ಎಸ್‌ಬಿಐ ಗ್ರಾಹಕರಿಗೆ ಗುಡ್‌ನ್ಯೂಸ್: ಬಡ್ಡಿ ದರ ಕಡಿತ

ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ(ಎಸ್‌ಬಿಐ) ರೆಪೊ ದರ ಆಧಾರಿತ ಸಾಲಗಳ ಮೇಲಿನ ಬಡ್ಡಿ ದರವನ್ನು 0.25 ಪರ್ಸೆಂಟ್‌ರಷ್ಟು ಇಳಿಸಿದೆ. ಈ ಮೂಲಕ ಗೃಹ ಸಾಲ ಅಗ್ಗವಾಗಲಿದೆ.

ಎಸ್‌ಬಿಐ ಬಾಹ್ಯ ಮಾನದಂಡ ಆಧಾರಿತ ದರವನ್ನು(Benchmark based rate) 25 ಬೇಸಿಕ್ ಪಾಯಿಂಟ್‌ಗಳನ್ನು ಇಳಿಕೆ ಮಾಡಿದ್ದು, ಈಗಿರುವ 8.05ರಿಂದ 7.80 ಪರ್ಸೆಂಟ್ ಇಳಿಕೆಯಾಗಿದೆ. ಪರಿಷ್ಕೃತ ದರ ಜನವರಿ 1, 2020ರಿಂದ ಜಾರಿಗೆ ಬರಲಿದ್ದು, ಇದರಿಂದ ಗೃಹ ಸಾಲದ ಮೇಲಿನ ಬಡ್ಡಿ ದರ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಸಾಲಗಳ ಮೇಲಿನ ಬಡ್ಡಿ ದರಗಳು ಅಗ್ಗವಾಗಲಿವೆ.

ಎಸ್‌ಬಿಐ ಗ್ರಾಹಕರಿಗೆ ಗುಡ್‌ನ್ಯೂಸ್: ಬಡ್ಡಿ ದರ ಕಡಿತ

ಇತ್ತೀಚಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 1.35 ಪರ್ಸೆಂಟ್ ರೆಪೊ ದರ ತಗ್ಗಿಸಿದೆ. ಆದರೆ ಬ್ಯಾಂಕುಗಳು ಮಂಜೂರು ಮಾಡಿದ ಸಾಲಗಳ ಸರಾಸರಿ ಬಡ್ಡಿ ದರ 0.44 ಪರ್ಸೆಂಟ್ ಮಾತ್ರ ಕಡಿಮೆಯಾಗಿದೆ. ಬ್ಯಾಂಕುಗಳು ಪ್ರತಿ 3 ತಿಂಗಳಿಗೊಮ್ಮೆ ರೆಪೊ ದರ ಆಧರಿಸಿದ ಬಡ್ಡಿ ದರಗಳನ್ನು ಪರಿಷ್ಕರಿಸಲು ಅವಕಾಶ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+