ಈಗಾಗಲೇ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಬೈಕ್, ಆಟೋ ಸೇವೆಯನ್ನು ನೀಡುವಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಭಾರೀ ಬೇಡಿಕೆಯಿದೆ. ಈ ಆಧಾರದಲ್ಲಿ ರ್ಯಾಪಿಡೋ, ಓಲಾ, ಊಬರ್, ನಮ್ಮ ಯಾತ್ರಿ ಪ್ಲಾಟ್‌ಫಾರ್ಮ್‌ಗಳು (Rapido, Ola, Uber, Namma Yatri) ಸೇವೆ ಸಲ್ಲಿಸುತ್ತಿದೆ. ಆದರೆ ಈ ಸೇವೆ ಬಗ್ಗೆ ಮಹಿಳೆಯರಿಂದ (Women) ಭಾರೀ ಆರೋಪಗಳು ಕೇಳಿಬಂದಿತ್ತು. ಅಲ್ಲದೇ ಅನೇಕ ಅಹಿತಕರ ಘಟನೆಗಳು ಕೂಡಾ ನಡೆದಿರುವ ಪ್ರಕರಣಗಳು ಕೂಡಾ ಬೆಳಕಿಗೆ ಬಂದಿತ್ತು.

ಇದೀಗ ಈ ಆರೋಪಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಹಿಳಾ ಚಾಲಕರು ಮತ್ತು ಪ್ರಯಾಣಿಕರಿಗಾಗಿ 'ಸಖಿ ಆಟೋ' (Sakhi Auto) ಎಂಬ ವಿಶೇಷ ಆಟೋ ಸೇವೆಯನ್ನು ಆರಂಭಿಸಲು ಸಜ್ಜಾಗಿದ್ದಾರೆ. ಈ ಸಖಿ ಆಟೋ ಸೇವೆ ಇದೇ ಫೆಬ್ರವರಿ 14, 2026 ರಂದು ಕಾರ್ಯಾರಂಭ ಮಾಡಲಿದೆ. ರೈಡ್-ಹೇಲಿಂಗ್ ಮಾದರಿಯ ಈ ಸೇವೆಯು, ಜನವರಿಯಲ್ಲಿ ನಡೆದ ಪೈಲಟ್ ಓಟದಲ್ಲಿ ಒಂದು ವಾರದಲ್ಲಿ ಸುಮಾರು 17 ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ.
ಸಖಿ ಆಟೋನ ಸ್ಥಾಪಕರು ಯಾರು?
ಬೆಂಗಳೂರಿನಲ್ಲಿ ಫೆಬ್ರವರಿ 14 ರಂದು ಆರಂಭವಾಗಲಿರುವ ಈ "ಸಖಿ ಆಟೋ" ಸೇವೆಯನ್ನು ಕೃಷ್ಣವಿ ಪರೇಖ್ ಅವರು ಆರಂಭಿಸುತ್ತಿದ್ದಾರೆ. ಕೇವಲ 24 ವಯಸ್ಸಿನ ಈ ಯುವತಿ, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಈ ವಿಶೇಷ ಮಹಿಳಾ-ಕೇಂದ್ರಿತ ಆಟೋ ಸೇವೆಯ ಸ್ಥಾಪಕಿಯಾಗಿದ್ದಾರೆ.
ಸಂಸ್ಥಾಪಕಿ ಕೃಷ್ಣವಿ ಪರೇಖ್ ಪ್ರಕಾರ, ಆರಂಭದಲ್ಲಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ರವರೆಗೆ ಸೇವೆ ಲಭ್ಯವಿರಲಿದೆ. ಬೇಡಿಕೆ ಹೆಚ್ಚಾದಲ್ಲಿ 24 ಗಂಟೆಗಳಿಗೂ ವಿಸ್ತರಿಸಬಹುದು ಎಂದು ಹೇಳಲಾಗಿದೆ. 'ಸಖಿ'ಯಲ್ಲಿ ಸರ್ಜ್ ಪ್ರೈಸಿಂಗ್ ಇರುವುದಿಲ್ಲ. ಮೊದಲ ಎರಡು ಕಿಲೋಮೀಟರ್‌ಗಳಿಗೆ ಕನಿಷ್ಠ ₹50 ಬಾಡಿಗೆ ನಿಗದಿಪಡಿಸಲಾಗಿದ್ದು, ನಂತರ ಪ್ರತಿ ಕಿಲೋಮೀಟರ್‌ಗೆ ₹20 ಹೆಚ್ಚುವರಿ ದರವಿರುತ್ತದೆ ಎಂದು ಹೇಳಲಾಗಿದೆ.
