ಬಂಡೀಪುರ ಮತ್ತು ನಾಗರಹೊಳೆಯಲ್ಲಿ (Bandipur - Nagarahole) ಹುಲಿ ದಾಳಿಗಳ ಪ್ರಕರಣಗಳು ಹೆಚ್ಚಾದಂತೆ, ಮಾನವ-ಪ್ರಾಣಿ ನಡುವಿನ ಸಂಘರ್ಷ ಪ್ರಕರಣಗಳ ವರದಿಯ ಬೆನ್ನಲ್ಲೇ, ಕಳೆದ ನವೆಂಬರ್ 7 ರಂದು ರಾಜ್ಯ ಸರ್ಕಾರ (Karnataka Govt) ಸಫಾರಿಯನ್ನು ಬ್ಯಾನ್ (Safari Ban) ಮಾಡಿತು. ಈಗಾಗಲೇ ಸಫಾರಿ ಬ್ಯಾನ್ ಮಾಡಿ ಒಂದು ತಿಂಗಳು ಕಳೆದಿದೆ.

ಇದೀಗ ಕರ್ನಾಟಕದಲ್ಲಿ ಅರಣ್ಯ ಸಫಾರಿ ನಿಷೇಧ ಮುಂದುವರಿದಿದ್ದು, ರಜಾಕಾಲದಲ್ಲಿಯೂ ಜಂಗಲ್ ರೆಸಾರ್ಟ್‌ಗಳು ಮತ್ತು ವಸತಿ ನಿಲಯಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿದೆ. ಸಫಾರಿಯೇ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿರುವುದರಿಂದ ಸದ್ಯ ಬುಕಿಂಗ್‌ನಲ್ಲೂ ಇಳಿಕೆಯಾಗಿದೆ. ಅಲ್ಲದೇ ಸರ್ಕಾರ ಕೂಡಾ ಪರಿಶೀಲನೆ ನಂತರ ಪರಿಹಾರ ನೀಡುವುದಾಗಿದೆ ಎಂದು ಹೇಳಿದೆ. ಆದರೆ ಮಾಲೀಕರು ಮಾತ್ರ ಸಫಾರಿ ಬ್ಯಾನ್‌ನಿಂದ, ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ.
ಅರಣ್ಯ ಇಲಾಖೆಯಿಂದ ನೋ ರೆಸ್ಪಾನ್ಸ್!
ಇದೀಗ ಬಂಡೀಪುರದ ವಸತಿ ಮಾಲೀಕ ದೀಪಕ್ ಪಿ.ಬಿ. "ಸಫಾರಿ ಇಲ್ಲದೆ ರಜಾಕಾಲದಲ್ಲೂ ಗ್ರಾಹಕರಿಲ್ಲ, ಹಲವರ ಬದುಕು ಇದರ ಮೇಲೆಯೇ ಅವಲಂಬಿತವಾಗಿದೆ" ಎಂದು ಹೇಳಿದರು. ಇನ್ನು ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.
ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹುಲಿ ದಾಳಿಗಳು ಸೇರಿದಂತೆ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ವರದಿಯ ಹಿನ್ನೆಲೆಯಲ್ಲಿ, ನವೆಂಬರ್ 7 ರಂದು ರಾಜ್ಯ ಸರ್ಕಾರ ಸಫಾರಿಯನ್ನು ಅಮಾನತುಗೊಳಿಸಿತು. ಬಂಡೀಪುರದ ವಸತಿ ಮಾಲೀಕ ದೀಪಕ್ ಪಿ.ಬಿ. "ಸಫಾರಿ ಇಲ್ಲದೆ ರಜಾಕಾಲದಲ್ಲೂ ಸುಧಾರಣೆಯಿಲ್ಲ, ಹಲವರ ಬದುಕು ಇದರ ಮೇಲೆ ಅವಲಂಬಿತವಾಗಿದೆ" ಎಂದರು. ಮಾಲಿಕ್ ಶೇಖ್ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಉತ್ತರವಿಲ್ಲ.
