ಪ್ರಭಾಸ್ ಅಭಿನಯದ 'ಸಲಾರ್' ಶುಕ್ರವಾರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಛಾಪನ್ನು ಮೂಡಿಸಲು ಸಿದ್ಧವಾಗಿದೆ ಎಂದು ಹೈ-ಆಕ್ಟೇನ್ ಸೀಕ್ವೆನ್ಸ್ ಭರವಸೆ ನೀಡುವ ಸಿನಿಮಾದ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಹೊಂಬಾಳೆ ಫಿಲ್ಮ್ಸ್ ಸೂಚಿಸಿದೆ. ಈ ನಡುವೆ ಮೊದಲ ದಿನದಂದು ಸಲಾರ್ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಗುರುವಾರ, ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ (ಹಿಂದಿನ ಟ್ವಿಟರ್) ಬುಧವಾರ ರಾತ್ರಿಯ ಹೊತ್ತಿಗೆ, 'ಸಲಾರ್: ಭಾಗ 1 - ಕದನ ವಿರಾಮ' ಮುಂಗಡ ಬುಕಿಂಗ್‌ನ ಭಾಗವಾಗಿ ಭಾರತದಲ್ಲಿ 30.25 ಲಕ್ಷ ಟಿಕೆಟ್‌ಗಳನ್ನು ಮಾರಾಟವಾಗಿದೆ. ಅದು ಕೂಡಾ ಮಲ್ಟಿಫ್ಲೆಕ್ಸ್‌ಗಳಾದ ಪಿವಿಆರ್, ಐನಾಕ್ಸ್, ಸಿನಿಪಾಲಿಸ್ ಅನ್ನು ಹೊರತುಪಡಿಸಿ ಎಂದು ತಿಳಿಸಿದೆ.

ನಿರೀಕ್ಷೆಯಂತೆ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ 13.25 ಲಕ್ಷ ಟಿಕೆಟ್‌ಗಳು ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 6 ಲಕ್ಷ ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಿಕೊಂಡಿದೆ. ಅಲ್ಲಿಯ ಜನರು ಹೆಚ್ಚಾಗಿ ಈ ಸಿನಿಮಾವನ್ನು ನೋಡಲು ಮುಂದಾಗಿದ್ದಾರೆ.
ಮುಂಗಡ ಟಿಕೆಟ್ ವಿವರ
"20-Dec-2023 ರಂದು 11:59 PM ವರೆಗೆ ನ್ಯಾಶನಲ್ ಚೈನ್ ಮಲ್ಟಿಪ್ಲೆಕ್ಸ್‌ಗಳನ್ನು (ಪಿವಿಆರ್, ಐನಾಕ್ಸ್, ಸಿನಿಪಾಲಿಸ್) ಹೊರತುಪಡಿಸಿ, ಮೊದಲ ದಿನ (22-Dec-2023) ಭಾರತದಲ್ಲಿ ಸಲಾರ್ ಮುಂಗಡ ಟಿಕೆಟ್‌ಗಳನ್ನು (ಅಂದಾಜು) ಬುಕ್ ಮಾಡಲಾಗಿದೆ. ಆಂಧ್ರ ಪ್ರದೇಶದಲ್ಲಿ 13.25 ಲಕ್ಷ, ನಿಜಾಮ್ (ತೆಲಂಗಾಣ) ನಲ್ಲಿ 6 ಲಕ್ಷ, ಉತ್ತರ ಭಾರತದಲ್ಲಿ 5.25 ಲಕ್ಷ, ಕರ್ನಾಟಕದಲ್ಲಿ 3.25 ಲಕ್ಷ, ಕೇರಳದಲ್ಲಿ 1.5 ಲಕ್ಷ, ತಮಿಳುನಾಡಿನಲ್ಲಿ 1 ಲಕ್ಷ ಟಿಕೆಟ್ ಮುಂಗಡವಾಗಿ ಬುಕ್ ಮಾಡಲಾಗಿದೆ. ಒಟ್ಟಾಗಿ 30.25 ಲಕ್ಷ ಟಿಕೆಟ್‌ಗಳು ಭಾರತದಾದ್ಯಂತ ಮಾರಾಟವಾಗಿವೆ," ಎಂದು ಹೊಂಬಾಳೆ ಫಿಲ್ಮ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇತಿಹಾಸ ಬರೆದ ಸಲಾರ್
ಬಾಕ್ಸ್‌ಆಫೀಸ್ಇಂಡಿಯಾ (@BoxOfficeIndia), ಭಾರತದ ಚಲನಚಿತ್ರೋದ್ಯಮದ ಕಲೆಕ್ಷನ್‌ಗಳನ್ನು ಟ್ರ್ಯಾಕ್ ಮಾಡುವ ಎಕ್ಸ್ ಖಾತೆಯಾಗಿದ್ದು, 'ಸಲಾರ್' 3 ಮಿಲಿಯನ್ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ ಎಂದು ಹೇಳಿದೆ. "ಇದು 175 ಕೋಟಿಗಳ (sic) ಆರಂಭಿಕ ಕಲೆಕ್ಷನ್ ನಿರೀಕ್ಷೆಯೊಂದಿಗೆ ನಾಳೆ ಭಾರತ ಮತ್ತು ವಿಶ್ವಾದ್ಯಂತ ಬೃಹತ್ ಆರಂಭ ಮಾಡಲು ಸಿದ್ಧವಾಗಿದೆ," ಎಂದು ಡಿಸೆಂಬರ್ 21 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಬುಧವಾರ, 'ಸಲಾರ್' ನಿರ್ಮಾಪಕರು ತಮ್ಮ ಚಿತ್ರವನ್ನು ದಕ್ಷಿಣದ ಪಿವಿಆರ್, ಐನಾಕ್ಸ್ ಮತ್ತು ಮೀರಜ್ ಸಿನಿಮಾಸ್ ಥಿಯೇಟರ್‌ಗಳಲ್ಲಿ ಪ್ರದರ್ಶಿಸುವುದಿಲ್ಲ ಎಂದು ಹೇಳಿದರು. ಮಲ್ಟಿಪ್ಲೆಕ್ಸ್‌ಗಳು ಪ್ರಭಾಸ್-ನಟನೆಯ ಚಿತ್ರಕ್ಕಿಂತ ಶಾರುಖ್ ಖಾನ್‌ರ ಡಂಕಿಗೆ ಅಧಿಕ ಒಲವು ತೋರಿಸಿದೆ ಎಂದು ಆರೋಪಿಸಿದರು. ಆದರೆ ಪಿವಿಆರ್ ಐನಾಕ್ಸ್ ಗುರುವಾರ, "ಇದು ಮಾಧ್ಯಮದ ಊಹೆಯ ವರದಿ" ಎಂದು ಸ್ಪಷ್ಟಪಡಿಸಿದೆ. ಭಾರತದಾದ್ಯಂತ ತನ್ನ ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದೆ.


Click it and Unblock the Notifications