ಸಖಿ ಆಟೋದ ವಿಶೇಷತೆಗಳೇನು?
- ಮಹಿಳಾ ಚಾಲಕಿ, ಮಹಿಳಾ ಪ್ರಯಾಣಿಕರು ಮಾತ್ರ: ಈ ಆಟೋ ಸೇವೆ ಸಂಪೂರ್ಣವಾಗಿ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದೆ. ಚಾಲಕಿಯರು ತರಬೇತಿ ಪಡೆದ ಮಹಿಳೆಯರಾಗಿರುತ್ತಾರೆ. ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ.
- ಸುರಕ್ಷತೆಗೆ ಆದ್ಯತೆ: ಹೆಚ್ಚುವರಿ ಸುರಕ್ಷಾ ಕ್ರಮಗಳು, ತರಬೇತಿ ಪಡೆದ ಮಹಿಳೆಯರು, ರೈಡ್ ಟ್ರ್ಯಾಕಿಂಗ್ ಮತ್ತು ತುರ್ತು ಸಹಾಯ ವ್ಯವಸ್ಥೆ ಜೊತೆಗೆ ಇದು ಸೇವೆ ಸಲ್ಲಿಸಲಿದೆ.
- ಸೇವೆಯ ಸಮಯ: ಆರಂಭದಲ್ಲಿ ಈ ಸೇವೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ತನಕ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ. ಒಂದು ವೇಳೆ ಬೇಡಿಕೆ ಹೆಚ್ಚಾದರೆ 24 ಗಂಟೆಗಳ ಸೇವೆಗೆ ವಿಸ್ತರಿಸುವ ಯೋಜನೆ ಇದೆ.
- ಬುಕ್ ಮಾಡುವುದು ಹೇಗೆ?: ವಾಟ್ಸಾಪ್ ಮೂಲಕ ಸುಲಭವಾಗಿ ಬುಕ್ ಮಾಡಬಹುದಾಗಿದೆ. ಅಲ್ಲದೇ ride.sakhiwomen.in ಗೆ ಭೇಟಿ ನೀಡಿ ಬುಕ್ ಮಾಡಬಹುದು. ಈಗಾಗಲೇ ಸಖಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧ ಹಂತದಲ್ಲಿದ್ದು, ಸದ್ಯಕ್ಕೆ ಈ ಸೇವೆ ವೆಬ್‌ಸೈಟ್ ಮೂಲಕ, ವಾಟ್ಸಾಪ್ ಮೂಲಕ ಕಾರ್ಯನಿರ್ವಹಿಸುತ್ತಿದೆ.
ಸಖಿ ಆಟೋ ದರ ಎಷ್ಟು?
ಫೆಬ್ರವರಿ 14 ರಂದು ಪ್ರಾರಂಭವಾಗಲಿರುವ ಈ ಸಖಿ ಆಟೋ ಸೇವೆ, ಈಗಾಗಲೇ ದರ ನಿಗದಿ ಮಾಡಲಾಗಿದೆ. ಈ ರೈಡಿಂಗ್ ಪ್ಲಾಟ್‌ಫಾರ್ಮ್ ಬೇರೆ ಆಪ್‌ಗಳಂತೆ ಬೆಲೆ ಹೆಚ್ಚಳ ಮಾದರಿಯಲ್ಲಿ ಕೆಲಸ ಮಾಡುವುದಿಲ್ಲ. ಅಂದರೆ ಮೊದಲ 2 ಕಿಲೋಮೀಟರ್‌ಗೆ ಕನಿಷ್ಠ 50 ರೂ. ಆದ್ರೆ, ನಂತರದ ಪ್ರತೀ ಹೆಚ್ಚುವರಿ ಕಿಲೋಮೀಟರ್‌ಗೆ ಹೆಚ್ಚುವರಿ 20 ರೂ. ನಿಗದಿ ಪಡಿಸಲಾಗಿದೆ ಎಂದು ಸ್ಥಾಪಕಿ ಕೃಷ್ಣವಿ ಪರೇಖ್ ಹೇಳಿದ್ದಾರೆ.


Click it and Unblock the Notifications