ಇಲ್ಲಿ ಕೇಳಿ..! ಮೇ 1 ರಿಂದ ಜಾರಿ.. ಇನ್ಮುಂದೆ ಟೋಲ್‌ಗಳೇ ಇರಲ್ಲ.. 20 ಕಿ.ಮೀ ಉಚಿತ ಪ್ರಯಾಣ! ಇಲ್ಲಿದೆ ಡೀಟೈಲ್ಸ್

ಇನ್ಮುಂದೆ ಟೋಲ್‌ಗಳೇ ಇರಲ್ಲ! 20 ಕಿ.ಮೀ ಉಚಿತ ಪ್ರಯಾಣ ಸಹ ಮಾಡಬಹುದು. ಇದು ಪ್ರಧಾನಿ ಮೋದಿ ಸರಕಾರದ ಮಹತ್ವದ ಹೆಜ್ಜೆಯಾಗಿದೆ. ನೀವು ಟೋಲ್‌ಗಳಲ್ಲಿ ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ. ಯಾಕೆಂದರೆ ಇನ್ಮುಂದೆ ಟೋಲ್‌ ಶುಲ್ಕ ಸಂಗ್ರಹ ವ್ಯವಸ್ಥೆಯು ಪೂರ್ಣ ಡಿಜಿಟಲ್‌ಮಯ ಆಗಲಿದೆ.

ಹೌದು, ಟೋಲ್‌ಗಳಲ್ಲಿ ಉಪಗ್ರಹ ಆಧಾರಿತ ಇಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ (ಇಟಿಸಿ) ವ್ಯವಸ್ಥೆಯು ಮೇ.1ರಿಂದ ದೇಶಾದ್ಯಂತ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ವ್ಯವಸ್ಥೆ ಜಾರಿಯಾದರೆ ಟೋಲ್‌ ಶುಲ್ಕ ಸಂಗ್ರಹಣೆ ಸುಲಭವಾಗುತ್ತದೆ.

ಇನ್ಮುಂದೆ ಟೋಲ್‌ಗಳೇ ಇರಲ್ಲ! 20 ಕಿ.ಮೀ ಪ್ರಯಾಣ ಸಹ ಉಚಿತ.

ಉಪಗ್ರಹ ವ್ಯವಸ್ಥೆ (ಜಿಎನ್‌ಎಸ್‌ಎಸ್‌) ಆಧಾರಿತ ಇಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಕಾರ್ಯರೂಪಕ್ಕೆ ಬಂದರೆ ಶುಲ್ಕ ಕಟ್ಟಲು ಸಾಲುಗಟ್ಟಿ ನಿಲ್ಲುವಂತಹ ಅಗತ್ಯವಿಲ್ಲ. ಇದರ ಜೊತೆಗೆ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಸಂಗ್ರಹಣೆ ವ್ಯವಸ್ಥೆಯು ಪೂರ್ಣ ಡಿಜಿಟಲ್‌ ಹಾಗೂ ಸ್ವಯಂಚಾಲಿತವಾಗಲದ್ದು, ವಾಹನ ಸಾವರರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಜಿಎನ್‌ಎಸ್‌ಎಸ್‌ ಆಧಾರಿತ ಇಟಿಸಿ ಏನು?

GNSS (Global Navigation Satellite System) ಆಧಾರಿತ ಟೋಲ್ ಸಂಗ್ರಹಣೆ ಎಂದರೆ ಉಪಗ್ರಹಗಳಿಂದ ನಿಮ್ಮ ವಾಹನದ ಸ್ಥಳ ಮತ್ತು ಚಲನೆಯ ದಿಕ್ಕುಗಳನ್ನು ಟ್ರ್ಯಾಕ್ ಮಾಡಿ, ನಿಮ್ಮ ಪ್ರಯಾಣದ ದೂರದ ಆಧಾರದಲ್ಲಿ ಟೋಲ್ ಶುಲ್ಕ ವಿಧಿಸುವ ವ್ಯವಸ್ಥೆಯಾಗಿದೆ.

ವಾಹನ ಸಾವರರಿಗೆ ಸಿಗುವ ಪ್ರಯೋಜನಗಳೇನು?

  • ನೀವು ದಿನನಿತ್ಯದಂತೆ ಟೋಲ್‌ ಶುಲ್ಕ ಕಟ್ಟಲುಟೋಲ್‌ಗೇಟ್‌ ಬಳಿ ಸಾಲುಗಟ್ಟಿ ನಿಲ್ಲಬೇಕಾಗಿಲ್ಲ
  • ಪ್ರಯಾಣದಷ್ಟು ಮಾತ್ರವೇ ಶುಲ್ಕ: ಅಂದರೆ ನೀವು ಎಷ್ಟು ದೂರ ಪ್ರಯಾಣಿಸುತ್ತಿರೋ ಅಷ್ಟರಷ್ಟು ಪಾವತಿ ಮಾತ್ರ ಇರುತ್ತದೆ.
  • ಡಿಜಿಟಲ್ ಪಾವತಿ ವ್ಯವಸ್ಥೆ: ಹಣ ಕಟ್ ಆಗುವುದು ಡಿಜಿಟಲ್ ವಾಲೆಟ್ ಅಥವಾ ಬ್ಯಾಂಕ್ ಖಾತೆಯಿಂದ.
  • ಸಮಯ ಉಳಿತಾಯ: ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.
  • ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆ: ವಾಹನಗಳಲ್ಲಿ ಇಂಧನ ವ್ಯರ್ಥವಾಗುವುದಿಲ್ಲ.

20 ಕಿ.ಮೀ ವರೆಗೆ ಉಚಿತ ಟೋಲ್ ಪ್ರಯಾಣ

ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ, ಪ್ರತಿದಿನದ ಪ್ರಯಾಣಕ್ಕೆ 20 ಕಿ.ಮೀ ವರೆಗೆ ಟೋಲ್ ಶುಲ್ಕವಿಲ್ಲ. ಇದು ದೈನಂದಿನ ಪ್ರಯಾಣಿಕರಿಗೆ ಶಾಲೆ, ಆಫೀಸ್, ವ್ಯಾಪಾರಕ್ಕೆ ಹೋಗೋವರ ಅನಕೂಲಗಾಗಿ ಈ ವ್ಯವಸ್ಥೆ ಜಾರಿಯಲ್ಲಿ ಇದೆ. ಇನ್ನೂ GNSS ಉಪಗ್ರಹ ತಂತ್ರಜ್ಞಾನದಿಂದ ನಿಮ್ಮ ವಾಹನದ ನಿಖರ ಸ್ಥಳ (exact location) ಯಾವಾಗಲೂ ಪತ್ತೆ ಹಚ್ಚಲಾಗುತ್ತದೆ.ರಿಯಲ್‌ ಟೈಮ್‌ ಲೊಕೇಷನ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ವಾಹನವು ಯಾವ ಸ್ಥಳದಲ್ಲಿದೆ ಎನ್ನುವುದನ್ನು ಇದರ ಮೂಳಕ ಕಂಡುಹಿಡಿಯಬಹುದು.

ಗೌಪ್ಯತೆ ಬಗ್ಗೆ ಚರ್ಚೆ

ಉಪಗ್ರಹ ಆಧರಿತ ಟೋಲ್‌ ಶುಲ್ಕ ಸಂಗ್ರಹ ವ್ಯವಸ್ಥೆ (Satellite-based Toll Collection System) ಬಗ್ಗೆ ಭದ್ರತೆ ಹಾಗೂ ಗೌಪ್ಯತೆಯ (privacy) ದೃಷ್ಟಿಯಿಂದ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಕಾರಣವಿರುವ ಪ್ರಮುಖ ಅಂಶಗಳು ಇಲ್ಲಿವೆ

1. ಗೌಪ್ಯತೆ ಕುರಿತಾಗಿ ಇರುವ ಆತಂಕಗಳು:
ಉಪಗ್ರಹ ಆಧರಿತ ವ್ಯವಸ್ಥೆಗಳು ವಾಹನದ ನಿಖರವಾದ ಸ್ಥಳವನ್ನು GPS ಮುಖಾಂತರ ಸದಾ ಟ್ರಾಕ್ ಮಾಡುತ್ತವೆ. ಇದರಿಂದ ವ್ಯಕ್ತಿಯ ಸಂಚಾರಿ ಮಾಹಿತಿ (movement data) ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ಕೈಗೆ ಬಿದ್ದರೆ, ಅದು ಗೌಪ್ಯತೆ ಉಲ್ಲಂಘನೆಯಾಗಬಹುದು ಎಂಬ ಚರ್ಚೆ ಇದೆ. ಈ ಡೇಟಾವನ್ನು ಯಾವುದೇ ರೀತಿಯಲ್ಲಿ ದುರುಪಯೋಗ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದೆ.

