ಸೆಪ್ಟೆಂಬರ್ 16, 2021 ಅಂದರೆ ಇಂದು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ಹೊಸ ಇಂಟರೆಸ್ಟ್ ರೇಟ್ ಬಗ್ಗೆ ಪ್ರಸ್ತಾಪ ಮಾಡಿದೆ. ಈ ಎಲ್ಲಾ ಹೊಸ ಇಂಟರೆಸ್ಟ್ ರೇಟ್ ಗಳು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಕೂಡ ಹೇಳಿಕೆಯಲ್ಲಿ ತಿಳಿಸಿದೆ.
ಇಂದಿನಿಂದ ಹೋಮ್ ಲೋನ್ ಪಡೆಯುವವರಿಗೆ ವಿಶೇಷ ಬಡ್ಡಿ ದರ ಅನ್ವಯವಾಗುತ್ತದೆ. ಹೊಸ ಬಡ್ಡಿ ದರ 6.7 ಪ್ರತಿಶತ ಇರಲಿದೆ. ಈ ಹೊಸ ಬಡ್ಡಿ ದರ ಎಷ್ಟೇ ದೊಡ್ಡ ಮೊತ್ತದ ಸಾಲಕ್ಕೂ ಅನ್ವಯವಾಗುತ್ತದೆ ಎನ್ನುವುದು ವಿಶೇಷ. ಗಮನಿಸಿ ಈ ಹಿಂದೆ 75 ಲಕ್ಷ ಮೇಲ್ಪಟ್ಟ ಸಾಲಕ್ಕೆ ಬಡ್ಡಿ ದರ 7.15 ಪ್ರತಿಶತವಿತ್ತು. ಇದೀಗ 75 ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟ ಸಾಲಕ್ಕೂ 6.7 ಪ್ರತಿಶತ ಆಗುತ್ತದೆ. ಇದರಿಂದ 75 ಲಕ್ಷ ಸಾಲವನ್ನ ಮೂವತ್ತು ವರ್ಷಕ್ಕೆ ಪಡೆದವರಿಗೆ 8 ಲಕ್ಷ ರೂಪಾಯಿ ವರೆಗೆ ಉಳಿತಾಯವಾಗಲಿದೆ. 0.45 ಬೇಸ್ ಪಾಯಿಂಟ್ ಉಳಿತಾಯ ಬಹಳ ದೊಡ್ಡದು.

ಇದಲ್ಲದೆ ಇತರ ಗ್ರಾಹಕರಿಗೂ ಅಂದರೆ ವೇತನದಲ್ಲಿ ಇರದೇ , ಸ್ವತಃ ಉದ್ಯಮ ಇತ್ಯಾದಿಗಳನ್ನ ಮಾಡುತ್ತಿರುವ ಗ್ರಾಹಕರಿಗೂ ಕೂಡ ಶುಭಸುದ್ದಿಯಿದೆ. ಈ ಹಿಂದೆ ಕೆಲಸದಲ್ಲಿ ಇರದೇ ಅಂದರೆ ನಿಗದಿತ ವೇತನ ಇಲ್ಲದ ಗ್ರಾಹಕರು 0.15 ಪ್ರತಿಶತ ಹೆಚ್ಚಿನ ಬಡ್ಡಿಯನ್ನ ನೀಡಬೇಕಾಗಿತ್ತು. ಅಂದರೆ ಒಬ್ಬ ಸ್ಯಾಲರಿಡ್ ಗ್ರಾಹಕನಿಗೆ 6.7 ಇದ್ದ ಬಡ್ಡಿ, ನಾನ್ ಸ್ಯಾಲರಿಡ್ ಗ್ರಾಹಕನಿಗೆ 6.75 ಇತ್ತು. ಇಂದಿನಿಂದ ಈ ರೀತಿಯ ಶ್ರೇಣೀಕೃತ ಬಡ್ಡಿ ದರಕ್ಕೂ ಎಸ್‌ಬಿಐ ಬ್ಯಾಂಕ್ ಹೇಳಿದೆ. ಇನ್ನು ಮುಂದೆ ಎಲ್ಲರಿಗೂ ಒಂದೇ ರೀತಿಯ ಬಡ್ಡಿ ದರವನ್ನ ವಿಧಿಸುವುದಾಗಿ ಕೂಡ ಹೇಳಿಕೆಯಲ್ಲಿ ತಿಳಿಸಿದೆ.
ಸ್ವಲ್ಪ ನಿಧಾನಿಸಿ ಇನ್ನು ಸಿಹಿ ಸುದ್ದಿಯಿದೆ. ನೀವು ಬೇರೆ ಬ್ಯಾಂಕಿನಲ್ಲಿ ಹೆಚ್ಚಿನ ಬಡ್ಡಿ ನೀಡುತ್ತಿದ್ದರೆ ಅದನ್ನ ಎಸ್‌ಬಿಐಗೆ ವರ್ಗಾವಣೆ ಮಾಡಿಸಿಕೊಳ್ಳಬಹದು ! ಹೀಗೆ ಹೊಸದಾಗಿ ಟ್ರಾನ್ಸ್ಫರ್ ಮಾಡಿಸಿಕೊಂಡ ಗ್ರಾಹಕರಿಗೆ ಕೂಡ 6.7 ಪ್ರತಿಶತ ಬಡ್ಡಿಯನ್ನೇ ವಿಧಿಸಲಾಗುತ್ತದೆ.
ಹೇಳಿಕೇಳಿ ಇದು ಹಬ್ಬಗಳ ತಿಂಗಳುಗಳು , ಹೀಗಾಗಿ ಎಸ್‌ಬಿಐ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೊಸದಾಗಿ ಸಾಲ ಪಡೆಯುವರಿಗೆ ಪ್ರೊಸೆಸಿಂಗ್ ಫೀಸ್ ಕೂಡ ಮನ್ನಾ ಮಾಡುವುದಾಗಿ ಹೇಳಿದೆ. ಹೀಗಾಗಿ ಈ ತಿಂಗಳುಗಳಲ್ಲಿ ಸಾಲ ಮಾಡುವುದು ಹೆಚ್ಚು ಲಾಭದಾಯಕ.


Click it and Unblock the Notifications