ಜಾಗತಿಕ ಆರ್ಥಿಕ ಹಿಂಜರಿತದ ಭಯದ ಮಧ್ಯೆ ಅನೇಕ ದೇಶಗಳ ಆರ್ಥಿಕತೆಯ ವೇಗ ಮಂದಗೊಂಡಿದೆ. ರಷ್ಯಾ ಉಕ್ರೇನ್ ಯುದ್ಧಕ್ಕೆ ಮುನ್ನ ವೇಗ ಪಡೆದುಕೊಂಡಿದ್ದ ಆರ್ಥಿಕತೆಗಳು ನಿಧಾನವಾಗಿ ಹೆಜ್ಜೆ ಹಾಕುತ್ತಿವೆ. ಇದಕ್ಕೆ ಭಾರತವೂ ಹೊರತಲ್ಲ. ಆರ್‌ಬಿಐ ಕೂಡ ಸೇರಿದಂತೆ ಹಲವು ಸಂಸ್ಥೆಗಳು ಭಾರತದ ಜಿಡಿಪಿ ಪ್ರಗತಿಯ ವೇಗದ ನಿರೀಕ್ಷೆಯನ್ನು ಕಡಿಮೆ ಮಾಡಿವೆ. ಈ ಪಟ್ಟಿಗೆ S&P ಗ್ಲೋಬಲ್ ರೇಟಿಂಗ್ಸ್ ಸೇರಿದೆ. 2022-23ರ ಹಣಕಾಸು ವರ್ಷದಲ್ಲಿ ಶೇ. 7.3ರಷ್ಟು ಬೆಳವಣಿಗೆ ಆಗಬಹುದು ಎಂದು ಸೆಪ್ಟೆಂಬರ್‌ನಲ್ಲಿ ನಿರೀಕ್ಷಿಸಿದ್ದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್, ಇದೀಗ ಅದನ್ನು ಶೇ. 7ಕ್ಕೆ ತಗ್ಗಿಸಿದೆ. ಮುಂದಿನ ದಿನಗಳಲ್ಲಿ ವೇಗ ಇನ್ನಷ್ಟು ತಗ್ಗಬಹುದು. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಹೊಸ ಅಂದಾಜು ಮಾಡಿದೆ.
2021ರಲ್ಲಿ ಭಾರತದ ಆರ್ಥಿಕತೆ ಶೇ.8.5ರಷ್ಟು ಇತ್ತು. ಜಾಗತಿಕ ಆರ್ಥಿಕ ಮುಗ್ಗಟ್ಟು ವಕ್ಕರಿಸದೇ ಇದ್ದಿದ್ದರೆ ಈ ವರ್ಷವೂ ಜಿಡಿಪಿ ಶೇ. 8ಕ್ಕಿಂತ ಹೆಚ್ಚು ಅಭಿವೃದ್ಧಿ ಸಾಧಿಸುವ ನಿರೀಕ್ಷೆ ಇತ್ತು. ಆದರೂ ವಿಶ್ವದ ಇತರ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಬೆಳವಣಿಗೆ ತುಸು ಮೇಲ್ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ. ಈ ಅಂಶವನ್ನು ಬಹುತೇಕ ಆರ್ಥಿಕ ತಜ್ಞರು ಒಪ್ಪಿದ್ದಾರೆ.
ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಎಂಬುದು ಅಮೆರಿಕ ಮೂಲಕ ಕ್ರೆಡಿಟ್ ರೇಟಿಂಗ್ ಕೊಡುವ ಸಂಸ್ಥೆಯಾಗಿದೆ. ಏಷ್ಯಾ ಪೆಸಿಫಿಕ್ ಪ್ರದೇಶದ ಆರ್ಥಿಕತೆ ಬೆಳವಣಿಗೆ ಬಗ್ಗೆ ತನ್ನ ತ್ರೈಮಾಸಿಕ ವರದಿಯನ್ನು ಇದೀಗ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಆರ್ಥಿಕತೆ ಚಿಂತಾಜನಕ ಸ್ಥಿತಿಗೆ ಬರುವ ಸಾಧ್ಯತೆ ಇಲ್ಲ ಎಂಬಂತಹ ಶುಭ ವಾರ್ತೆಯನ್ನು ತಿಳಿಸಿದೆ.
ಕೆಲ ದೇಶಗಳಲ್ಲಿ ಕೋವಿಡ್ ಬಳಿಕ ಏರಿದ್ದ ಆಂತರಿಕ ಬೇಡಿಕೆ ಇನ್ನೂ ಅಂತ್ಯಗೊಂಡಿಲ್ಲ. ಇದು ಭಾರತದ ಪ್ರಗತಿಗೆ ನೆರವಾಗಬಹುದು. ಭಾರತದಂತಹ ಆಂತರಿಕ ಬೇಡಿಕೆ ಆಧಾರಿತ ಆರ್ಥಿಕತೆಗಳಿಗೆ ಜಾಗತಿಕ ಹಿನ್ನಡೆಯು ಅಷ್ಟೇನೂ ದೊಡ್ಡ ಪರಿಣಾಮ ಬೀರುವುದಿಲ್ಲ. ಭಾರತದ ಉತ್ಪಾದನೆ 2022-23ರ ಹಣಕಾಸು ವರ್ಷದಲ್ಲಿ ಶೇ. 7 ಮತ್ತು 2023-24ರ ಹಣಕಾಸು ವರ್ಷದಲ್ಲಿ ಶೇ. 6ರಷ್ಟು ಹೆಚ್ಚಾಗಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.
ಹಣದುಬ್ಬರ
ಭಾರತದ ಹಣದುಬ್ಬರ ದರ ಈ ಹಣಕಾಸು ವರ್ಷದಲ್ಲಿ ಸರಾಸರಿ ಶೇ. 6.8ರಷ್ಟಕ್ಕೆ ಬಂದು ನಿಲ್ಲಬಹುದು. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ 2023 ಮಾರ್ಚ್‌ನಷ್ಟರಲ್ಲಿ ರೆಪೋ ದರವನ್ನು ಶೇ. 6.5ಕ್ಕೆ ಏರಿಸಬಹುದು ಎಂದೂ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ.

ಸದ್ಯ ಆರ್‌ಬಿಐ ಬಡ್ಡಿ ದರ ಶೇ. 5.9 ಇದೆ. ಹಣದುಬ್ಬರ ನಿಯಂತ್ರಿಸಲು ಇತ್ತೀಚೆಗೆ 1.9 ಪ್ರತಿಶತ ಅಂಕಗಳಷ್ಟು ಬಡ್ಡಿ ದರ ಏರಿಕೆ ಮಾಡಲಾಗಿದೆ. ಈಗ ಹಣದುಬ್ಬರ ದರ ತುಸು ತಗ್ಗಿದೆಯಾದರೂ ಆರ್‌ಬಿಐ ನಿರೀಕ್ಷಿಸಿರುವ ಶೇ. 6ರ ಮಟ್ಟಕ್ಕಿಂತ ಹೆಚ್ಚೇ ಇರಲಿರುವುದರಿಂದ ಬಡ್ಡಿ ದರ ಕಡಿಮೆ ಮಾಡುವ ಸಾಧ್ಯತೆ ಇಲ್ಲ. ಹಂತ ಹಂತವಾಗಿ ಸಣ್ಣ ಪ್ರಮಾಣದಲ್ಲಿ ರೆಪೋ ದರವನ್ನು ಇನ್ನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
ಈ ತ್ರೈಮಾಸಿಕದಲ್ಲಿ ಹೇಗಿದೆ ಅಭಿವೃದ್ಧಿ?
ಇದೇ ವೇಳೆ ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಭಾರತದ ಆರ್ಥಿಕ ಪ್ರಗತಿ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಶೇ. 6.2ಕ್ಕೆ ಇಳಿದಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ 13.5ರಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ಬಹಳ ಕಡಿಮೆ ಆಗುವ ಸೂಚನೆ ಇದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ತಜ್ಞರ ಪ್ರಕಾರ, ರಫ್ತು ಮತ್ತು ಹೂಡಿಕೆ ಕಡಿಮೆಗೊಂಡು ಮುಂದಿನ ಆರ್ಥಿಕ ಚಟುವಟಿಕೆಗೆ ಹಿನ್ನಡೆಯೂ ಆಗಬಹುದು.
ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ ಎರಡಂಕಿ ದರದಲ್ಲಿ ಜಿಡಿಪಿ ಬೆಳೆವಣಿಗೆ ಆಗಲು ಕಾರಣ ಇದೆ. ಅದರ ಹಿಂದಿನ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಕೋವಿಡ್ ಕಾರಣಕ್ಕೆ ಆರ್ಥಿಕತೆ ಬಹಳ ಹದಗೆಟ್ಟು ಬೆಳವಣಿಗೆ ಕುಂಠಿತಗೊಂಡಿತ್ತು. ಕೋವಿಡ್ ಅಪಾಯ ಮುಗಿದ ಬಳಿಕ ಆರ್ಥಿಕತೆ ಬಹುತೇಕ ಮತ್ತೆ ಗರಿಗೆದರಿತ್ತು. ಇದರಿಂದ ಆರ್ಥಿಕತೆ ಮತ್ತೆ ಸಹಜ ಸ್ಥಿತಿಗೆ ಬಂದಿತು. ಹಿಂದಿನ ವರ್ಷದ ಹೀನಾಯ ಸ್ಥಿತಿಗೆ ಹೋಲಿಸಿದಾಗ ಆರ್ಥಿಕ ಬೆಳವಣಿಗೆ ಪುಟಿದೆದ್ದಂತೆ ಕಾಣುತ್ತದೆ.
More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications