For Quick Alerts
ALLOW NOTIFICATIONS  
For Daily Alerts

SBI ಸಾಲದ ಬಡ್ಡಿ ದರ ಕಡಿತ, ಗೃಹ ಸಾಲ ಅಗ್ಗ

|

ಭಾರತದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಇಂಡಿಯಾ (SBI) ಸಾಲಗಳ ಮೇಲಿನ ಬಡ್ಡಿ ದರವನ್ನು ಡಿಸೆಂಬರ್ 10ರಿಂದ ಅನ್ವಯವಾಗುವಂತೆ ಕಡಿತಗೊಳಿಸಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು(ಎಂಸಿಎಲ್‌ಆರ್) 0.10 ಪರ್ಸೆಂಟ್ ಕಡಿಮೆ ಮಾಡಿದೆ.

ಮೊಬೈಲ್ ಚಾರ್ಜ್‌ಗೆ ಹಾಕೋಕೆ ಮುನ್ನ ಎಚ್ಚರ, ನಿಮ್ಮ ಬ್ಯಾಂಕ್ ಹಣಕ್ಕೆ ಬೀಳುತ್ತೆ ಕನ್ನ!ಮೊಬೈಲ್ ಚಾರ್ಜ್‌ಗೆ ಹಾಕೋಕೆ ಮುನ್ನ ಎಚ್ಚರ, ನಿಮ್ಮ ಬ್ಯಾಂಕ್ ಹಣಕ್ಕೆ ಬೀಳುತ್ತೆ ಕನ್ನ!

ಡಿಸೆಂಬರ್ 10ರಿಂದ ಜಾರಿಯಾಗುವಂತೆ ಎಸ್‌ಬಿಐ ಬಡ್ಡಿ ದರವನ್ನು ಕಡಿತಗೊಳಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 8ನೇ ಬಾರಿಗೆ ಎಂಸಿಎಲ್‌ಆರ್ ಕಡಿತ ಇದಾಗಿದೆ. ಬಡ್ಡಿ ದರ ಕಡಿತದಿಂದಾಗಿ ಪ್ರತಿ ತಿಂಗಳು ಸಾಲದ ಮರು ಪಾವತಿಗೆ ಇಎಂಐ ರೂಪದಲ್ಲಿ ಹಣ ಪಾವತಿಸುವವರಿಗೆ ಇದರಿಂದ ಅನುಕೂಲವಾಗಲಿದೆ. ಈ ವರ್ಷದಲ್ಲಿ ಎಂಸಿಎಲ್‌ಆರ್ 0.60 ಪರ್ಸೆಂಟ್ ಕಡಿಮೆಯಾಗಿದೆ.

SBI ಸಾಲದ ಬಡ್ಡಿ ದರ ಕಡಿತ, ಗೃಹ ಸಾಲ ಅಗ್ಗ

ಇತ್ತೀಚೆಗಷ್ಟೇ ಆರ್‌ಬಿಐ ತ್ರೈಮಾಸಿಕ ಸಾಲ ಪರಿಶೀಲನಾ ಸಭೆಯಲ್ಲಿ ಬಡ್ಡಿ ದರವನ್ನ (ರೆಪೋ) ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಘೋಷಿಸಿತ್ತು. ಆದರೆ ಎಸ್‌ಬಿಐ ಬಡ್ಡಿ ದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

SBI ನಿಂದ ಹೊಸ ಎಟಿಎಂ ಕಾರ್ಡ್ ಪಡೆದಿಲ್ಲವೆ? ಡಿ. 31 ಡೆಡ್ ಲೈನ್SBI ನಿಂದ ಹೊಸ ಎಟಿಎಂ ಕಾರ್ಡ್ ಪಡೆದಿಲ್ಲವೆ? ಡಿ. 31 ಡೆಡ್ ಲೈನ್

ನಿಧಿಗಳ ಮೇಲಿನ ವೆಚ್ಚ ಕಡಿಮೆಯಾಗುತ್ತಿರುವ ಪ್ರಯೋಜನವನ್ನು ಸಾಲಗಾರರಿಗೆ ವರ್ಗಾಯಿಸಲು ಒಂದು ವರ್ಷದ 'ಎಂಸಿಎಲ್‌ಆರ್' ಕಡಿಮೆ ಮಾಡಿರುವುದಾಗಿ ಎಸ್‌ಬಿಐ ತಿಳಿಸಿದೆ. ಈ ಮೂಲಕ ಹೊಸ ಎಂಸಿಎಲ್ಆರ್ 8 ಪರ್ಸೆಂಟ್ ನಿಂದ 7.90 ಪರ್ಸೆಂಟ್‌ಗೆ ಇಳಿಕೆಯಾಗಿದೆ. ಆದರೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವನ್ನು ಬದಲಿಸಿಲ್ಲ.

English summary

SBI Cuts Interest Rate, Home Loan Get Cheaper

India's biggest bank SBI announced a cut in one year MCLR rate by 10 bps, effective from december 10th.
Story first published: Tuesday, December 10, 2019, 10:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X