ಫೋನ್‌ಪೇ ಮತ್ತು ಎಸ್‌ಬಿಐ ಕಾರ್ಡ್ಸ್ ಸಂಸ್ಥೆಗಳು ಜಂಟಿಯಾಗಿ "ಫೋನ್‌ಪೇ ಎಸ್‌ಬಿಐ ಕಾರ್ಡ್" ಎಂಬ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. ಈ ಸಹಭಾಗಿತ್ವದ ಮೂಲಕ, ಫೋನ್‌ಪೇ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.
ನೀವು ಈ ಕಾರ್ಡ್ ಮುಖಾಂತರ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶ, ಪ್ರಯಾಣ ಮತ್ತು ಹೋಟೆಲ್ ಬುಕಿಂಗ್‌ಗಳ ಮೇಲೆ ರಿಯಾಯಿತಿ, ದಿನಸಿ ಖರೀದಿ ಹಾಗೂ ಇನ್ನಿತರ ಖರ್ಚುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆದುಕೊಳ್ಳಬಹುದು.

ನಿಮ್ಮಗೆ ಈ ಕ್ರೆಡಿಟ್ ಕಾರ್ಡ್ ಎರಡು ಮಾದರಿಗಳಲ್ಲಿ ನಿಮ್ಮ ಕೈಸೇರುತ್ತೆ. ಫೋನ್‌ಪೇ ಎಸ್‌ಬಿಐ ಕಾರ್ಡ್ ಪರ್ಪಲ್ ಮತ್ತು ಫೋನ್‌ಪೇ ಎಸ್‌ಬಿಐ ಕಾರ್ಡ್ ಸೆಲೆಕ್ಟ್ ಬ್ಲಾಕ್. ಗ್ರಾಹಕರು ತಮ್ಮ ಆದ್ಯತೆಗೆ ಅನುಸಾರವಾಗಿ ಈ ಎರಡರಲ್ಲಿ ಯಾವುದನ್ನಾದರೂ ಆಯ್ಕೆಯನ್ನು ಮಾಡಿಕೊಳ್ಳಬಹುದು. ಈ ಎರಡೂ ಕಾರ್ಡ್‌ಗಳು ರೂಪೇ ಮತ್ತು ವೀಸಾ ಪಾವತಿ ಜಾಲಗಳ ಮೂಲಕ ನಿಮ್ಮಗೆ ಕಾರ್ಯವನ್ನು ನಿರ್ವಹಿಸುತ್ತದೆ. ಇದರಿಂದಾಗಿ ಗ್ರಾಹಕರಿಗೆ ಸೂಕ್ತವಾದ ನೆಟ್‌ವರ್ಕ್ ಆಯ್ಕೆಗಳು ಕೂಡ ಸಿಗುಂತೆ ಆಗುತ್ತದೆ.
ಫೋನ್‌ಪೇ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳೆಕೆದಾರರಿಗೆ ಅನೇಕ ಸೌಲಭ್ಯಗಳಿವೆ. ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಮಾಡುವ ವಹಿವಾಟುಗಳ ಮೇಲೆ ಶೇಕಡಾ 10 ರಷ್ಟು ರಿಟರ್ನ್ ಕೂಡ ದೊರೆಯುತ್ತದೆ. ಇದಲ್ಲದೇ ಗ್ರಾಹಕರು ಆನ್‌ಲೈನ್‌ನಲ್ಲಿ ಮಾಡುವ ಖರ್ಚುಗಳ ಮೇಲೆ ಶೇಕಡಾ 5 ರಷ್ಟು ಮೌಲ್ಯದ ರಿಟರ್ನ್ ಹಣವನ್ನು ಕೂಡ ಪಡೆದುಕೊಳ್ಳಬಹುದು.
ಫೋನ್‌ಪೇ ಎಸ್‌ಬಿಐ ಕಾರ್ಡ್ ಸೆಲೆಕ್ಟ್ ಬ್ಲಾಕ್‌ನ ವಿಶೇಷವೇನು?
ಫೋನ್‌ಪೇ ಎಸ್‌ಬಿಐ ಕಾರ್ಡ್ ಸೆಲೆಕ್ಟ್ ಬ್ಲಾಕ್‌ನ ಪಡೆದ ಗ್ರಾಹಕರಿಗೆ 1,500 ರೂ. ಬೆಲೆಯ ಇ-ಗಿಫ್ಟ್ ವೋಚರ್ ಉಚಿತವಾಗಿ ಸಿಗುತ್ತದೆ. ಆದರೆ ಇದರ ವಾರ್ಷಿಕ ಶುಲ್ಕ 1,499 ರೂ. ಈ ಕಾರ್ಡ್ ಬಳಸಿ ಫೋನ್‌ಪೇ ಮತ್ತು ಪಿನ್‌ಕೋಡ್ ಅಪ್ಲಿಕೇಶನ್‌ಗಳಲ್ಲಿ ಖರ್ಚು ಮಾಡುವಾಗ ಶೇಕಡಾ 10 ರಷ್ಟು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. ಉಳಿದ ಆನ್‌ಲೈನ್ ಖರ್ಚುಗಳ ಮೇಲೆ ಶೇಕಡಾ 5 ರಷ್ಟು ಮತ್ತು ಇತರ ಖರ್ಚುಗಳ ಮೇಲೆ ಶೇಕಡಾ 1 ರಷ್ಟು ರಿವಾರ್ಡ್ ಪಾಯಿಂಟ್‌ಗಳು ಲಭ್ಯವಾಗುತ್ತವೆ.