ಬಂಡೀಪುರದಿಂದ 15 ಕಿ.ಮೀ. ದೂರದ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶವು ಸಫಾರಿ ಬಯಸುವ ಪ್ರವಾಸಿಗರಿಗೆ ಸದ್ಯ ಪರ್ಯಾಯ ತಾಣವಾಗಿದೆ. ಆದರೆ ಮಾಲೀಕ ಸಂತೋಷ್ ಕುಮಾರ್ ಪ್ರಕಾರ, ಕೆಲವು ವ್ಯವಹಾರಗಳು ಮಾತ್ರ ಸದ್ಯದ ಮಟ್ಟಿಗೆ ಮುದುಮಲೈಗೆ ಸ್ಥಳಾಂತರಗೊಂಡಿದ್ದು, ಪ್ರವಾಸಿಗರೂ ಕೂಡಾ ಆತ್ತ ಮುಖ ಮಾಡುತ್ತಿದ್ದಾರೆ. ಆದರೆ, ಬಂಡೀಪುರ ಸಫಾರಿಗೆ ಹೇಳಿ ಮಾಡಿಸಿದ ಸ್ಥಳವಾದ್ದರಿಂದ, ಮುದುಮಲೈಗೆ ಹೋದ ಕೆಲ ಪ್ರವಾಸಿಗರು ನಿರಾಶೆಗೊಂಡಿದ್ದಾರೆ ಎನ್ನಲಾಗಿದೆ.
ಮಾಲೀಕರಿಂದ ಮನವಿ
ಇನ್ನು ಈ ಬಗ್ಗೆ ಮಾಲೀಕರೊಬ್ಬರು ಮಾತನಾಡಿ "ಮುದುಮಲೈಗೆ ಸ್ಥಳಾಂತರ ಮಾಡುವುದೆಂದರೆ ಸುಲಭದ ಮಾತಲ್ಲ, ಅಲ್ಲಿ ಅನೇಕ ವಸತಿಗಳಿವೆ. ಕೊಠಡಿ ಬಾಡಿಗೆ ₹14,000ದಿಂದ ₹10,000ಕ್ಕೆ ಇಳಿಸಲಾಗಿದೆ, ಆದರೂ ಬುಕಿಂಗ್ ಸಿಕ್ಕಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ನಾಗರಹೊಳೆಯ ರೆಸಾರ್ಟ್ ಮಾಲೀಕರು ಅರಣ್ಯ ಸಚಿವರಿಗೆ ನಿಷೇಧ ಹಿಂಪಡೆಯಲು ಒತ್ತಾಯಿಸಿದ್ದು, "ಪರಿಸ್ಥಿತಿ ಹೀಗೇ ಮುಂದುವರಿದರೆ ವ್ಯಾಪಾರಕ್ಕಿಲ್ಲ ಭವಿಷ್ಯ" ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, "ವ್ಯಾಪಾರಸ್ಥರು ಸಫಾರಿ ನಿಷೇಧ ತೆರವಿಗೆ ಮನವಿ ಮಾಡಿದ್ದಾರೆ. ಆದರೆ 20-30 ಹುಲಿಗಳು ಹೊರಗೆ ಅಡ್ಡಾಡುತ್ತಿರುವುದರಿಂದ ಪರಿಸ್ಥಿತಿ ಅಪಾಯಕಾರಿಯಾಗಿದೆ" ಎಂದು ಹೇಳಿದರು. ವಾಹನ ಸಂಚಾರವೇ ದಾಳಿಗೆ ಕಾರಣವೆಂಬ ಅಭಿಪ್ರಾಯವಿದೆ. "ಜನರ ಸುರಕ್ಷತೆ ಪ್ರಮುಖ ಆದ್ಯತೆ; ಮುಂದಿನ ನಿರ್ಧಾರವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ತೆಗೆದುಕೊಳ್ಳಲಾಗುವುದು" ಎಂದು ಗೊಂದಲಗಳಿಗೆ ಸ್ಪಷ್ಟನೆ ನೀಡಿದರು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ



Click it and Unblock the Notifications