Actress Ramya: ಮೋಹಕತಾರೆ ಎಂದೇ ಖ್ಯಾತಿ ಗಳಿಸಿರುವ ಸ್ಯಾಂಡಲ್‌ವುಡ್ ನಟಿ ರಮ್ಯಾ. ಕನ್ನಡ ಚಿತ್ರರಂಕ್ಕೆ ಹೆಜ್ಜೆಯಿಟ್ಟಾಗ ಅವರಿಗೆ ಇದ್ದ ಹೆಸರು ದಿವ್ಯ ಸ್ಪಂದನ. ಇವರಿಗೆ, ಪಾರ್ವತಮ್ಮ ರಾಜ್‌ಕುಮಾರ್ ಅವರು ರಮ್ಯಾ ಎಂದು ನಾಮಕರಣ ಮಾಡಿದರು. ಹಾಗಿನಿಂದ ಇವರು ರಮ್ಯಾ ಎಂದೇ ಹೆಸರುವಾಸಿ. ಇವರು ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ, ಒಂದರ ಮೇಲೊಂದು ಹಿಟ್ ಸಿನಿಮಾ ಕೊಟ್ಟಿದ್ದ ಕ್ವೀನ್. ನಟನೆ ಮಾತ್ರವಲ್ಲದೇ ರಾಜಕೀಯಕ್ಕೂ ಎಂಟ್ರಿ ಕೊಟ್ಟಿ ತನ್ನ ಛಾಫು ಮೂಡಿಸಿದರು. ಹಾಗಿದ್ದರೆ, ನಟಿ ರಮ್ಯಾ ಬಳಿ ಇರುವ ಆಸ್ತಿ ಎಷ್ಟು? ಇವರ ಸಂಭಾವನೆ, ನಿಜವಾದ ವಯಸ್ಸು ಎಷ್ಟು? ಎಂಬ ಹೆಚ್ಚಿನ ವಿವರ ಇಲ್ಲಿದೆ.
ಮೋಹಕತಾರೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಇಂದುವರೆಗೂ ಸುಮಾರು 40 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು 2003 ರಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ 'ಅಭಿ' ಚಿತ್ರದಲ್ಲಿ ನಾಯಕ ನಟಿಯಾಗಿ ಕನ್ನಡದ ಚದನವನಕ್ಕೆ ಎಂಟ್ರಿ ಕೊಟ್ಟಿದ್ದರು. ಆದು ಆದ ನಂತರ 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ಗಟ್ಟಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಇವರು ತಮಿಳು ಚಿತ್ರರಂಗದಲ್ಲೂ ಕೂಡ ಮಿಂಚಿದ್ದಾರೆ.

ನಟಿ ರಮ್ಯಾ 'ಊರಿಗೆ ಒಬ್ಬಳೇ ಪದ್ಮಾವತಿ' ಎಂಬ ಎಟಂ ಸಾಂಗ್ಸ್‌ಗೆ ಹೆಜ್ಜೆ ಹಾಕಿ, ಪಡ್ಡೆ ಹುಡುಗರ ದಿಲ್ ಕದ್ದಿದ್ದರು. ಈ ಹಾಡಿನ ಮುಲಕ ಫುಲ್ ಫೇಮಸ್ ಕೂಡ ಆಗಿದ್ದರು. ನಟನೆಯಿಂದ ಕೊಂಚ ವಿರಾಮ ಪಡೆದ ನಟಿ ರಮ್ಯಾ ಸೌಂಡ್ ಮಾತ್ರ ನಿಲ್ಲಲಿಲ್ಲ. ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುತ್ತಾರೆ. ವಿವಾದಾತ್ಮಕ ಹೇಳಿಕೆ ಮೂಲಕ ಚರ್ಚೆಯಲ್ಲಿ ಇದ್ದೇ ಇರುತ್ತಾರೆ. ವಿಶೇಷವೆಂದರೆ, ಈಗಲೂ 'ಪದ್ಮಾವತಿ' ಪದ ನೆಟ್ಟಿಗರಿಗೆ ಆಹಾರವಾಗಿದೆ.
ನಟಿ ರಮ್ಯಾ ಹಾಗೂ ಕಿಚ್ಚ ಸುದೀಪ್ ಅವರ ನಟ್ಟನೆಯ ಮುಸ್ಸಂಜೆ ಮಾತು ಸಿನಿಮಾ ಇಂದಿಗೂ ಎಲ್ಲರ ಹಾಟ್ ಫೇವರೆಟ್ ಸಿನಿಮಾ.
ಇವರು ಜೀವನ ಪ್ರಯಾಣ ಕೇವಲ ನಟನೆ ಮಾತ್ರವಲ್ಲದೇ ರಾಜಕೀಯದಲ್ಲೂ ಇವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸದಸ್ಯರಾಗಿದ್ದು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಕೂಡ ಆಯ್ಕೆ ಜನರ ಸೇವೆಯನ್ನು ಮಾಡಿದ್ದಾರೆ. 23 ಆಗಸ್ಟ್ 2013 ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿದ್ದ ರಮ್ಯಾ ಕೆಲ ದಿನಗಳ ಕಾಲ ಸಿನಿರಂಗ ಮಾತ್ರವಲ್ಲ ಭಾರತದಿಂದಲೇ ದೂರ ತೆರಳಿದ್ದರು. ಬಳಿಕ ಮತ್ತೆ ಕರ್ನಾಟಕಕ್ಕೆ ಮರಳಿದರು. ತಮ್ಮದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿ ಸಿನಿಮಾ ನಿರ್ಮಾಪಕಿ ಆಗಿಯೂ ಕೆಲಸ ಮಾಡುತ್ತಿದ್ದಾರೆ.
ನಟಿ ರಮ್ಯಾ ಆಸ್ತಿ ಎಷ್ಟು..?
ಕನ್ನಡ ಚಿತ್ರದ ಟಾಪ್ ನಟಿಯಾದ ರಮ್ಯಾ ಮಾಜಿ ಸಂಸದೆ ನಿರ್ಮಾಪಕಿಯೂ ಆಗಿರುವ ನಟಿ ರಮ್ಯಾ ಆಸ್ತಿ 5 ರಿಂದ 6 ಕೋಟಿ ರೂಪಾಯಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತದೆ.
ದಿವ್ಯ ಸ್ಪಂದನ (ರಮ್ಯಾ) 1989 ನವೆಂಬರ್ 29ರಂದು ಬೆಂಗಳೂರಿನ ಸದಾಶಿವನಗರದಲ್ಲಿನ ಐಡಿಯಲ್ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದ್ದಾರೆ. ಇವರ ತಂದೆ ಆರ್. ಟಿ. ನಾರಾಯಣ್ ರಾಜಕೀಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ತಾಯಿ ರಂಜಿತಾ ಅವರು ಕೊಡಗು ಮೂಲದವರಾಗಿದ್ದಾರೆ. ರಮ್ಯಾ ಅವರು ತಮ್ಮ ಬಾಲ್ಯವನ್ನು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.
ಬಾಲವಿಹಾರ್ ಮತ್ತು ಸೇಂಟ್ ಹಿಲ್ಡಾ'ಸ್ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಸೇಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಪದವಿಪೂರ್ವ ಶಿಕ್ಷಣವನ್ನು ವಿಜಯ ಕಾಲೇಜಿನಲ್ಲಿ ಮುಗಿಸಿದ ಬಳಿಕ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications