For Quick Alerts
ALLOW NOTIFICATIONS  
For Daily Alerts

SBI ಕಾರ್ಡ್ಸ್ IPO ಮಾರ್ಚ್ 2ನೇ ತಾರೀಕಿನಿಂದ ಆರಂಭ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ವಿಭಾಗವಾದ SBI ಕಾರ್ಡ್ಸ್ ಮತ್ತು ಪಾವತಿ ಸೇವೆಗಳ IPO ಮಾರ್ಚ್ 2ನೇ ತಾರೀಕಿನಿಂದ ಆರಂಭವಾಗಲಿದೆ. 9,000 ಕೋಟಿ ಮೌಲ್ಯದ ಐಪಿಒ ಇದಾಗಿದೆ. ಅಂದಹಾಗೆ 18 ಪರ್ಸೆಂಟ್ ಮಾರುಕಟ್ಟೆ ಪಾಲು ಹೊಂದಿರುವ ಎಸ್ ಬಿಐ, ಭಾರತದ ಎರಡನೇ ಅತಿ ದೊಡ್ಡ ಕ್ರೆಡಿಟ್ ಕಾರ್ಡ್ ವಿತರಿಸುವ ಕಂಪೆನಿಯಾಗಿದೆ.

500 ಕೋಟಿ ಮೌಲ್ಯದ ಹೊಸ ಷೇರುಗಳನ್ನು ವಿತರಿಸಲು ಕಂಪೆನಿ ಯೋಜನೆ ರೂಪಿಸಿದೆ. 13.05 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಿದೆ. ಬಿಡ್ಡಿಂಗ್ ಪ್ರಕ್ರಿಯೆಯು ಮಾರ್ಚ್ 5ನೇ ತಾರೀಕು ಕೊನೆಯಾಗಲಿದೆ. 13.05 ಕೋಟಿ ಷೇರುಗಳನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲಾಗುವುದು. ಇದರಲ್ಲಿ 3.72 ಕೋಟಿ ಷೇರುಗಳನ್ನು ಎಸ್ ಬಿಐ ಹಾಗೂ 9.32 ಕೋಟಿ ಷೇರುಗಳನ್ನು ಕಾರ್ಲೈಲ್ ಗ್ರೂಪ್ ಮಾರಾಟ ಮಾಡಲಿದೆ.

ಇದರ ಜತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸದಾಗಿ 500 ಕೋಟಿ ರುಪಾಯಿ ಮೌಲ್ಯದಷ್ಟು ಈಕ್ವಿಟಿ ಷೇರುಗಳನ್ನು ಹೊಸದಾಗಿ ವಿತರಿಸಲಾಗುತ್ತದೆ. ಅಂದ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು SBI ಕಾರ್ಡ್ಸ್ ನಲ್ಲಿ 76 ಪರ್ಸೆಂಟ್ ಪಾಲು ಹೊಂದಿದ್ದರೆ, ಬಾಕಿ ಪಾಲನ್ನು ಕಾರ್ಲೈಲ್ ಗ್ರೂಪ್ ಇರಿಸಿಕೊಂಡಿದೆ.

SBI ಕಾರ್ಡ್ಸ್  IPO ಮಾರ್ಚ್ 2ನೇ ತಾರೀಕಿನಿಂದ ಆರಂಭ

1998ರ ಅಕ್ಟೋಬರ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಜಿಇ ಕ್ಯಾಪಿಟಲ್ ಸೇರಿ ಎಸ್ ಬಿಐ ಕಾರ್ಡ್ಸ್ ಆರಂಭಿಸಿದ್ದವು. 2017ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕಾರ್ಲೈಲ್ ಗ್ರೂಪ್ ಸೇರಿಕೊಂಡು ಜಿಇ ಕ್ಯಾಪಿಟಲ್ಸ್ ನ ಷೇರು ಖರೀದಿಸಿದ್ದವು. ಭಾರತದ 150 ನಗರಗಳಲ್ಲಿ 90 ಲಕ್ಷ ಗ್ರಾಹಕರನ್ನು ಎಸ್ ಬಿಐ ಕಾರ್ಡ್ಸ್ ಹೊಂದಿದೆ.

English summary

SBI Cards IPO Starts From March 2nd

SBI cards and services IPO starts from March 2nd and ends on 5th. Here is the complete details.
Story first published: Thursday, February 20, 2020, 13:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X