ಮಕರ ಸಂಕ್ರಾಂತಿ ಹಬ್ಬ ಬಂದರೆ ಸಾಕು ಎಲ್ಲೆಲ್ಲೂ ಸಂಭ್ರಮಸಡಗರ ಮನೆ ಮಾಡುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಹಿಂದೂಗಳ ಮೊದಲ ಹಬ್ಬ ಇದಾಗಿದೆ. ಈ ಹಬ್ಬವನ್ನು ಸುಗ್ಗಿಯ ಹಬ್ಬ ಎಂದು ಸಹ ಕರೆಯುತ್ತಾರೆ. ಅನೇಕ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗಿದ್ರೆ, ಈ ದಿನದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತಾ? ಅಥವಾ ಇಲ್ಲವಾ? ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಉತ್ತರ.
ಹೌದು, ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಪುರಾಣದ ಪ್ರಕಾರ ಹನ್ನೆರಡು ರಾಶಿಚಕ್ರ ಚಿಹ್ನೆಗಳ ಸಂಚಾರದಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳುತ್ತೇವೆ. ಈ ಹಬ್ಬವನ್ನು ಸರ್ಕತ್, ಲೋಹಾ, ತಹಿ, ಪೊಂಗಲ್ ಮುಂತಾದ ಹೆಸರುಗಳ ಮೂಲಕ ಆಚರಣೆ ಮಾಡಲಾಗುತ್ತದೆ. ಈ ದಿನದಂದು ರೈತರು ತಾವು ಬೆಳೆದ ಬೆಳೆಯನ್ನು ಪೂಜೆ ಮಾಡುವ ಪದ್ಧತಿ ಇದೆ. ಈ ದಿನ ಕಡಲೆಕಾಯಿ ಹಾಗೂ ಗೆಣಸು ಎಳ್ಳು ಬೆಲ್ಲ ಹೆಚ್ಚುವ ಪದ್ದತಿ ಇದೆ. ಮಕರ ಸಂಕ್ರಾಂತಿಯು ಸೂರ್ಯನ ಮಕರ ಸಂಕ್ರಮಣವನ್ನು ಸೂಚಿಸುತ್ತದೆ. ಋತುವಿನ ಹೊಸ ಸುಗ್ಗಿಯ ಸಂಕೇತವಾಗಿ ಈ ಸುಗ್ಗಿಯ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಯು ಚಳಿಗಾಲದ ಸುಗ್ಗಿಯ ಅಂತ್ಯ ಮತ್ತು ಭಾರತದಲ್ಲಿ ರಬಿ ಬೆಳೆ ಋತುವಿನ ಆರಂಭವನ್ನು ಸೂಚಿಸುತ್ತದೆ. ರಾಷ್ಟ್ರದಾದ್ಯಂತ ರೈತರು ಸುಗ್ಗಿಯ ಪೂರ್ಣಗೊಂಡುದನ್ನು ಆಚರಿಸಲು ಮತ್ತು ಸಮೃದ್ಧ ಋತುವಿಗಾಗಿ ಧನ್ಯವಾದಗಳನ್ನು ಅರ್ಪಿಸಲು ವಿಶೇಷ ದಿನವಾಗಿ ಆಚರಣೆ ಮಾಡುತ್ತಿರುತ್ತಾರೆ.
ಮಕರ ಸಂಕ್ರಾಂತಿ ಯಾವ ದಿನ ಬಂದಿದೆ?
