ಸೌದಿ ಅರೇಬಿಯಾದ ಅರಾಮ್ಕೋ ಕಂಪೆನಿಯ ಮೌಲ್ಯ ಮಾಪನವನ್ನು ಮಾಡಲಾಗಿದೆ. ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ, 1.6 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮತ್ತು 1.71 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಧ್ಯೆ ಕಂಪೆನಿ ಮೌಲ್ಯ ಇದೆ (ಭಾನುವಾರದ ಲೆಕ್ಕಾಚಾರದ ಅನ್ವಯ ಒಂದು ಅಮೆರಿಕನ್ ಡಾಲರ್ ಗೆ 71.70 ರುಪಾಯಿ).
ಸೌದಿಯ ರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರು ಮೂರು ವರ್ಷದ ಹಿಂದೆಯೇ ಕಂಪೆನಿಯ ಒಟ್ಟು ಮೌಲ್ಯ 2 ಲಕ್ಷ ಕೋಟಿ ಅಮೆರಿಕನ್ ಡಾಲರ್ ಎಂದು ಗುರಿ ಇರಿಸಿಕೊಂಡಿದ್ದರು. ಅದನ್ನು ಭಾರತೀಯ ರುಪಾಯಿಗಳಲ್ಲಿ ಹೇಳುವುದಾದರೆ, ನೂರಾ ನಲವತ್ತು ಲಕ್ಷ ಕೋಟಿ ರುಪಾಯಿ.
ಇದೀಗ ಕಂಪೆನಿಯು ಷೇರು ವಿತರಣೆ ಮೂಲಕ ಇಪ್ಪತ್ನಾಲ್ಕರಿಂದ 25.6 ಬಿಲಿಯನ್ ಅಮೆರಿಕನ್ ಡಾಲರ್ ಹಣ ಸಂಗ್ರಹಕ್ಕೆ ಮುಂದಾಗಿದೆ. ಕಂಪೆನಿಯಲ್ಲಿನ 1.5 ಪರ್ಸೆಂಟ್ ಪಾಲನ್ನು ಮಾರುವ ಮೂಲಕ ಈ ಹಣ ಸಂಗ್ರಹಿಸಲಾಗುವುದು. ಸದ್ಯಕ್ಕೆ ವಿಶ್ವದಲ್ಲೇ ಅತಿ ದೊಡ್ಡ ಐಪಿಒ ಎಂಬ ಅಗ್ಗಳಿಕೆ ಇರುವುದು 25 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಿರುವ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಹೆಸರಿನಲ್ಲಿ.

ಷೇರಿನ ಬೆಲೆಯನ್ನು 30ರಿಂದ 32 ರಿಯಾಲ್ (ಪ್ರತಿ ಷೇರಿಗೆ) ಇಡಲಾಗುತ್ತದೆ.
ಷೇರಿನ ಅಂತಿಮ ಬೆಲೆಯನ್ನು ಹಾಗೂ ಮೌಲ್ಯಮಾಪನವನ್ನು ಡಿಸೆಂಬರ್ ಐದರಂದು ಮಾಡಲಾಗುತ್ತದೆ
ಅರಾಮ್ಕೋ ಷೇರುಗಳ ಲಿಸ್ಟಿಂಗ್ ದಿನಾಂಕವನ್ನು ಇನ್ನೂ ಘೋಷಣೆ ಮಾಡಬೇಕಿದೆ.
ಯು.ಎಸ್., ಆಸ್ಟ್ರೇಲಿಯಾ, ಕೆನಡಾ ಹಾಗೂ ಜಪಾನ್ ನಲ್ಲಿ ಷೇರಿನ ಆಫರ್ ಮಾಡುವುದಿಲ್ಲ.
ಅರಾಮ್ಕೋ ಷೇರು ವಿತರಣೆಯಿಂದ ಬರುವ ಹಣವನ್ನು ಸೌದಿ ಅರೇಬಿಯಾದ ಅಭಿವೃದ್ಧಿಗೆ ನೆರವಾಗುವಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಲು ತೀರ್ಮಾನಿಸಲಾಗಿದೆ.
ಇನ್ ಸ್ಟಿಟ್ಯೂಷನಲ್ ಬುಕ್ ಬಿಲ್ಡಿಂಗ್ ಅವಧಿ: ನವೆಂಬರ್ 17ರಿಂದ ಡಿಸೆಂಬರ್ 4
ರೀಟೇಲ್ ಸಬ್ ಸ್ಕ್ರಿಪ್ಷನ್ ಅವಧಿ ನವೆಂಬರ್ 17ರಿಂದ ನವೆಂಬರ್ 28
ಹೆಚ್ಚುವರಿ ಸಬ್ ಸ್ಕ್ರಿಪ್ಷನ್ ಮೊತ್ತವನ್ನು ಹೂಡಿಕೆದಾರರಿಗೆ ಹಿಂತಿರುಗಿಸುವ ದಿನಾಂಕ ಡಿಸೆಂಬರ್ 12
More From GoodReturns

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!



Click it and Unblock the Notifications