2. ಭದ್ರತೆ ಕುರಿತ ಚಿಂತೆಗಳು:
ಈ ವ್ಯವಸ್ಥೆಗಳಲ್ಲಿ ಸಂಗ್ರಹವಾಗುವ ಡೇಟಾ ಹ್ಯಾಕ್ ಆಗುವ ಸಾಧ್ಯತೆ ಇದ್ದು, ಸೈಬರ್ ಭದ್ರತೆ ದೊಡ್ಡ ಸವಾಲಾಗಿ ಇದ್ದೇ ಇರುತ್ತದೆ.ಕಾನೂನುಬದ್ಧ ರೂಪದಲ್ಲಿ ಈ ಡೇಟಾವನ್ನು ಸಂಗ್ರಹಿಸುವ, ಸಂರಕ್ಷಿಸುವ, ಮತ್ತು ಹಂಚುವ ನೀತಿಗಳು (data protection policies)ಗಳು ನಿಖರವಾಗಿ ಇರಬೇಕು

ಭಾರತದಲ್ಲೂ ಕೆಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೈಲಟ್ ಯೋಜನೆ ರೂಪದಲ್ಲಿ ಈ ರೀತಿಯ ಟೆಕ್‌ನ ಬಳಕೆಯ ಪ್ರಯೋಗ ನಡೆಯುತ್ತಿದೆ.

4. ಸಾಮಾಜಿಕ ಹಾಗೂ ಕಾನೂನು ಚರ್ಚೆಗಳು:
ಸಾರ್ವಜನಿಕರಿಗೆ ಈ ವ್ಯವಸ್ಥೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕಿದೆ. ಗೌಪ್ಯತೆ ಕಾಯ್ದೆಗಳು (Privacy Laws) ಈ ವ್ಯವಸ್ಥೆಗೆ ಹೇಗೆ ಅನ್ವಯವಾಗುತ್ತವೆ ಎಂಬುವುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ನೈಜ ಲಾಭ ಮತ್ತು ಗೌಪ್ಯತೆ ನಡುವಿನ ಸಮತೋಲನ ಎಷ್ಟು ಸಾಧ್ಯ ಎನ್ನುವುದರ ಬಗ್ಗೆ ತಜ್ಞರು ಚರ್ಚಿಸುತ್ತಿದ್ದಾರೆ.

ಹೀಗಾಗಿ, ಈ ತಂತ್ರಜ್ಞಾನ ಬಹಳ ಅನುಕೂಲಕಾರಿಯಾದರೂ, ಅದು ಸರಿಯಾದ ನಿಯಂತ್ರಣಗಳಿಲ್ಲದೆ ಜಾರಿಗೆ ಬಂದರೆ ಗೌಪ್ಯತೆಯ ಹಾನಿಗೆ ಕಾರಣವಾಗಬಹುದು ಎಂಬ ಭಯ ಕೂಡ ಕಾಡುತ್ತಿದೆ ಎಂದು ತಜ್ಞರ ಹೇಳಿದ್ದಾರೆ.

ಉಪಗ್ರಹ ಆಧರಿತ ಟೋಲ್‌ ಶುಲ್ಕ ಸಂಗ್ರಹ ವ್ಯವಸ್ಥೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇಂಡಿಯನ್‌ ರೀಜಿನಲ್‌ ನ್ಯಾವಿಗೇಷನ್‌ ಸೆಟಲೈಟ್‌ ಸಿಸ್ಟಂ (ಐಆರ್‌ಎನ್‌ಎಸ್‌‍ಎಸ್‌‍) ಎಂದು ಕರೆಯಲಾಗುವ ನಾವ್‌ ಐಸಿ ವ್ಯವಸ್ಥೆ ಜಾರಿಗೆ ಅಮೆರಿಕದ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಪ್ರಸ್ತಾವನೆ ನೀಡಿದೆ. ಒಂದು ವೇಳೆ ಈ ವ್ಯವಸ್ಥೇ ಜಾರಿಯಾದರೆ ಮುಂದಿನ ದಿನಮಾನಗಳಲ್ಲಿ ಟೋಲ್‌ಗಳೇ ಇರುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+