ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ. 9.8ಕ್ಕೆ ತಗ್ಗಿಸಿದ ಎಸ್‌&ಪಿ

ಪ್ರಸಕ್ತ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಶೇಕಡಾ 9.8 ಕ್ಕೆ ಇಳಿಸಿದೆ. ಕೋವಿಡ್-19 ಎರಡನೇ ಅಲೆಯ ಪರಿಣಾಮ ಜಿಡಿಪಿ ಬೆಳವಣಿಗೆ ತಗ್ಗಬಹುದು ಎಂದು ಅಂದಾಜಿಸಲಾಗಿದೆ.

ಮಾರ್ಚ್‌ನಲ್ಲಿ ಅಮೆರಿಕಾ ಮೂಲದ ರೇಟಿಂಗ್ ಏಜೆನ್ಸಿಯು 2020-21ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಶೇಕಡಾ 11 ರಷ್ಟು ಎಂದು ಅಂದಾಜಿಸಿತ್ತು.
ವೇಗವಾದ ಆರ್ಥಿಕ ಪುನರಾರಂಭ ಮತ್ತು ಆದಾಯ ಸಂಗ್ರಹ ಹೆಚ್ಚಳದಿಂದಾಗಿ ಜಿಡಿಪಿ ಬೆಳವಣಿಗೆ ಸಾಧಿಸಬಹುದು ಎನ್ನಲಾಗಿತ್ತು.

ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ. 9.8ಕ್ಕೆ ತಗ್ಗಿಸಿದ ಎಸ್‌&ಪಿ

"ಭಾರತದಲ್ಲಿ ಕೋವಿಡ್-19 ಎರಡನೇ ಅಲೆಯು ಈ ಹಣಕಾಸು ವರ್ಷದಲ್ಲಿ ಶೇಕಡಾ 11 ರಷ್ಟು ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಮರುಪರಿಶೀಲಿಸುವಂತೆ ಪ್ರೇರೇಪಿಸಿದೆ. ಸೋಂಕು ಪ್ರಕರಣಗಳಲ್ಲಿನ ಹೆಚ್ಚಳ ಮತ್ತು ನಂತರದ ಕುಸಿತದ ಪ್ರಮಾಣವು ಪರಿಶೀಲನೆಯನ್ನು ಬದಲಿಸುತ್ತದೆ" ಎಂದು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಮುಖ್ಯ ಅರ್ಥಶಾಸ್ತ್ರಜ್ಞ ಶಾನ್ ರೋಚ್ ಹೇಳಿದ್ದಾರೆ.

ಪ್ರಸ್ತುತ ಸ್ಥಿರ ದೃಷ್ಟಿಕೋನ ಹೊಂದಿರುವ ಭಾರತದ ಮೇಲೆ 'ಬಿಬಿಬಿ-' ರೇಟಿಂಗ್ ನೀಡಿರುವ ಎಸ್ & ಪಿ, ಭಾರತೀಯ ಆರ್ಥಿಕತೆಯ ಹಣಕಾಸಿನ ಸ್ಥಿತಿಯನ್ನ ಈಗಾಗಲೇ ವಿಸ್ತರಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+