸ್‌ಪೋರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳು

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳು ಅತಿದೊಡ್ಡ ಘೋಷಣೆಗಳಲ್ಲಿ ಒಂದಾಗಿದೆ. ಇದು ದೇಶಾದ್ಯಂತ ಇ-ಪಾಸ್‌ಪೋರ್ಟ್‌ಗಳ ಪರಿಚಯವೂ ಕೂಡ ಇದಾಗಿದೆ. ಇದು ಹೊಸ ಕವರ್ ಹೊಂದಿರುವ ಹೊಸ ಪಾಸ್‌ಪೋರ್ಟ್‌ ಗಳಲ್ಲ, ಅವು ನಿರ್ಣಾಯಕ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುವ ಮೈಕ್ರೋಚಿಪ್‌ನೊಂದಿಗೆ ಎಂಬೆಡ್ ಅಳವಡಿಸಲಾಗಿದೆ.

ಇ-ಪಾಸ್‌ಪೋರ್ಟ್‌ಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.

ಸುರಕ್ಷಿತ ಎಂಬೆಡೆಡ್ ಚಿಪ್: ಪಾಸ್‌ಪೋರ್ಟ್‌ಗಳು ಮುಂಭಾಗದ ಕವರ್‌ನಲ್ಲಿ ಇರುವ ಈ ಚಿಪ್ ನಿಮ್ಮ ಹೆಸರು, ಪಾಸ್‌ಪೋರ್ಟ್ ಸಂಖ್ಯೆ, ಜನ್ಮ ದಿನಾಂಕ ಮತ್ತು ನಿಮ್ಮ ಭಾವಚಿತ್ರವನ್ನು ಬೆರಳಚ್ಚುಗಳಂತಹ ಬಯೋಮೆಟ್ರಿಕ್ ವಿವರಗಳು ಇರುತ್ತೇವೆ.

ಸರಗವಾಗಿ ಓದಬಹುದು: ಅಧಿಕಾರಿಗಳು ಪಾಸ್‌ಪೋರ್ಟ್ ಅನ್ನು ಸಂಪೂರ್ಣವಾಗಿ ತೆರೆಯದೆ ಅಥವಾ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡದೆಯೇ ಚಿಪ್ ಅನ್ನು ಬಹುಬೇಗನೆ ಓದುವ ಸಾಮರ್ಥ್ಯವನ್ನು ಒಳಗೊಂಡಿದೆ.

ICAO ಕಂಪ್ಲೈಂಟ್: ಇ-ಪಾಸ್‌ಪೋರ್ಟ್‌ಗಳು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಿಂದ ವಿನ್ಯಾಸಗೊಳಿಸಿದ ಅನುಗುಣವಾಗಿರುತ್ತವೆ ಇದರಿಂದ ಅವುಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಸುಲಭವಾಗಿ ಗುರುತಿಸಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಟ್ಯಾಂಪರ್‌-ಪ್ರೂಫ್: ಇ-ಪಾಸ್‌ಪೋರ್ಟ್‌ಗಳಲ್ಲಿ ಎನ್‌ಕ್ರಿಪ್ಶನ್ ಮತ್ತು ಸುರಕ್ಷಿತ ಚಿಪ್ ತಂತ್ರಜ್ಞಾನದಿಂದಾಗಿ, ನಕಲಿ ಆಗುವ ಸಾಧ್ಯತೆ ಕಡಿಮೆಯಾಗಿದೆ. ಇದು ಭಾರತೀಯ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಇ

ಇ-ಪಾಸ್‌ಪೋರ್ಟ್‌ಗಳ ಪ್ರಯೋಜನಗಳೇನು?

ಇ-ಪಾಸ್‌ಪೋರ್ಟ್‌ಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ ಅವುಗಳು ಈ ಕೆಳಗಿನಂತೆ ಇದೆ.