ನೀವು ಕಾರ್ಡ್ ಮೂಲಕ ಗಳಿಸಿದ ರಿವಾರ್ಡ್ ಪಾಯಿಂಟ್‌ಗಳನ್ನು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಅಥವಾ ಎಸ್‌ಬಿಐ ಕಾರ್ಡ್ ರಿಡೆಂಪ್ಶನ್ ಕ್ಯಾಟಲಾಗ್‌ನಿಂದ ಇ-ಗಿಫ್ಟ್ ವೋಚರ್‌ಗಳನ್ನು ಪಡೆಯಲು ಬಳಕೆಯನ್ನು ನೀವು ಮಾಡಿಕೊಳ್ಳಬಹುದು.
ಫೋನ್‌ಪೇ ಎಸ್‌ಬಿಐ ಕಾರ್ಡ್ ಸೆಲೆಕ್ಟ್ ಬ್ಲಾಕ್ ಬಳಕೆದಾರರು ವರ್ಷಕ್ಕೆ 5 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿದರೆ, 5,000 ರೂಪಾಯಿಗಳ ಪ್ರಯಾಣ ವೋಚರ್ ಅನ್ನು ಪಡೆಯಬಹುದು. ಇದರೊಂದಿಗೆ ವರ್ಷಕ್ಕೆ ನಾಲ್ಕು ಬಾರಿ ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗೆ ಉಚಿತ ಭೇಟಿ ಮತ್ತು ಅಂತರರಾಷ್ಟ್ರೀಯ ಲಾಂಜ್ ಪ್ರವೇಶಕ್ಕೆ ಉಚಿತ ಆದ್ಯತೆಯ ಪಾಸ್ ಸದಸ್ಯತ್ವವನ್ನು ಸಹವನ್ನು ಪಡೆಯಲು ಸಹಾಯಕವಾಗುತ್ತದೆ.
ಫೋನ್‌ಪೇ ಎಸ್‌ಬಿಐ ಕಾರ್ಡ್ ಪರ್ಪಲ್ ಕ್ರೆಡಿಟ್ ಕಾರ್ಡ್‌ನಿಂದ ಗ್ರಾಹಕರಿಗೆ ಏನು ಸಿಗುತ್ತದೆ?
ಈ ಕಾರ್ಡ್ ಹೊಂದಿರುವವರು ವಾರ್ಷಿಕವಾಗಿ 3,00,000 ರೂ.ವರೆಗೆ ಖರ್ಚು ಮಾಡಿದರೆ, 3,000 ರೂ. ಮೌಲ್ಯದ ಪ್ರಯಾಣ ವೋಚರ್ ಅನ್ನು ಪಡೆಯುತ್ತಾರೆ. ಪರ್ಪಲ್ ಮತ್ತು ಬ್ಲಾಕ್ ಎರಡೂ ಮಾದರಿಯ ಕಾರ್ಡ್‌ಗಳು ಶೇಕಡಾ 1 ರಷ್ಟು ಇಂಧನ ಸರ್‌ಚಾರ್ಜ್ ಮನ್ನಾವನ್ನು ನೀಡುತ್ತವೆ.
ಪರ್ಪಲ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಾರ್ಡ್ ಪಡೆದಾಗ 500 ರೂ.ಗಳ ಇ-ಗಿಫ್ಟ್ ವೋಚರ್ ಪಡೆಯುತ್ತಾರೆ. ಫೋನ್‌ಪೇ ಮತ್ತು ಪಿನ್‌ಕೋಡ್ ಪ್ಲಾಟ್‌ಫಾರ್ಮ್‌ನಲ್ಲಿ ಶೇಕಡಾ 3 ರವರೆಗೆ ಮತ್ತು ಆನ್‌ಲೈನ್ ಖರ್ಚುಗಳಲ್ಲಿ ಶೇಕಡಾ 2 ರವರೆಗೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. ಇನ್ನುಳಿದ ಅರ್ಹ ಖರ್ಚುಗಳ ಮೇಲೆ ಸರಿಸುಮಾರು ಶೇಕಡಾ 1 ರಷ್ಟು ರಿವಾರ್ಡ್ ಪಾಯಿಂಟ್ಸ್ ಪಡೆಯಬಹುದು. ಫೋನ್‌ಪೇ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ ಎರಡೂ ಮಾದರಿಗಳು ಇಂಧನ ಸರ್‌ಚಾರ್ಜ್ ಮನ್ನಾ ಮತ್ತು ಖರ್ಚು ಆಧಾರಿತ ರಿಯಾಯಿತಿಗಳನ್ನು ನೀಡುತ್ತವೆ.


Click it and Unblock the Notifications