Bank Holidays: ಇಂದು ಬ್ಯಾಂಕ್‌ಗಳು ಓಪನ್‌ ಇರುತ್ತೋ ಅಥವಾ ಕ್ಲೋಸ್ ಇರುತ್ತಾ..? ಇಲ್ಲಿ ತಿಳಿಯಿರಿ

ಜುಲೈ 12 ರಂದು ತಿಂಗಳ ಎರಡನೇ ಶನಿವಾರವಾಗಿರುವುದರಿಂದ ಎಲ್ಲಾ ಸಾರ್ವನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.ಆರ್‌ಬಿಐ ರಜೆ ಕ್ಯಾಲೆಂಡರ್ ಪ್ರಕಾರ ಬ್ಯಾಂಕುಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ಸಾಮಾನ್ಯವಾಗಿ ರಜೆ ಇರುತ್ತದೆ. ಪ್ರತಿ ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರಗಳಂದು ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ, ಜುಲೈ 12 ಮತ್ತು ಜುಲೈ 26 ರಂದು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಾಗಿರುವುದರಿಂದ ಬ್ಯಾಂಕುಗಳು ಬಂದ್‌ ಆಗಿರುತ್ತದೆ. ಇದಲ್ಲದೆ, ತಿಂಗಳ ಉಳಿದ ಭಾನುವಾರಗಳಂದು ಬ್ಯಾಂಕುಗಳಿಗೆ ರಜೆ ಇರುತ್ತದೆ.

ಇಂದು ಬ್ಯಾಂಕ್‌ಗಳು ಓಪನ್‌ ಇರುತ್ತೋ ಅಥವಾ ಕ್ಲೋಸ್ ಇರುತ್ತಾ..?

ಜುಲೈ 2025 ರಲ್ಲಿ ಬ್ಯಾಂಕ್ ರಜಾದಿನಗಳು

ಜುಲೈ 3 ರಂದು ಗುರುವಾರ: ಖರ್ಚಿ ಪೂಜೆಯ ಸಂದರ್ಭದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ಬ್ಯಾಂಕುಗಳು ಕ್ಲೋಸ್‌ ಆಗಿರುತ್ತಾವೆ.ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಜುಲೈ 5 ರಂದು ಶನಿವಾರ: ಗುರು ಹರ್ಬಿಂದ ಜಿ ಜಯಂತಿಯಂದು ಜಮ್ಮು ಮತ್ತು ಕಾಶ್ಮೀರ ಮುಚ್ಚಲ್ಪಡುತ್ತದೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಬ್ಯಾಂಕ್‌ ಸೇವೆಗಳು ಲಾಭ್ಯವಿರುತ್ತದೆ.

ಜುಲೈ 6 ರಂದು ಭಾನುವಾರ: ದೇಶಾದ್ಯಂತ ಭಾನುವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಜುಲೈ 12ರಂದು ಶನಿವಾರ: ಎರಡನೇ ಶನಿವಾರ ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಿರುತ್ತದೆ.

ಜುಲೈ 13ರಂದು ಭಾನುವಾರ: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಜುಲೈ 14 ರಂದು ಸೋಮವಾರ: ಬೆಹ್ ಡೆಂಖ್ಲಾಮ್ ಹಬ್ಬದ ಸಂದರ್ಭದಲ್ಲಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಜುಲೈ 16 ರಂದು ಬುಧವಾರ: ಹರೇಲಾ ಹಬ್ಬದ ಸಂದರ್ಭದಲ್ಲಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಜುಲೈ 17 ರಂದು ಗುರುವಾರ: ಯು ತಿರೋತ್ ಸಿಂಗ್ ಅವರ ಪುಣ್ಯತಿಥಿಯಂದು ಶಿಲ್ಲಾಂಗ್, ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿಯೂ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ.

ಜುಲೈ 19ರಂದು ಶನಿವಾರ: ಕೇರ್ ಪೂಜೆಯ ಸಂದರ್ಭದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಜುಲೈ 20 ರಂದು ಭಾನುವಾರ: ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಜುಲೈ 26 ರಂದು ಶನಿವಾರ: ನಾಲ್ಕನೇ ಶನಿವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಜುಲೈ 27 ರಂದು ಭಾನುವಾರ: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಜುಲೈ 28 ರಂದು ಸೋಮವಾರ: ಡ್ರುಕ್ಪಾ ತ್ಶೆ-ಜಿ ಸಂದರ್ಭದಲ್ಲಿ ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ದೇಶದ ಇತರ ರಾಜ್ಯಗಳಲ್ಲಿನ ಬ್ಯಾಂಕ್ ಶಾಖೆಗಳು ಆ ದಿನಗಳಲ್ಲಿ ತೆರೆದಿರುತ್ತವೆ.

ಬ್ಯಾಂಕ್‌ ರಜೆದಿನದಂದು ಯಾವೆಲ್ಲಾ ಸೇವೆಗಳು ಲಭ್ಯ..?
ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್‌ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್‌ ಮೂಲಕ ನೀವು ನಿಮ್ಮ ಬ್ಯಾಂಕಿಂಗ್‌ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್‌ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+