  • ದೇಶದ ಗಡಿ ದಾಟುವಿಕೆಯಲ್ಲಿ ಸಮಯದ ಉಳಿತಾಯ: ವಿಮಾನ ನಿಲ್ದಾಣಗಳಲ್ಲಿ ತ್ವರಿತ ಸ್ಕ್ಯಾನಿಂಗ್ ಮಾಡಬಹುದು ಮತ್ತು ವಿಮಾನ ನಿಲ್ದಾಣಗಳಲ್ಲಿ ಕಡಿಮೆ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ.
  • ಭದ್ರತೆ : ಅಂತರ್ನಿರ್ಮಿತ ಚಿಪ್ ದುರುಪಯೋಗ ಅಥವಾ ನಕಲಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
  • ಡಿಜಿಟಲ್ ಸಂಗ್ರಹಣೆ: ಪ್ರಯಾಣಿಕರ ಎಲ್ಲಾ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಚಿಪ್ ಒಳಗೆ ಸುರಕ್ಷಿತವಾಗಿ ಸಂಗ್ರಹಣೆಯನ್ನು ಮಾಡಲಾಗುತ್ತದೆ.
  • ಜಾಗತಿಕ ಬಳಕೆ : ಪಾಸ್‌ಪೋರ್ಟ್‌ಗಳು ICAO ಮಾನದಂಡಗಳಿಗೆ ಅನುಗುಣವಾಗಿರುವುದರಿಂದ, ಅವು ಜಾಗತಿಕವಾಗಿ ಗುರುತಿಸಲ್ಪಟ್ಟುತ್ತದೆ.

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ..?

  • ನೀವು ಮೊದಲ ಬಾರಿಗೆ ಸರ್ಕಾರದ ಅಧಿಕೃತ ವೆಬ್‌ಸೈಟ್ passportindia.gov.in ಗೆ ಭೇಟಿಯನ್ನು ನೀಡಬೇಕಾಗುತ್ತದೆ. ಇದು ಭಾರತದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇದು ಏಕೈಕ ಅಧಿಕೃತ ವೆಬ್‌ಸೈಟ್ ಆಗಿದೆ.
  • ನೀವೇನಾದರೂ ಮೊದಲ ಬಾರಿಗೆ ಇ-ಪಾಸ್‌ಪೋರ್ಟ್‌ಗೆ ಅರ್ಜಿಸಲ್ಲಿಸುತ್ತಿದ್ದರೆ ಮೊದಲು ಬಳಕೆದಾರರು ಹೆಸರು, ಜನ್ಮ ದಿನಾಂಕ ಮತ್ತು ಸಂಪರ್ಕ ಸಂಖ್ಯೆಯ ಆಧಾರದ ಮೇಲೆ ನೋಂದಾಯಿಸಿಕೊಳ್ಳಬಹುದು. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ ಲಾಗಿನ್ ಮಾಡಬೇಕಾಗುತ್ತದೆ.
  • ತದನಂತರ ಇ-ಪಾಸ್‌ಪೋರ್ಟ್ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ವೈಯಕ್ತಿಕ ವಿವರಗಳು, ಪ್ರಯಾಣ ಇತಿಹಾಸ ಮತ್ತು ಗುರುತಿನ ಡೇಟಾವನ್ನು ನಮೂದಿಸಿ. ನಿಮ್ಮ ಅಪಾಯಿಂಟ್‌ಮೆಂಟ್‌ಗಾಗಿ ಸ್ಥಳೀಯ ಪಾಸ್‌ಪೋರ್ಟ್ ಸೇವಾ ಕೇಂದ್ರ (PSK) ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ (POPSK) ಆಯ್ಕೆ ಮಾಡಿಕೊಳ್ಳಬೇಗುತ್ತದೆ.
  • ಪಾವತಿ ಗೇಟ್‌ವೇ ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ನೆಟ್ ಬ್ಯಾಂಕಿಂಗ್‌ನಂತಹ ಬಹು ಆಯ್ಕೆಗಳನ್ನು ಮಾಡಿಕೊಳ್ಲಬಹುದು. ದಿನಾಂಕ ಮತ್ತು ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+