ಮಕರ ಸಂಕ್ರಾಂತಿ 2025ರಲ್ಲಿ ಪ್ರತಿ ವರ್ಷದಂತೆ ಜನವರಿ 14 ರಂದು ಬಂದಿದೆ.ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇದು ಸಂಸ್ಕೃತದಲ್ಲಿ ಮಕರ ರಾಶಿ (ರಾಶಿಚಕ್ರ) ಆಗಿದೆ. ಇದು ಭಾರತದಲ್ಲಿ ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಜನರು ಈ ದಿನ ಪುಣ್ಯ ಕಾಲ ಮುಹೂರ್ತದಲ್ಲಿ ಧಾರ್ಮಿಕ ವಿಧಿಗಳನ್ನು ಅನುಸರಿಸಿ ಹಬ್ಬವನ್ನು ಆಚರಣೆ ಮಾಡತ್ತಾರೆ. ದೃಕ್‌ಪಂಚಾಂಗ್ ಪ್ರಕಾರ 09:03 ಬೆಳಗ್ಗೆ ಶುರುವಾಗಿ ಸಂಜೆ 06:21ಗೆ ಹಬ್ಬದ ಶುಭದಿನ ಕೊನೆಗೊಳ್ಳುತ್ತದೆ.
ರಾಜ್ಯಗಳಾದ್ಯಂತ ಮಕರ ಸಂಕ್ರಾಂತಿ ಆಚರಣೆಗಳು
ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಅನೇಕ ಪ್ರದೇಶಗಳಲ್ಲಿ ಜನರು ಈ ಹಬ್ಬವನ್ನು ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸಿ ಆಚರಣೆ ಮಾಡುತ್ತಾರೆ. ಹಾಗೂ ಗುಜರಾತಿನಲ್ಲಿ ನಡೆಯುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವು ಸಂಭ್ರಮ ಸಡಗರದಿಂದ ಜೋರಾಗಿ ಆಚರಣೆ ಮಾಡುತ್ತಾರೆ. ಬಹಳಷ್ಟು ಪ್ರವಾಸಿಗರು ಗಾಳಿಪಟ ಉತ್ಸವವನ್ನು ಅನುಭವಿಸಲು ಪ್ರಸಿದ್ಧ ರಣ್ ಆಫ್ ಕಚ್‌ಗೆ ಭೇಟಿ ನೀಡುತ್ತಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ, ಈ ಹಬ್ಬವನ್ನು ಲೋಹ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಜನವರಿ 13 ಅಥವಾ ಜನವರಿ 14 ರಂದು ದೀಪೋತ್ಸವ, ನೃತ್ಯ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹಾಡುವುದರೊಂದಿಗೆ ಹೊಸ ಸುಗ್ಗಿಯ ಮತ್ತು ವರ್ಷವನ್ನು ಆಚರಿಸಲಾಗುತ್ತದೆ.
ಈ ದಿನದ ಅತ್ಯಂತ ಜನಪ್ರಿಯ ಆಹಾರವೆಂದರೆ ತಿಲ್ ಗುರ್ (ಎಳ್ಳು ಮತ್ತು ಬೆಲ್ಲದ ಮಿಶ್ರಣ) ಮಾಡಿ ಇತರರಿಗೆ ಕೊಡುವ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ.ವಿಶೇಷವಾಗಿ ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಈ ರೀತಿಯ ಆಚರಣೆಗಳನ್ನು ಹೆಚ್ಚಾಗಿ ಮಾಡುತ್ತಾರೆ. ಭಾರತದ ದಕ್ಷಿಣದಲ್ಲಿ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ತಿನ್ನುವ ಪೊಂಗಲ್ ಅನ್ನು ಜನರು ಇಷ್ಟಪಡುತ್ತಾರೆ.
ಜನರು ಗಂಗಾನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ, ಇದು ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂಬ ನಂಬಿಕೆ ಇದೆ. ಸಂಕ್ರಾಂತಿಯಂದು ಭಕ್ತರು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸಮೃದ್ಧವಾದ ಫಸಲುಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಭಾರತದಲ್ಲಿ ಪ್ರಾದೇಶಿಕ ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಗುಜರಾತ್‌ನಲ್ಲಿ ಉತ್ತರಾಯಣ: ಗುಜರಾತ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವು ಅದ್ಭುತವಾದ ಆಚರಣೆಯಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರ ಗಮನ ಸಳೆಯುತ್ತದೆ. ಈ ದಿನ ಆಕಾಶವು ವಿವಿಧ ಬಣ್ಣಗಳು ಮತ್ತು ವಿನ್ಯಾಸಗಳ ಮೂಲಕ ಸಾವಿರಾರು ಗಾಳಿಪಟಗಳಿಂದ ತುಂಬಿರುತ್ತದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಪೊಂಗಲ್: ಈ ಹಬ್ಬವನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಪೊಂಗಲ್ (ಸಿಹಿ ಅನ್ನ) ತಯಾರಿಸಿ ಸೂರ್ಯ ದೇವರಿಗೆ ಅರ್ಪಿಸುತ್ತಾರೆ. ಕುಟುಂಬದ ಜೊತೆ ಸವಿದು ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳ ಎಲ್ಲಾರು ಮಾಡಿ ಹಬ್ಬದ ಆಚರಣೆಯನ್ನು ಮಾಡುತ್ತಾರೆ.
ಪಂಜಾಬ್‌ನಲ್ಲಿ ಲೋಹ್ರಿ: ಈ ಹಬ್ಬವನ್ನು ದೀಪೋತ್ಸವ, ಭಾಂಗ್ರಾ ಮತ್ತು ಗಿಡ್ಡಾ ನೃತ್ಯಗಳು ಮತ್ತು ತಿಲ್ ಮತ್ತು ಬೆಲ್ಲದಂತಹ ವಿಶೇಷ ಆಹಾರಗಳಿಂದ ಅಲ್ಲಿನ ಜನರು ಆಚರಣೆ ಮಾಡುತ್ತಾರೆ.
ಅಸ್ಸಾಂನಲ್ಲಿ ಮಾಗ್ ಬಿಹು: ಅಸ್ಸಾಂನ ಜನರು ಹಬ್ಬಗಳು, ದೀಪೋತ್ಸವಗಳು ಮತ್ತು ಸಾಂಪ್ರದಾಯಿಕ ಆಟಗಳೊಂದಿಗೆ ಆಚರಿಸುತ್ತಾರೆ. ಇದು ಅಸ್ಸಾಮಿ ಹೊಸ ವರ್ಷವನ್ನು ಸಹ ಸೂಚಿಸುತ್ತದೆ.
ಕರ್ನಾಟಕದಲ್ಲಿ ಸಂಕ್ರಾಂತಿ ಆಚರಣೆಗಳು: ಕರ್ನಾಟಕದಲ್ಲಿ ಜನರು 'ಎಳ್ಳು ಬೆಲ್ಲ' (ಎಳ್ಳು ಮತ್ತು ಬೆಲ್ಲ) ತಯಾರಿಸುತ್ತಾರೆ ಹಾಗೂ ಅದನ್ನು ಇತರರಿಗೆ ನೀಡುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಈ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಮಕರ ಸಂಕ್ರಾಂತಿ ಬ್ಯಾಂಕ್ ರಜಾದಿನಗಳು
ಮಕರ ಸಂಕ್ರಾಂತಿ ರಾಷ್ಟ್ರೀಯ ರಜಾದಿನವಲ್ಲ ಅಂದ್ರೆ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ಇದನ್ನು ರಜಾದಿನವಾಗಿ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಪಂಜಾಬ್, ಮತ್ತು ಹರಿಯಾಣ, ಉತ್ತರ ಪ್ರದೇಶ, ಮತ್ತು ಪಶ್ಚಿಮ ಬಂಗಾಳ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಅಥವಾ ಅದರ ಪ್ರಾದೇಶಿಕ ಸಮಾನತೆಗಾಗಿ ಬ್ಯಾಂಕ್‌ಗಳು ಮತ್ತು ಕಚೇರಿಗಳು ಮುಚ್ಚಿರುತ್ತಾವೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications